fbpx
ಸಮಾಚಾರ

ಹೋಗಬಾರದ ದ್ವೀಪಕ್ಕೆ ಹೋಗಿ ಬಾರದ ಲೋಕಕ್ಕೆ ಹೋದ ಅಮೆರಿಕ ಪ್ರಜೆಯ ಶವ ಸಿಗೋದೇ ಡೌಟ್

ಪೋರ್ಟ್ ಬ್ಲೇರ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಸಾಹಸಯಾತ್ರೆ ಕೈಗೊಂಡಿದ್ದ ಅಮೆರಿಕಾದ ಪ್ರಜೆಯೊಬ್ಬ ಅಕ್ರಮವಾಗಿ ಅಂಡಮಾನ್ ದ್ವೀಪದೊಳಗೆ ಪ್ರವೇಶಿಸಿದ್ದು, ಸೆಂಟಿನಲೀಸ್ ಬುಡಕಟ್ಟು ಜನರು ಆತನನ್ನು ಕೊಂದು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಅಂಡಮಾನ್ ದ್ವೀಪ ಸಮೂಹದ ಉತ್ತರ ಸೆಂಟಿನೆಲ್ ದ್ವೀಪದಲ್ಲಿ ಸೆಂಟಿನಲೀಸ್ ಬುಡಕಟ್ಟು ಜನರು ವಾಸಿಸುತ್ತಿದ್ದು, ಈ ಪ್ರದೇಶವನ್ನು ‘ಭಾರತ ಸರ್ಕಾರ ಸಂರಕ್ಷಿತ ಪ್ರದೇಶ’ ಎಂದು ಘೋಷಿಸಿದೆ. ಆದರೆ ಅಮೆರಿಕ ಪ್ರಜೆ ಜಾನ್ ಅಲೆನ್ ಚೌ ಅಕ್ರಮವಾಗಿ ಈ ಪ್ರದೇಶವನ್ನು ಪ್ರವೇಶಿಸಿದ್ದರು ಎಂಬುದು ಕಂಡು ಬಂದಿದೆ.

ಜಾನ್ ಅಲೆನ್ ಚೌ ಅವರ ಈ ಸಾಹಸಯಾತ್ರೆಗೆ ಸುಮಾರು ಏಳು ಮಂದಿ ಮೀನುಗಾರರು ಕೈ ಜೋಡಿಸಿದ್ದರು ಎನ್ನಲಾಗಿದೆ. ಹಾಗೂ ಅವರೆಲ್ಲರನ್ನೂ ಈಗ ಪೊಲೀಸರು ಬಂಧಿಸಿದ್ದಾರೆ. ಆದರೆ ಬಂಧಿತ ಮೀನುಗಾರರ ಮೇಲೆ ಮೂಲನಿವಾಸಿ ಬಡುಕಟ್ಟುಗಳ ರಕ್ಷಣೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಕೇಸು ದಾಖಲಿಸಲಾಗಿದೆಯಂತೆ.

ಐದು ದಿನಗಳ ಹಿಂದೆ ಜಾನ್ ಅಲೆನ್ ಚೌ ಬುಡಕಟ್ಟು ಜನರ ಜತೆ ಮಾತನಾಡಲು ಹೋಗಿದ್ದರು ಎನ್ನಲಾಗಿದ್ದು, ಸೆಂಟಿನಲೀಸ್ ಬುಡಕಟ್ಟು ಜನರು ಈತನನ್ನು ಶತ್ರುವೆಂದು ತಿಳಿದು ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬುಡಕಟ್ಟು ಜನರು ಹೊರಜಗತ್ತಿನ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳಲು ಬಯಸುವದಿಲ್ಲ ಎಂಬುದು ಎಲ್ಲರಿಗು ತಿಳಿದಿರುವ ವಿಚಾರವಾಗಿದ್ದು ಈ ಕಾರಣದಿಂದಾಗಿ ಜಾನ್ ಅಲೆನ್ ಚೌ ರವರನ್ನು ಕೊಂದಿರಬಹುದೆಂದು ಪೊಲೀಸರು ಶಂಕಿಸುತ್ತಿದ್ದರೆ. ಇದರ ಕುರಿತ ಕಾರ್ಯಾಚರಣೆಯು ಸಹ ಭರದಿಂದ ಸಾಗುತ್ತಲಿದೆ.

ಮತ್ತೊಂದು ವರದಿಯ ಪ್ರಕಾರ ಈ ಹಿಂದೆ ಒಟ್ಟು ಐದು ಬಾರಿ ಜಾನ್ ಈ ದ್ವೀಪಕ್ಕೆ ಭೇಟಿ ನೀಡಿದ್ದ ಎಂಬುದು ಬೆಳಕಿಗೆ ಬಂದಿದೆ.

ಪೋರ್ಟ್ ಬ್ಲೇರ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಕ್ಕೆ ಜಾನ್ ಅಲೆನ್ ಚೌ ಏಕೆ ಹೋಗಿದ್ದ ?

ಅಂಡಮಾನ್ ದ್ವೀಪ ಸಮೂಹದ ಉತ್ತರ ಸೆಂಟಿನೆಲ್ ದ್ವೀಪದಲ್ಲಿ ಕ್ರೈಸ್ತ ಧರ್ಮದ ಪ್ರಚಾರ ನಡೆಸಲು ಈತ ಹೋಗಿದ್ದ ಎಂದು ತಿಳಿದು ಬಂದಿದೆ . ಆದರೆ ಈ ವರದಿಯನ್ನು ಇದುವರೆಗೆ ಯಾರೂ ದೃಢೀಕರಿಸಿಲ್ಲ.

ಅದರೊಂದಿಗೆ ಹೊರ ಜಗತ್ತಿನ ಸಂಪರ್ಕಕ್ಕೆ ಬಾರದೇ ಪುಟ್ಟದ್ವೀಪದಲ್ಲಿ ಜೀವನ ಸಾಗಿಸುತ್ತಿರುವ ಆದಿವಾಸಿಗಳಿರುವ ಸ್ಥಳಕ್ಕೆ ಹೋಗಿ ಮತ ಪ್ರಚಾರಕ ಜಾನ್‌ ಅಲೆನ್‌ ಚೌ ದೇಹ ತರಬೇಕಾಗಿದ್ದು.ಆದರೆ ಅದೊಂದು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಹಾಗೂ ಆ ದ್ವೀಪದ ಸುತ್ತಳತೆಯ 5 ಕಿ.ಮೀ. ಒಳಕ್ಕೆ ಯಾರೂ ಹೋಗಬಾರದು ಎಂಬ ನಿರ್ಬಂಧ ಇರುವುದರಿಂದ ಕಾರ್ಯಾಚರಣೆ ಅಷ್ಟುಸುಲಭವಿಲ್ಲ. ಹೋದರೂ ಆದಿವಾಸಿಗಳು ದಾಳಿ ಮಾಡುತ್ತಾರೆ. ವಿಳಂಬ ಮಾಡಿದರೆ, ತಮ್ಮದೇ ರೀತಿಯಲ್ಲಿ ಶವವನ್ನು ಅಂತ್ಯಸಂಸ್ಕಾರ ಮಾಡುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಾನ್ ಅಲೆನ್ ಚೌ ರ ಸಾವಿನಿಂದ ನೊಂದ ಆತನ ಕುಟುಂಬದವರು ಆತನ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಜಾನ್ ರವರಿಗೆ ಶ್ರದ್ದಾಂಜಲಿ ಅರ್ಪಿಸಿದ್ದಾರೆ.

 

View this post on Instagram

 

John Allen Chau

A post shared by John Chau (@johnachau) on

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top