fbpx
ರಾಜಕೀಯ

ಸಿದ್ದರಾಮಯ್ಯನನ್ನೆ ಸೋಲಿಸಿದ್ದೇನೆ,ಅಂತಹದರಲ್ಲಿ ಆತನ ಪೆದ್ದು ಮಗನನ್ನು ಸೋಲಿಸೋದು ಕಷ್ಟವಾಗುತ್ತಿರಲಿಲ್ಲ ಎಂದ ಮಾಜಿ ಸಚಿವ ವಿ ಶ್ರೀನಿವಾಸ್ ಪ್ರಸಾದ್

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನನ್ನೆ ಸೋಲಿಸಿದ್ದೇನೆ. ಇನ್ನೂ ಆತನ ಪೆದ್ದು ಮಗನಾದ ಡಾ.ಯತೀಂದ್ರ ಸಿದ್ದರಾಮಯನನ್ನು ಸೋಲಿಸುವುದು ನಮಗೆ ಕಷ್ಟ ವಾಗುತ್ತಿರಲಿಲ್ಲ ಆದರೆ ಇದಕ್ಕೆ ಬಿಜೆಪಿ ಅವರು ನನ್ನ ಮಾತು ಕೇಳಲಿಲ್ಲ ಎಂದು ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಕಾಂಗ್ರೆಸ್ ನಾಯಕರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

 

ನಂಜನಗೂಡಿನಲ್ಲಿ ಮಾತನಾಡಿದ ಮಾಜಿ ಸಚಿವರು, ಬಿಜೆಪಿ ಅವರು ನನ್ನ ಮಾತು ಕೇಳಿದ್ದರೆ ಮೈಸೂರು ಭಾಗದಲ್ಲಿ ನಾವು ಮೂರು ಕ್ಷೇತ್ರ ಗೆಲ್ಲುತ್ತಿದೆವು. ಆದರೆ ಬಿಜೆಪಿಯವರು ನನ್ನ ಮಾತಿಗೆ ಕಿವಿಗೊಡಲಿಲ್ಲ ಎಂದು ಅರುಹಿದ್ದಾರೆ.

 

ಒಂದು ವೇಳೆ ಬಿಜೆಪಿ ನನ್ನ ಮಾತು ಕೇಳಿದಿದ್ದರೆ ನಾವು ವರುಣ ಕ್ಷೇತ್ರವನ್ನು ನಿಶ್ಚಿತವಾಗಿ ಗೆಲುತ್ತಿದ್ದೇವು ಎಂದಿದ್ದಾರೆ.

 

ಮಾತು ಮುಂದುವರೆಸಿದ ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್. ಬಿ.ಎಸ್. ಯಡಿಯೂರಪ್ಪ ಅವರು ನನ್ನ ಮಾತು ಕೇಳಲಿಲ್ಲ. ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡ್ತೀನಿ ಅಂತಾ ಹೋಟೆಲ್ ವ್ಯಾಪಾರಿಗೆ ಕೊಟ್ಟು ಕ್ಷೇತ್ರ ಕಳೆದು ಹೋಗುವಂತೆ ಮಾಡಿದರು ಎಂದು ಅಸಮಾಧಾನ ಹೊರಹಾಕಿದ್ದಾರೆ.

 

ಸಿದ್ದರಾಮಯ್ಯನವರು ಮಂತ್ರಿ ಮಂಡಲದಲ್ಲಿ ಮಾತನಾಡಿದ ಮಾತನ್ನು ಮರೆತಿದ್ದರಿಂದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸೇರಿ 16 ಜನ ಮಂತ್ರಿಗಳು ಸೋತರು. 18 ರಿಂದ 78 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಮಾತ್ರ ಅವರು ಯಶಸ್ವಿಯಾದರು. ತಮ್ಮ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಮಂತ್ರಿಗಳು ಹೀನಾಯವಾಗಿ ಸೋತರು. ನಂಜನಗೂಡು ಉಪ ಚುನಾವಣೆ ಫಲಿತಾಂಶದ ಬಳಿಕ ಆ ಮಹಾನ್ ನಾಯಕನನ್ನು ಸೋಲಿಸಿದ್ದೇನೆ ಎಂದು ನನ್ನನ್ನು ಟೀಕಿಸಿದ್ದರು ಎನ್ನುತ್ತಾರೆ ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್.

 

ಕೊನೆಗೆ ಲೋಕ ಸಭಾ ಚುನಾವಣೆಗೆ ಸಂಬಂಧಿಸದಂತೆ ಮಾತನಾಡಿದ ಅವರು ‘ಲೋಕಸಭಾ ಚುನಾವಣೆಗೆ ನಾನು ಮತ್ತು ನನ್ನ ಸಂಬಂಧಿಕರು ಸ್ಪರ್ಧೆ ಮಾಡಲ್ಲ. ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ನಾಯಕರ ಬಳಿ ಹೇಳಿಕೊಂಡಿದ್ದಾರೆ. ಮುಂದಿನ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವುದಿಲ್ಲ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 16 ಲಕ್ಷಕ್ಕೂ ಅಧಿಕ ಮತಗಳಿವೆ. ಎಲ್ಲ ಕ್ಷೇತ್ರದ ನಾಯಕರು ಸೇರಿ ಅಭ್ಯರ್ಥಿ ಯಾರು ಎಂಬುವುದನ್ನು ಚರ್ಚಿಸಿ ಹೈಕಮಾಂಡ್ ಗೆ ತಿಳಿಸಬೇಕು. ಪಕ್ಷ ಸೂಚಿಸುವ ಅಭ್ಯರ್ಥಿಯ ಪರವಾಗಿ ನಾವು ಕೆಲಸ ಮಾಡುತ್ತೇವೆ’ ಎಂದು ಮಾಜಿ ಸಚಿವ ವಿ.
ಶ್ರೀನಿವಾಸ್ ಪ್ರಸಾದ್ ಮಾತನಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top