fbpx
ಸಮಾಚಾರ

“ತೆಪ್ಪಗೆ ಇರೋಹಾಗಿದ್ರೆ ಇರಿ, ಇಲ್ಲದಿದ್ರೆ ಮನೆ ಖಾಲಿ ಮಾಡ್ಕೊಂಡ್ ಏರಿಯಾ ಬಿಟ್ಟು ಹೋಗಿ” ದುನಿಯಾ ವಿಜಿಗೆ ಎಚ್ಚರಿಕೆ.

ಪದೇ ಪದೇ ಕೌಟುಂಬಿಕ ಕಲಹ ವಿಚಾರವಾಗಿ ಠಾಣೆ ಮೇಟ್ಟಿಲೇರುತ್ತಿರುವ ನಟ ದುನಿಯಾ ವಿಜಯ್‌ ಕುಟುಂಬದ ವಿರುದ್ಧ ಗಿರಿನಗರ ಠಾಣೆ ಪೊಲೀಸರು ವಾರ್ನಿಂಗ್ ನೀಡಿದ್ದಾರೆ. “ನಿಮ್ಮ ಕುಟುಂಬದ ಜಗಳದಿಂದ ಏರಿಯಾದ ಜನರಿಗೆ ತೊಂದರೆಯಾಗುತ್ತಿದೆ. ನೀವು ಕಿತ್ತಾಡಬೇಕಿದ್ದರೆ ಮಕ್ಕಳು ಪತ್ನಿ ಸೇರಿ ಎಲ್ಲರೂ ಮನೆ ಖಾಲಿ‌ ಮಾಡ್ಕೊಂಡು ಹೊರ ವಲಯದಲ್ಲಿ ಮನೆ ಮಾಡಿಕೊಳ್ಳಿ” ಎಂದು ಗಿರಿನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ವಾರ್ನಿಂಗ್ ನೀಡಿದ್ದಾರೆ ಎನ್ನಲಾಗಿದೆ.

ಸಿಆರ್‌ಪಿಸಿ 107ರ‌ಡಿ ದೂರು ದಾಖಲು.
ದುನಿಯಾ ವಿಜಿ ಕುಟುಂಬದ ಕೌಟುಂಬಿಕ ಕಲಹ ಹೇಚ್ಚಾದ ಹಿನ್ನಲೆಯಲ್ಲಿ ಅವರ ಇಡೀ ಕುಟುಂಬದ ಮೇಲೆ ಪೊಲೀಸರು ಅಪರೂಪದ ಕೇಳನ್ನೂ ಜಡಿದಿದ್ದಾರೆ. ನಟ ದುನಿಯಾ ವಿಜಯ್‌, ಅವರ ಮೊದಲ ಪತ್ನಿ ನಾಗರತ್ನ, ಎರಡನೇ ಪತ್ನಿ ಕೀರ್ತಿಗೌಡ, ನಾಗರತ್ನ ಸಹೋದರ, ವಿಜಯ್‌ ಪೋಷಕರು ಹಾಗೂ ಚಾಲಕ ಸೇರಿ 7 ಮಂದಿ ವಿರುದ್ಧ ಸಿಆರ್‌ಪಿಸಿ 107ರ‌ಡಿ ದೂರು ದಾಖಲಿಸಿಕೊಳ್ಳಲಾಗಿದೆ.

ಪೊಲೀಸರು ಆರೋಪಿಗಳಿಂದ 20 ಲಕ್ಷ ಬಾಂಡ್ ಬರೆಸಿಕೊಳ್ಳಲು ಚಿಂತನೆ ನಡೆಸಿದ್ದಾರೆ. ಸಿಆರ್‌ಪಿಸಿ 107ರ‌ ಪ್ರಕಾರ ಪ್ರಕರಣದಡಿಯಲ್ಲಿ ಕುಟುಂಬದಿಂದ ಕಾನೂನು ಸುವ್ಯವಸ್ಥೆ ಶಾಂತಿಗೆ ಭಂಗ ತಂದರೆ 20 ಲಕ್ಷ ಮೌಲ್ಯದ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.

ಒಂದು ವೇಳೆ ಇದನ್ನು ಮೀರಿ ಮತ್ತೂಮ್ಮೆ ಗಲಾಟೆ ಮಾಡುವುದು, ಶಾಂತಿ ಸೌಹಾರ್ದತೆಗೆ ಧಕ್ಕೆ ತರುವುದು ಮಾಡಿದರೆ ಭಾರತೀಯ ದಂಡ ಸಂಹಿತೆ(ಐಪಿಸಿ) ಅಡಿಯಲ್ಲಿ ಮತ್ತೂಂದು ಎಫ್ಐಆರ್‌ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top