fbpx
ಸಮಾಚಾರ

ಅಣ್ಣಾವ್ರ ಸಮಾಧಿಯಲ್ಲಿ ಲಕ್ಷ ದೀಪೋತ್ಸವ.

ನೀವು ಇದುವರೆಗೆ ದೇವಸ್ಥಾನಗಳಲ್ಲಿ ಲಕ್ಷ ದೀಪೋತ್ಸವ ಜರುಗಿರುವುದನ್ನೂ ಕಂಡಿರಬಹುದು. ಆದರೆ ಇದೀಗ ಸಮಾಧಿ ಸ್ಥಳದಲ್ಲಿ ಲಕ್ಷ ದೀಪೋತ್ಸವ ನಡೆಯಲಿದೆ. ಏನಿದು ಎಂಬ ಕುತೂಹಲವೇ ಹಾಗಾದರೆ ಮುಂದೆ ಓದಿ!
ನಟ ಸಾರ್ವಭೌಮ ಡಾ. ರಾಜ್​ಕುಮಾರ್​ ಪುಣ್ಯಭೂಮಿಯಲ್ಲಿರೋ ಸಮಾಧಿ ಸ್ಥಳವನ್ನ ಅವರ ಮಾನಿಗಳು ದೇವಸ್ಥಾನ ಎಂದೇ ಭಾವಿಸಿರುವದು ಎಲ್ಲರಿಗು ಗೊತ್ತೇ ಇದ್ದು ,ಪ್ರತಿ ನಿತ್ಯ ಇಲ್ಲಿಗೆ ಜನಸಾಗರವೇ ಹರಿದು ಬರುತ್ತದೆ.

ಈ ಸಮಾಧಿ ಸ್ಥಳವನ್ನ ದೇವಸ್ಥಾನ ಅಂತ ಭಾವಿಸಿರೋ ಅಭಿಮಾನಿಗಗಳು ಇದೀಗ ಕಾರ್ತಿಕ ಮಾಸದ ಪ್ರಯುಕ್ತ ಲಕ್ಷ ದೀಪೋತ್ಸವ ಮಾಡಲಿದ್ದಾರೆ ಎಂಬ ವಿಚಾರ ಹೊರಬಂದಿದೆ.

ಯಾವಾಗ ಈ ಲಕ್ಷದೀಪೋತ್ಸವ?

ಇದೇ ಕಾರ್ತಿಕ ಸೋಮವಾರದಂದು ಅಂದರೆ ನವೆಂಬರ್​​ 26ರಂದು ರಾಜ್​ ಸಮಾಧಿಯಲ್ಲಿ ಲಕ್ಷ ದೀಪೋತ್ಸವ ನಡೆಯಲಿದೆ. ಬೆಂಗಳೂರು ದಕ್ಷಿಣ ಅಭಿಮಾನಿಗಳ ಸಂಘ, ಅಖಿಲ ಕರ್ನಾಟಕ ಡಾ.ಶಿವರಾಜ್​ಕುಮಾರ್​ ಅಭಿಮಾನಿಗಳ ಸಂಘ, ರಾಜರತ್ನ ಪುನೀತ್​ ರಾಜ್​ಕುಮಾರ್​​ ಅಭಿಮಾನಿ ಸಂಘ ಒಟ್ಟಾಗಿ ಲಕ್ಷ ದೀಪೊತ್ಸವ ಕಾರ್ಯಕ್ರಮ ನಡೆಸಲಿದೆ. ಅಂದು ಸಂಜೆ 6.30ರ ನಂತ್ರ ದೀಪೋತ್ಸವ ನಡೆಯಲಿದ್ದು, ರಾಜ್​ ಕುಟುಂಬದ ಸದಸ್ಯರು ಭಾಗವಹಿಸಲಿದ್ದಾರೆ ಎಂಬ ವಿಚಾರ ಎಲ್ಲೆಡೆ ಹರಿದಾಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top