fbpx
ಮನೋರಂಜನೆ

ಗಾಂಧಿನಗರದಲ್ಲಿ ಮತ್ತೊಂದು ಸ್ಟಾರ್ ವಾರ್- ಶಿವಣ್ಣನ ಕವಚ ಮತ್ತು ಗಣೇಶ್ ಆರೆಂಜ್ ಒಂದೇ ದಿನ ರಿಲೀಸ್.

ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅಭಿನಯದ ಕವಚ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ ಆರೆಂಜ್ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗಿ ಬಾಕ್ಸ್‌ ಆಫೀಸ್‌ನಲ್ಲಿ ಫೈಟ್‌ ಮಾಡಲಿವೆ. ಹೌದು ಎರಡೂ ಸಿನಿಮಾಗಳು ಇದೇ ಡಿಸೆಂಬರ್ 7ರಂದು ಜಗತ್ತಿನಾದ್ಯಂತ ಏಕಕಾಲಕ್ಕೆ ತೆರೆಕಾಣಲಿವೇ, ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮತ್ತೊಮ್ಮೆ ಸ್ಟಾರ್ ವಾರ್ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿವೆ..

ಆರೆಂಜ್’ ಚಿತ್ರವನ್ನ ಪ್ರಶಾಂತ್ ರಾಜ್ ನಿರ್ದೇಶನ ಮಾಡಿದ್ದು, ಪ್ರಿಯಾ ಆನಂದ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಹಿಂದೆ ಗಣೇಶ್ ಹಾಗೂ ಪ್ರಶಾಂತ್ ರಾಜ್ ಕಾಂಬಿನೇಷನ್ ನಲ್ಲಿ ‘ಜೂಮ್’ ಸಿನಿಮಾ ಬಂದಿತ್ತು.. ಇನ್ನು ಮಲಯಾಳಂನ ಸೂಪರ್ ಹಿಟ್ ‘ಒಪ್ಪಂ’ ಚಿತ್ರದ ಕನ್ನಡ ರೀಮೇಕ್ ‘ಕವಚ’.. ಇಲ್ಲಿ ಶಿವಣ್ಣ ಕುರುಡನ ಪಾತ್ರ ನಿರ್ವಹಿಸಿದ್ದಾರೆ.. ಎರಡೂ ಚಿತ್ರಗಳ ಮೇಲೂ ಒಂದು ರೀತಿ ನಿರೀಕ್ಷೆ ಹುಟ್ಟಿಕೊಂಡಿದ್ದು ಎರಡೂ ಒಂದೇ ದಿನ ತೆರೆ ಕಾಣುತ್ತಿರುವುದರಿಂದ ಪ್ರೇಕ್ಷಕನಿಗೆ ಯಾವ ಸಿನಿಮಾ ಮೊದಲು ನೋಡಬೇಕು ಎಂಬ ಕನ್ಫಯುಸ್ ಇದ್ದರೂ ಎರಡೂ ಸಿನಿಮಾಗಳನ್ನೂ ನೋಡಬೇಕು ಎಂಬುದು ಮನಸಿನಲ್ಲಿದೆ.

ಅದೇನೇ ಇದ್ದರೂ ಈ ಪಾಸಿಟಿವ್ ದೃಷ್ಟಿಯಲ್ಲಿ ನೋಡುವುದಾದರೆ ಎರಡು ಒಳ್ಳೆಯ ಕನ್ನಡ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿದ್ದು ಈ ಎರಡೂ ಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ನೋಡಿ ಎರಡೂ ಚಿತ್ರಗಳನ್ನು ಗೆಲ್ಲಿಸಿ. ಅಂದಹಾಗೆ ಆ ದಿನ ಎರಡು ಪ್ರಮುಖ ತೆಲುಗು ಚಿತ್ರಗಳೂ ಬಿಡುಗಡೆಯಾಗುತ್ತಿದೆ ಆದ್ದರಿಂದ ನಮ್ಮ ಕನ್ನಡ ಚಿತ್ರಗಳನ್ನ ನೋಡಿ ಕನ್ನಡ ಚಿತ್ರಗಳು ಪರಭಾಷಾ ಹಾವಳಿಗೆ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಿ. ಪರಭಾಷಾ ಚಿತ್ರಗಳ ಎದುರು ಕನ್ನಡ ಚಿತ್ರಗಳನ್ನ ಗೆಲ್ಲಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top