fbpx
ಜ್ಯೋತಿಷ್ಯ

 4 ರಾಶಿಯವರಿಗೆ ಜೀವನದಲ್ಲಿ ಪ್ರೀತಿ ಸಿಗುವುದಿಲ್ಲ ಒಂದು ವೇಳೆ ಸಿಕ್ಕರೂ ಜೀವನದಲ್ಲಿ ಅಡೆತಡೆಗಳಿಂದ ತುಂಬಾ ಕಷ್ಟ ಪಡಬೇಕಾಗುತ್ತದೆ

ರಾಶಿಗಳಲ್ಲಿ ಒಟ್ಟು ಹನ್ನೆರಡು ರಾಶಿಗಳಿವೆ. ಈ ಹನ್ನೆರಡು ರಾಶಿಗಳನ್ನು ವಿಧ ವಿಧವಾಗಿ ವಿಂಗಡಿಸಲಾಗಿದೆ. ನಿಮಗೆ ಇಂದು ನಾವು ಹೇಳುತ್ತಿರುವುದೇನೆಂದರೆ ಈ ನಾಲ್ಕು ರಾಶಿಯವರಿಗೆ ಜೀವನದಲ್ಲಿ ನಿಜವಾದ ಪ್ರೀತಿ ಸಿಗುವುದಿಲ್ಲ .ಒಂದು ವೇಳೆ ಸಿಕ್ಕಿದರೂ ಸಹ ನಿಜವಾದ ಪ್ರೀತಿ ಸಿಗುವುದಿಲ್ಲ, ಒಂದು ವೇಳೆ ಸಿಕ್ಕಿದರೂ ಸಹ ಅದು ಶಾಶ್ವತವಾಗಿ ನೆಲೆ ನಿಲ್ಲುವುದಿಲ್ಲ, ಯಾಕೆ ಹೀಗೆ ? ಎಂದು ಇದರ ಸಿದ್ಧಾಂತವನ್ನು ಮತ್ತು ಇದಕ್ಕೆ ಪರಿಹಾರಗಳು ಏನೆಂದು ತಿಳಿದುಕೊಳ್ಳಿಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವುದೋ ಎರಡು ರಾಶಿಗಳು ತುಂಬಾ ಚೆನ್ನಾಗಿರುತ್ತವೆ. ಒಳ್ಳೆಯ ಸಂಗಾತಿಗಳಾಗಿ ಬದುಕುತ್ತಾರೆ. ಯಾಕೆಂದರೆ ಅವರ ಪ್ರವೃತ್ತಿಗಳು ಒಂದೇ ಸಮನಾಗಿ ಇರುತ್ತವೆ ಆದ್ದರಿಂದ.ಒಟ್ಟಾರೆ ಹನ್ನೆರಡು ರಾಶಿಗಳಲ್ಲಿ ಈ ನಾಲ್ಕು ರಾಶಿಗಳಿಗೆ ಪ್ರೀತಿ ಮತ್ತು ಪ್ರೇಮ ಅವರ ಜೀವನದಲ್ಲಿ ಸಿಗುವುದಿಲ್ಲ. ಅಗ್ನಿ ತತ್ವದ ಮೂರು ರಾಶಿಗಳು- ಮೇಷ, ಸಿಂಹ ಹಾಗೂ ಧನಸ್ಸು ರಾಶಿ .ಪೃತ್ವಿ ತತ್ವದ ಮೂರು ರಾಶಿಗಳು- ವೃಷಭ ಕನ್ಯಾ ಹಾಗೂ ಮಕರ ರಾಶಿ.ವಾಯು ತತ್ತ್ವದ ಮೂರು ರಾಶಿಗಳು- ಮಿಥುನ, ತುಲಾ ಹಾಗೂ ಕುಂಭ ರಾಶಿ.ಜಲ ತತ್ವದ ಮೂರು ರಾಶಿಗಳು- ಕಟಕ, ವೃಶ್ಚಿಕ ಹಾಗೂ ಮೀನ ರಾಶಿ .

