fbpx
ಮನೋರಂಜನೆ

ನಮ್ಮ ಸ್ಟಾರ್ ನಟರಿಗೆ ಸಿಕ್ಕ ಹೊಸ ಬಿರುದುಗಳ ಬಗ್ಗೆ ಒಮ್ಮೆ ಓದಿ

ನಟರನ್ನು ಆರಾಧಿಸುವ ಅಭಿಮಾನಿಗಳಿಗೆ ಅತ್ಯಂತ ಖುಷಿ ಕೊಡುವ ವಿಚಾರ ಏನಂದರೆ ಅವರ ಮೆಚ್ಚಿನ ನಟರಿಗೆ ಹೊಸ ಹೊಸ ಬಿರುದುಗಳು ಹರಿದು ಬರುವುದು.ಇದೀಗ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟರಾದ ದರ್ಶನ್‌, ಸುದೀಪ್‌, ಪುನೀತ್‌ ರಾಜ್‌ಕುಮಾರ್‌ ಮತ್ತು ಶಿವರಾಜ್ ಕುಮಾರ್ ಗೆ ಇತ್ತೀಚೆಗೆ ಹೊಸ ಬಿರುದುಗಳು ಹರಿದು ಬರುತ್ತಿರುವುದು ವಿಶೇಷವಾಗಿದೆ.

ನಟ ದರ್ಶನ್‌ ಗೆ ಸ್ಕಿಕಿತು ‘ಕರುನಾಡ ಕಲಾ ಕುಲತಿಲಕ’ ಎಂಬ ಬಿರುದು :

ನಟ ದರ್ಶನ್‌ ಇತ್ತೀಚೆಗೆ ಕತಾರ್‌ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾವಹಿಸಿದರು. ಅಲ್ಲಿ ಅವರಿಗೆ ‘ಕರುನಾಡ ಕಲಾ ಕುಲತಿಲಕ’ ಎಂದು ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಇದನ್ನು ದರ್ಶನ್‌ ಖುಷಿಯಿಂದಲೇ ಸ್ವೀಕರಿಸಿದರು. ಅಲ್ಲಿ ಸನ್ಮಾನಿಸಲಾದ ಕೆಲವೊಂದು ಫೋಟೋಗಳ ಜತೆ ಅವರ ಅಭಿಮಾನಿಗಳು, ನಮ್ಮ ನೆಚ್ಚಿನ ನಟ ಇನ್ನು ಮುಂದೆ ಕರುನಾಡ ಕಲಾ ಕುಲತಿಲಕ ಎಂದು ಹೇಳುತ್ತಿದ್ದಾರೆ.

ಕಿಚ್ಚನಿಗೆ ಒಲಿದು ಬಂತು ‘ ಬಾದ್ ಶಾ’ ಎಂಬ ಬಿರುದು :

ಕಿಚ್ಚ ಸುದೀಪ್‌ ನಟನೆಯ ಹೊಸ ಸಿನಿಮಾ ಪೈಲ್ವಾನ್‌. ಆ ಸಿನಿಮಾದ ಪಾತ್ರಕ್ಕಾಗಿ ಸಾಕಷ್ಟು ತಯಾರಿ, ಕಸರತ್ತು ಮಾಡಿಕೊಳ್ಳುತ್ತಾ ಬಂದಿದ್ದಾರೆ. ಅವರಿಗೆ ಪೈಲ್ವಾನ್‌ ಚಿತ್ರತಂಡವೂ ಮತ್ತು ಕಿಚ್ಚನ ಹುಚ್ಚು ಅಭಿಮಾನಿಗಳು ಕಿಚ್ಚ ಸುದೀಪ್ ರವರಿಗೆ ‘ಬಾದ್‌ಶಾ’ ಎಂಬ ಬಿರುದನ್ನು ಕೊಟ್ಟಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ರವರ ಮುಡಿಗೇರಿತು ‘ರಾಜರತ್ನ’ ಎಂಬ ಬಿರುದು :

ಪುನೀತ್‌ರಾಜ್‌ಕುಮಾರ್‌ ಈ ವರ್ಷ ತರೆಕಂಡಂತಹ ರಾಜ್‌ಕುಮಾರ ಸಿನಿಮಾದಲ್ಲಿ ‘ರಾಜರತ್ನ’ ಎಂದು ಕರೆಯಲಾಗಿತ್ತು. ಈ ಹೆಸರು ಪುನೀತ್ ರವರ ಅಭಿಮಾನಿಗಳಿಗೆ ಇಷ್ಟವಾಗಿದ್ದು ಆ ಹೆಸರಲ್ಲೇ ಪುನೀತ್ ರನ್ನು ಕರೆಯುತ್ತಿದ್ದಾರಂತೆ. ಹಾಗು ಈಗ ರಾಜಕುಮಾರ ಸಿನಿಮಾವನ್ನು ನಿರ್ದೇಶಿದ್ದ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟಿಸುತ್ತಿರುವ ಹೊಸ ಚಿತ್ರದ ಹೆಸರು ‘ಯುವ ರತ್ನ’ ಹಾಗಿರುವುದರಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಈ ಬಿರುದು ಸೂಕ್ತವಾಗಿದೆ ಎಂದು ಎಲ್ಲಡೆ ಕೇಳಿ ಬರುತ್ತಿದೆ.

‘ಭರತ ಚಕ್ರವರ್ತಿ’ ಯಾದರು ಶಿವಣ್ಣ :

ಸ್ಯಾಂಡಲ್‌ವುಡ್‌ನಲ್ಲಿ ಸರಳತೆಗೆ ಹೆಸರುವಾಸಿಯಾದ ನಟ ಶಿವರಾಜ್‌ಕುಮಾರ್‌ ಯಾವತ್ತಿಗೂ ತಮಗೆ ಬರುವ ಬಿರುದುಗಳ ಬಗ್ಗೆ ತಲೆದೂಗಿದವರೇ ಅಲ್ಲ. ಆದರೇ ಈಗ ಶಿವರಾಜ್‌ಕುಮಾರ್‌ ಅವರಿಗೆ  ಹೊಸ ಬಿರುದೊಂದು ಬಂದಿದ್ದು ಆ ಬಿರುದೇ ‘ಭರತಚಕ್ರವರ್ತಿ’ . ಹೌದು ಟಗರು ಚಿತ್ರದ ಯಶಸ್ಸಿನ ನಂತರ ಟಗರು ನಿರ್ಮಾಪಕ ಶ್ರೀಕಾಂತ್‌ ಮತ್ತು ಅಭಿಮಾನಿಗಳೂ ಅವರಿಗೆ ಈ ಬಿರುದು ನೀಡಿದ್ದಾರೆ. ಇದಲ್ಲದೇ ಇತ್ತೀಚೆಗೆ ಅವರು ಆಸ್ಪ್ರೇಲಿಯಾಗೆ ಹೋದಾಗ ಅಲ್ಲಿ ‘ಮುಂಬಾ ಸ್ಟಾರ್‌’ ಎಂದು ಬಿರುದನ್ನು ನೀಡಿ ಗೌರವಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top