fbpx
ಮನೋರಂಜನೆ

2.0 ಚಿಕ್ಕ ಮಕ್ಕಳ ಸಿನಿಮಾ ಅಂದ್ರು -ಡೈರೆಕ್ಟರ್ ಆರ್​ಜಿವಿ.

ಸೂಪರ್ ಸ್ಟಾರ್​ ರಜನಿಕಾಂತ್​ ನಟನೆಯ ‘2.0’ ಸಿನಿಮಾ ಮುಂದಿನ ವಾರ ಪ್ರಪಂಚದಾದ್ಯಂತ ರಿಲೀಸ್ ಆಗ್ತಿದೆ. ‘2.0’ ಸಿನಿಮಾ ನೋಡೋಕೆ ಸಿನಿಪ್ರಿಯರು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ . ‘2.0’ ಸಿನಿಮಾದಲ್ಲಿ ರಜನಿ- ಅಕ್ಷಯ್​ ರ ಆರ್ಭಟವೇ ಇದ್ದು, ಈ ಚಿತ್ರವನ್ನು ಕಣ್ಣುತುಂಬಿಕೊಳ್ಳೋಕೆ ಎಲ್ಲಾ ವರ್ಗದ ಪ್ರೇಕ್ಷಕರು ಕಾಯುತ್ತಿರುವುದು ಸುಳ್ಳಲ್ಲ.

ಈಗಿರುವಾಗ ಡೈರೆಕ್ಟರ್​ ರಾಮ್ ಗೋಪಾಲ್ ವರ್ಮ್ ಒಂದು ಹೊಸ ವಿವಾದಕ್ಕೆ ನಂದಿ ಹಾಡಿದ್ದಾರೆ . ಹೌದು , ನಿರ್ದೇಶಕ ಆರ್.ಜಿ.ವಿ ಸೂಪರ್ ಸ್ಟಾರ್​ ರಜನಿಕಾಂತ್​ ನಟನೆಯ ‘2.0’ ಸಿನಿಮಾ ವಿರುದ್ಧ ಟ್ವೀಟ್ ಮಾಡಿದ್ದೂ,ಈ ಟ್ವೀಟ್ ಗೆ ಎಲ್ಲೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಷ್ಟಕ್ಕೂ ಆರ್. ಜಿ. ವಿ ಮಾಡಿದ ಟ್ವೀಟ್ ಏನು ಗೊತ್ತಾ?

‘2.0 ಒಬ್ಬ ದೊಡ್ಡ ನಿರ್ದೇಶಕ, ಚಿಕ್ಕ ಮಕ್ಕಳಿಗೋಸ್ಕರ ಮಾಡಿದ ಸಿನಿಮಾ. ಭೈರವ ಗೀತಾ ಒಬ್ಬ ಚಿಕ್ಕ ನಿರ್ದೇಶಕ ದೊಡ್ಡವರಿಗೋಸ್ಕರ ಮಾಡಿದ ಸಿನಿಮಾ’ ಅಂತಾ ಟ್ವೀಟ್ ಮಾಡಿದ್ದಾರೆ.

 

 

ಒಟ್ಟಿನಲ್ಲಿ ನಮ್ಮ ಕನ್ನಡದ ಅಪ್ಪಟ ಪ್ರತಿಭೆ ನಟ ಧನಂಜಯ್ ಈಗ ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ ಟಗರು ಸಿನಿಮಾದಲ್ಲಿ ಡಾಲಿ ಆಗಿ ಮಿಂಚಿದ ಮೇಲೆ ಈಗ ಭೈರವನಾಗಿ ಮಿಂಚಲು ಸಿದ್ಧರಾಗಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top