ಇವುಗಳಲ್ಲಿ ಅಗ್ನಿ ತತ್ವದ ಮೂರು ರಾಶಿಗಳಿಗೆ ಅವರ ಜೀವನದಲ್ಲಿ ಪ್ರೀತಿ ಕಡಿಮೆ ಸಿಗುವುದು. ವಾಯು ತತ್ತ್ವದ ರಾಶಿಗಳಿಗೂ ಕೂಡ ಪ್ರೀತಿ ಕಡಿಮೆ ಸಿಗುತ್ತದೆ.ಒಟ್ಟಾರೆಯಾಗಿ ಆ ನಾಲ್ಕು ರಾಶಿಗಳನ್ನು ಇಂದು ನಾವು ನಿಮಗೆ ಹೇಳುತ್ತಿದ್ದೇವೆ.ಅವರಿಗೆ ಪ್ರೀತಿ ಯಾಕೆ ?ಕಡಿಮೆ ಸಿಗುತ್ತದೆ ಎಂದರೆ ಪಂಚಮ ಸ್ಥಾನವು ಪ್ರೇಮ ಮತ್ತು ಪ್ರೀತಿಯ ಸ್ಥಾನವಾಗಿರುತ್ತದೆ. ಅಲ್ಲಿ ಯಾವುದೇ ಅಗ್ನಿ ತತ್ವದ ಮತ್ತು ವಾಯು ತತ್ವದ ರಾಶಿಯಿದ್ದರೆ ಆಗ ಅವರಿಗೆ ಪ್ರೀತಿ ಸಿಗುವುದಿಲ್ಲ.ನಿಮ್ಮ ರಾಶಿಯಿಂದ ಪಂಚಮ ಭಾವದಲ್ಲಿ ಅಗ್ನಿ ತತ್ವದ ರಾಶಿ ಬಂದರೆ ನಿಮಗೆ ಪ್ರೀತಿ ಸಿಗುವುದಿಲ್ಲ . ನಿಮ್ಮ ರಾಶಿಯಿಂದ ಪಂಚಮ ಭಾವದಲ್ಲಿ ವಾಯು ತತ್ವದ ರಾಶಿ ಬಂದರೆ ಆಗಲೂ ನಿಮಗೆ ಪ್ರೀತಿ ದೊರೆಯುವುದಿಲ್ಲ. ನೀವು ಪ್ರೀತಿಯ ವಿಷಯದಲ್ಲಿ ತುಂಬಾ ವ್ಯತೆಯನ್ನು ಪಡುತ್ತೀರಿ . ಈ ಸಾಲಿನಲ್ಲಿ ಮೊದಲಿಗೆ ಬರುವುದು ಮೇಷ ರಾಶಿ.

ಮೇಷ ರಾಶಿ:ಮೇಷ ರಾಶಿಯವರಿಗೆ ಜೀವನದಲ್ಲಿ ಪ್ರೀತಿ ಸಿಗುವುದಿಲ್ಲ. ಒಂದು ವೇಳೆ ಪ್ರೀತಿ ಸಿಕ್ಕಿದರೂ ಅದು ಶಾಶ್ವತವಾಗಿ ನಿಲ್ಲುವುದಿಲ್ಲ. ಯಾವುದೋ ಒಂದು ಕಾರಣದಿಂದ ಪ್ರೀತಿಯಲ್ಲಿ ಅಡೆತಡೆಗಳು ಎದುರಾಗುತ್ತವೆ. ಮೇಷ ರಾಶಿಗೆ ಯಾಕೆ ಪ್ರೀತಿ ಸಿಗುವುದಿಲ್ಲ ಎಂದರೆ ಮೇಷ ರಾಶಿಯಿಂದ ಪಂಚಮ ಭಾವದಲ್ಲಿ ಸಿಂಹ ರಾಶಿ ಬರುತ್ತದೆ . ಅದು ಅಗ್ನಿ ತತ್ವದ ರಾಶಿಯಾಗಿದ್ದು ಅವರ ಪ್ರೀತಿ ಅಗ್ನಿಯಲ್ಲಿ ಭಸ್ಮವಾಗಿ ಹೋಗುತ್ತದೆ . ಅಂದರೆ ಅವರ ಪ್ರೇಮ, ಪ್ರೀತಿ ಮುರಿದು ಬೀಳುತ್ತದೆ. ಪೂರ್ಣ ರೀತಿಯಲ್ಲಿ ಅವರು ಪ್ರೀತಿ, ಪ್ರೇಮದಲ್ಲಿ ಸಫಲರಾಗುವುದಿಲ್ಲ. ಪ್ರೀತಿ ಇವರ ಕೈಗೆಟುಕದೇ ಇರುವ ಸಾಧನವಾಗುತ್ತದೆ.

