fbpx
ಸಮಾಚಾರ

ಸಿ.ಎಂ ಕುಮಾರಸ್ವಾಮಿ ವರ್ಚಸ್ಸಿಗೆ ಧಕ್ಕೆ ತರಲು ಯತ್ನಿಸುತ್ತಿರುವ ಪತ್ರಕರ್ತರ ವಿರುದ್ಧ ಜೆಡಿಎಸ್​ನಿಂದ​ ದೂರು ದಾಖಲು.

ಈ ನಡುವೆ ಸಿಎಂ ಕುಮಾರಸ್ವಾಮಿಯವರ ಮಾತುಗಳನ್ನು ಅಥವಾ ಹೇಳಿಕೆಗಳನ್ನು ಮಾಧ್ಯಮಗಳು ತಿರುಚುವ ಯತ್ನ ನಡೆಸುತ್ತಿರುವ ವಿಚಾರಗಳು ಬೆಳಕಿಗೆ ಬಂದಿದ್ದು. ಈ ರೀತಿ ಆಗಲು ಮಾನ್ಯ ಮುಖ್ಯಮಂತ್ರಿಗಳ ಮುಂದೆ ಪತ್ರಕರ್ತರ ವೇಷದಲ್ಲಿ ಓಡಾಡುವ ಅಪರಿಚಿತರೇ ಕಾರಣವಿರಬಹುದೆಂದು ಊಹಿಸಲಾಗಿದೆ. ಸಿ.ಎಂ ಕುಮಾರಸ್ವಾಮಿ ವರ್ಚಸ್ಸಿಗೆ ಧಕ್ಕೆ ತರಲು ನಕಲಿ ಪತ್ರಕರ್ತರು ಈ ರೀತಿ ಮಾಡುತ್ತಿದ್ದಾರೆ ಎನ್ನಲಾಗಿದ್ದು ಇಂತಹವರನ್ನು ತಕ್ಷಣ ಹಿಡಿದು ಬಂಧಿಸಬೇಕೆಂದು ಜೆಡಿಎಸ್​ ಘಟಕ ಕಬ್ಬನ್​ ಪಾರ್ಕ್​ ಠಾಣೆಯಲ್ಲಿ ದೂರು ದಾಖಲಿಸಿದೆ.

ಈ ಬಗೆ ಮಾತನಾಡಿದ ಜೆಡಿಎಸ್​ ಘಟಕದ ಅಧ್ಯಕ್ಷ ಪ್ರಕಾಶ್​​ “ಕುಮಾರಸ್ವಾಮಿ ಮುಖಕ್ಕೆ ಮಸಿ ಬಳಿಯಲು ಕೆಲವರು ಪ್ರಯತ್ನಿಸುತ್ತಿದ್ದಾ.ರೆ. ಈ ಹಿನ್ನೆಲೆಯಲ್ಲಿ ಅವರು ಪತ್ರಕರ್ತರ ಸೋಗಿನಲ್ಲಿ ಅವರನ್ನು ಕೆಲವು ನಿಗೂಢ ವ್ಯಕ್ತಿಗಳು ಹಿಂಬಾಲಿಸುತ್ತಿದ್ದಾರೆ. ಸಿಎಂ ವಿರುದ್ಧ ಅಪಪ್ರಚಾರ ಮಾಡಲಿ ಎಂದೇ ಭೂಗತ ವ್ಯಕ್ತಿಗಳು ಇವರನ್ನು ಹಣ ನೀಡಿ ನೇಮಕ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.

ಗೃಹಕಚೇರಿ ಕೃಷ್ಣಾ ಆವರಣದಲ್ಲಿ ಬಂದ ಮೂವರು (ಇಬ್ಬರು ಯುವತಿಯರು, ಓರ್ವ ಯುವಕ) ಇವರು ಒತ್ತಾಯಪೂರ್ವಕವಾಗಿ ಸಿಎಂ ಜನತಾ ದರ್ಶನಕ್ಕೆ ಬರುವ ಅಂಗವಿಕರು, ವೃದ್ಧರು, ರೈತರನ್ನು ಒತ್ತಾಯಪೂರ್ವಕವಾಗಿ ಮಾತನಾಡಿಸಿ, ಮುಖ್ಯಮಂತ್ರಿ ವಿರುದ್ಧ ಪ್ರಚೋದನಕಾರಿ ಹೇಳಿಕೆ ಪಡೆಯುತ್ತಿದ್ದಾರೆ. ಇವರು ಈ ರೀತಿ ಓಡಾಡುತ್ತಿರುವುದು ಮುಖ್ಯಮಂತ್ರಿಗಳ ಭದ್ರತೆಗೂ ಅಪಾಯತರುವಂತಹ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಕ್ರ,ಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಮಾತು ಮುಂದುವರೆಸಿ ಅಮಾಯಕರ ಮೂಲಕ ಸಿಎಂಗೆ ಪ್ರಶ್ನೆ ಕೇಳಿಸಿ, ಅವರಿಂದ ಬಂದ ಉತ್ತರವನ್ನು ತಪ್ಪಾಗಿ ಅರ್ಥೈಸುವುದೇ ಇವರ ಕೆಲಸ. ಇಂತಹ ನಕಲಿ ಪತ್ರಕರ್ತರನ್ನು ಮೊದಲು ಪತ್ತೆ ಮಾಡಬೇಕಿದೆ. ಸಿಎಂ ಸುತ್ತ ಮೂವರು ನಕಲಿ ಪತ್ರಕರ್ತರು ಸುತ್ತುತ್ತಿದ್ದು, ಅವರೇ ಸಿಎಂ ಚಾರಿತ್ರ್ಯವಧೆಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಅವರನ್ನು ಕೂಡಲೇ ಬಂಧಿಸುವಂತೆ ಕೂಡ ಆಗ್ರಹಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top