 

 

 

ಮಿಥುನ ರಾಶಿ :ಮಿಥುನ ರಾಶಿಯವರಿಗೆ ಪ್ರೇಮದ ವಿಷಯದಲ್ಲಿ ಸದಾ ಕೊರತೆಯುಂಟಾಗುತ್ತದೆ. ಇವರು ಪ್ರೀತಿಯ ವಿಷಯದಲ್ಲಿ ದೌರ್ಭಾಗ್ಯ ಶಾಲಿಯಾಗಿರುತ್ತಾರೆ. ಯಾಕೆಂದರೆ ಮಿಥುನ ರಾಶಿಗೆ ಪಂಚಮ ಭಾವದಲ್ಲಿ ವಾಯುತತ್ತ್ವ ರಾಶಿಯಾದ ತುಲಾ ರಾಶಿ ಇದೆ. ವಾಯು ಎಂದರೆ ಗಾಳಿ ಎಂಬರ್ಥ ಅವರ ಪ್ರೀತಿ, ಪ್ರೇಮವೂ ಗಾಳಿಯಲ್ಲಿ ಹಾರಿ ಹೋಗುತ್ತದೆ. ಇವರಿಗೂ ಕೂಡ ಪ್ರೀತಿಯ ಕೈಗೆಟುಕುವುದು ಕಡಿಮೆಯೇ.

ಸಿಂಹ ರಾಶಿ:ಸಿಂಹ ರಾಶಿಯವರಿಗೆ ಸಿಂಹ ರಾಶಿಯಿಂದ ಪಂಚಮ ಭಾವದಲ್ಲಿ ನೋಡಿದರೆ ಧನಸ್ಸು ರಾಶಿ ಬರುತ್ತದೆ. ಧನಸ್ಸು ರಾಶಿ ಅಗ್ನಿ ತತ್ವದ ರಾಶಿಯಾಗಿದ್ದು, ಅಗ್ನಿತತ್ವದ ರಾಶಿಯಿರುವ ಕಾರಣ ಇವರ ಪ್ರೀತಿ ಅಗ್ನಿಯಲ್ಲಿ ಸುಟ್ಟು ಬೂದಿಯಾಗುತ್ತದೆ. ಶಾಶ್ವತವಾಗಿ ಪ್ರೀತಿ ನೆಲೆ ನಿಲ್ಲುವುದಿಲ್ಲ. ಒಂದು ವೇಳೆ ಸಿಕ್ಕಿದರೂ ಯಾವುದೋ ಒಂದು ಕಾರಣದಿಂದ ನಿಮ್ಮ ಪ್ರೇಮಿ ದೂರವಾಗುವರು. ಪ್ರೀತಿ ಮುರಿದು ಬೀಳುವುದು. ಪ್ರೇಮವೂ ಪೂರ್ಣ ರೂಪದಲ್ಲಿ ದೊರೆಯುವುದಿಲ್ಲ .

ಕುಂಭ ರಾಶಿ:ಕುಂಭ ರಾಶಿಯಿಂದ ಪಂಚಮ ಭಾವದಲ್ಲಿ ಮಿಥುನ ರಾಶಿ ಬರುವುದು. ಮಿಥುನ ರಾಶಿ ಕೂಡ ವಾಯು ತತ್ವದ ರಾಶಿಯಾಗಿದ್ದು, ಆದ್ದರಿಂದ ಕುಂಭ ರಾಶಿಯವರಿಗೆ ಪ್ರೀತಿ ದೊರೆಯುವುದಿಲ್ಲ. ಪ್ರೇಮ ಮುರಿದು ಬೀಳುವುದು ಅಥವಾ ಪ್ರೇಮಿಯೂ ಅವರಿಂದ ದೂರ ಹೊರಟು ಹೋಗುವರು. ಯಾವುದೋ ಒಂದು ಕಾರಣದಿಂದ ಪ್ರೇಮ ಅವರಿಗೆ ದೊರೆಯುವುದಿಲ್ಲ.

ಈ ನಾಲ್ಕು ರಾಶಿಯವರು ಕೂಡ ಪ್ರೀತಿಯ ವಿಷಯದಲ್ಲಿ ದೌರ್ಭಾಗ್ಯರಾಗಿದ್ದು, ಪ್ರೀತಿಯ ವಿಷಯದಲ್ಲಿ ಯಾವುದೋ ಒಂದು ಕಾರಣದಿಂದ ಪ್ರೀತಿ ಮುರಿದು ಬೀಳುವುದು.ಪ್ರೇಮವು ಸಾಕ್ಷಾತ್ ಈಶ್ವರನ ಸ್ವರೂಪದಾಗಿದ್ದು, ಎಲ್ಲಿ ನಿಜವಾದ ಪ್ರೀತಿ ಇರುವುದೋ ಅಲ್ಲಿ ಸಾಕ್ಷಾತ್ ಈಶ್ವರನು ನೆಲೆಸಿರುತ್ತಾನೆ. ಆದರೆ ಈ ರಾಶಿಯವರಿಗೆ ನಿಜವಾದ ಪ್ರೀತಿ ಸಿಗುವುದು ಸ್ವಲ್ಪ ಕಷ್ಟವೇ ಆಗಿದೆ. ಇದಕ್ಕೆ ಪರಿಹಾರವಿದೆ ಇವರು ಈ ಪರಿಹಾರಗಳನ್ನು ಮಾಡಿಕೊಂಡರೆ ಸಫಲರಾಗಬಹುದು.

ನಿಮಗೆ ನಿಮ್ಮ ಪ್ರೀತಿ ಪುನಃ ಮರಳಿ ದೊರೆಯುವ ಸಂಭವವಿದೆ. ಯಾರಿಗೆ ಪ್ರೀತಿ ಜೀವನದಲ್ಲಿ ಸಿಗುವುದಿಲ್ಲವೋ, ಅಂತವರು ಜೀವನದಲ್ಲಿ ಪರಿಪೂರ್ಣತೆಯನ್ನು ಹೊಂದಿರುವುದಿಲ್ಲ. ಪ್ರೀತಿ ಇಲ್ಲದೇ ಇರುವ ಕಾರಣ ಅವರು ಅವರ ಜೀವನದಲ್ಲಿ ನಿರಾಸೆಯಿಂದ ಕೂಡಿರುತ್ತಾರೆ, ಅವರಿಗೆ ಜೀವನದಲ್ಲಿ ಮನೆ, ಆಸ್ತಿ ,ಹಣ, ಸ್ನೇಹಿತರು ಯಾರೇ ಇದ್ದರೂ ಕೂಡ ಪ್ರೀತಿ ಇರುವುದಿಲ್ಲ. ಪ್ರೀತಿ ಇಲ್ಲದೇ ಇದ್ದರೆ ಜೀವನದಲ್ಲಿ ಯಾವುದೂ ಇವರಿಗೆ ಚೆನ್ನಾಗಿ ಕಾಣಿಸುವುದಿಲ್ಲ. ಮನೆ, ಪರಿವಾರ, ಕೆಲಸ, ಉಟ, ಯಾವುದೂ ಚೆನ್ನಾಗಿರುವುದಿಲ್ಲ. ಯಾಕೆಂದರೆ ಪ್ರೀತಿ ಇಲ್ಲದೇ ಹೋದರೆ ಜೀವನದಲ್ಲಿ ಎಲ್ಲವೂ ಶೂನ್ಯವಾಗಿ ಅಂದರೆ ಸೊನ್ನೆಯಾಗಿ ಕಾಣಿಸುತ್ತದೆ. ಇವರ ಜೀವನದಲ್ಲಿ ನಿರಾಸೆ ಮತ್ತು ಹತಾಶೆ ಯಾವಾಗಲೂ ಇವರನ್ನು ಕಾಡುತ್ತಿರುತ್ತದೆ ಮತ್ತು ಮಾನಸಿಕ ಒತ್ತಡದಿಂದ ಕೂಡಿರುತ್ತಾರೆ. ಮಾನಸಿಕ ಒತ್ತಡದ ಕಾರಣದಿಂದಾಗಿ ಇವರ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ನೀವು ಇದರಿಂದ ನಿರಾಸೆಯಿಂದ ಇರುವ ಅವಶ್ಯಕತೆ ಇಲ್ಲ. ಇದಕ್ಕೆ ಕೆಲವು ಪರಿಹಾರಗಳಿವೆ ಅವುಗಳನ್ನು ಮಾಡಿಕೊಂಡರೆ ನಿಮಗೂ ಕೂಡ ನಿಮ್ಮ ಜೀವನದಲ್ಲಿ ನಿಜವಾದ ಪ್ರೀತಿ ದೊರೆಯುವುದು .

 

 

 

ಪರಿಹಾರಗಳು.
ಮೇಷ ರಾಶಿ :ಪ್ರತಿ ಮಂಗಳವಾರ ದುರ್ಗಾ ದೇವಿಗೆ ದಾಳಿಂಬೆ ಹಣ್ಣನ್ನು ಅರ್ಪಿಸಿ. ಇದರಿಂದ ಪ್ರೀತಿ ದೊರೆಯಬಹುದು.ಮಿಥುನ ರಾಶಿ:ಪ್ರತಿ ಬುಧವಾರ ಗಣೇಶನಿಗೆ ಬೆಲ್ಲವನ್ನು ಅರ್ಪಿಸಿ, ಬೆಲ್ಲ ಅರ್ಪಿಸಲು ಸಾಧ್ಯವಾಗದೇ ಹೋದರೆ ಯಾವುದಾದರೂ ಸಿಹಿ ಪದಾರ್ಥ ಅಥವಾ ಮಿಠಾಯಿಯನ್ನು , ಮೋದಕವನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಪ್ರೀತಿ ಮರಳಿ ಸಿಗುವ ಪೂರ್ಣ ಯೋಗವೂ ದೊರೆಯುವುದು.ಸಿಂಹ ರಾಶಿ:ಭಾನುವಾರದ ದಿನ ಭಗವಂತನಾದ ಸೂರ್ಯ ದೇವನಿಗೆ ನೀರನ್ನು ಅರ್ಪಿಸಿ, ಅಂದರೆ ಅರ್ಘ್ಯವನ್ನು ನೀಡಿ ಜೊತೆಯಲ್ಲೇ ಆ ನೀರಿನಲ್ಲಿ ಕೆಂಪು ಹೂ, ಕೆಂಪು ಚಂದನ ಮತ್ತು ಕೆಂಪು ಕುಂಕುಮವನ್ನು ಮಿಶ್ರಣ ಮಾಡಿ ಅರ್ಪಿಸಿದರೆ ಅತಿ ಹೆಚ್ಚಿನ ಪ್ರೀತಿ ಲಭಿಸುವುದು.ಕುಂಭ ರಾಶಿ:ಶನಿವಾರದ ದಿನ ಹನುಮಂತ ದೇವನ ದೇವಾಲಯಕ್ಕೆ ಕೆಂಪು ಹೂವನ್ನು ತೆಗೆದುಕೊಂಡು ಹೋಗಿ ಅರ್ಪಿಸಿ .ಪ್ರತಿ ಶನಿವಾರ ಈ ರೀತಿ ಮಾಡಿದರೆ ನಿಮ್ಮ ಪ್ರೀತಿಯು ಮರಳಿ ನಿಮಗೆ ಬೇಗನೆ ದೊರೆಯುವುದು.ಈ ಪರಿಹಾರವನ್ನು ಈ ನಾಲ್ಕು ರಾಶಿಯವರು 5 ಬಾರಿ ಮಾಡಿದರು ಸಾಕು.ನಿಮಗೆ ನಿಜವಾದ ಪ್ರೀತಿ ಮರಳಿ ದೊರೆಯುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top