fbpx
ಸಮಾಚಾರ

ಕಳೆದ ವಾರ ಅತಿ ಹೆಚ್ಚು ಜಾಹೀರಾತನ್ನು ಕೊಟ್ಟವರು ಯಾರು ಗೊತ್ತಾ ?

ನಮ್ಮ ದೇಶದಲ್ಲಿ ದೂರದರ್ಶನ ಎನ್ನುವುದು ಒಂದು ಅದ್ಭುತ ಸಂಪರ್ಕ ಮಾಧ್ಯಮವೇ ಹೌದು. ಪುಟ್ಟ ಹಳ್ಳಿಯ ಜನರಿಂದ ಹಿಡಿದು ದೊಡ್ಡ ನಗರಗಳಲ್ಲಿನ ಜನರು ಸಹ ಟಿವಿ ಮೇಲೆ ಅವಲಂಬಿತರಾಗಿರುವುದು ಎಲ್ಲರಿಗು ಗೊತ್ತಿರುವ ವಿಚಾರವೇ . ಆದರೆ ಇತ್ತೀಚಿಗೆ ಈ ‘ಮನರಂಜನಾ ಪೆಟ್ಟಿಗೆ’ ಎಂದೇ ಹೆಸರುವಾಸಿಯಾದ ಟಿವಿ, ‘ ಜಾಹೀರಾತು ಪೆಟ್ಟಿಗೆ’ ಆಗುತ್ತಿದೆ ಎಂಬ ವಿಚಾರಗಳು ಎಲ್ಲೆಡೆ ಕೇಳಿ ಬರುತ್ತಿವೆ ಎಂದರೆ ತಪ್ಪಾಗಲಾರದು. ಏಕೆಂದರೇ ನಿಮಿಷ ನಿಮಿಷಕ್ಕೂ ಹಾಕಿದ್ದೆ ಜಾಹೀರಾತುಗಳನ್ನು ಹಾಕುವುದರಿಂದ ವೀಕ್ಷಕರಿಗಂತೂ ಹೆಚ್ಚು ಕಿರಿಕಿರಿಯಾಗುತ್ತದೆ ಎಂಬ ಅಪವಾದಗಳು ಕೇಳಿಬರುತ್ತಿವೆ.ಹೀಗಂತೂ ಈ ಜಾಹೀರಾತುಗಳಿಲ್ಲದ ದೂರದರ್ಶನಗಳ ಊಹಿಸಿಕೊಳ್ಳುವುದು ಕಷ್ಟ ಸಾಧ್ಯ.

ಹೌದು, ದೂರದರ್ಶನಗಳಲ್ಲಿ ಪ್ರಸಾರವಾಗುವ ಸಾಲು-ಸಾಲು ಜಾಹೀರಾತುಗಳಿಂದ ದೂರದರ್ಶನ ದವರಿಗೆ ಈ ಜಾಹೀರಾತು ಕಂಪನಿಗಳಿಂದ ಲಾಭವಿದೆ ಎಂಬುದನ್ನು ನಾವು ಮೇಲ್ನೋಟಕ್ಕೆ ಹೇಗೆ ಊಹಿಸಬಹುದೋ ಹಾಗೆಯೇ ಈ ಜಾಹೀರಾತುಗಳನ್ನು ಹಾಕಿಸುವ ಕಂಪನಿಗಳು ದೂರದರ್ಶನಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳಿಗೆ ಅತಿ ಹೆಚ್ಚು ಖರ್ಚು ಮಾಡಬೇಕಾಗುತ್ತದೆಂಬುದನ್ನು ಊಹಿಸಬಹುದಾಗಿದೆ. ಅದರಂತೆ ಜಾಹೀರಾತುಗಳನ್ನೂ ಟಿವಿ ಯಲ್ಲಿ ಹಾಕಿಸುವ ಕಂಪನಿಗಳು ತಮ್ಮ ಬ್ರಾಂಡ್ ಅನ್ನು ಆದಷ್ಟು ಜನರಿಗೆ ತಲುಪಿಸಲು ಪ್ರಯತ್ನಿಸುತ್ತವೆ ಮತ್ತು ಅದನ್ನು ಕಾರ್ಯಗತಗೊಳಿಸಲು ಹೆಣಗಾಡುತ್ತವೆ ಎಂಬುದು ಸಹ ತಿಳಿದು ಬರುತ್ತಿದೆ.

ಹಾಗಾದರೆ ಕಳೆದ ವಾರ ವಾರ ಟಿವಿಗಳಲ್ಲಿ ಅತಿ ಹೆಚ್ಚು ಜಾಹೀರಾತುಗಳನ್ನು ಕೊಟ್ಟವರು ಯಾರು ಗೊತ್ತಾ ?

ಹೌದು, ನೀವು ಈ ಬಗ್ಗೆ ತಿಳಿದುಕೊಳ್ಳಲೇ ಬೇಕು! ಕಳೆದ ವಾರ ದೂರದರ್ಶನಗಲ್ಲಿ ಅತಿ ಹೆಚ್ಚು ಜಾಹೀರಾತುಗಳನ್ನು ನೀಡಿದ ಕಂಪನಿ ಯಾವುದೆಂದರೆ ಅದುವೇ ‘ ಬಿಜೆಪಿ’ ( ನೀವು ಸಹ ದೂರ್ದರ್ಶನಗಳಲ್ಲಿ  ಗಮನಿಸಿರಬಹುದು)ಕಳೆದ ಒಂದು ವಾರದಲ್ಲೇ ಬಿಜೆಪಿ ಸುಮಾರು 22 ,099 ಜಾಹೀರಾತುಗಳನ್ನು ದೂರದರ್ಶನಗಳಲ್ಲಿ ನೀಡಿದೆ.ಎರಡನೇ ಸ್ಥಾನ ‘ ನೆಟ್ ಫ್ಲಿಕ್ಸ್’ (NETFLIX) ಪಾಲಾಗಿದ್ದು ಅದು ಸಹ 12,951 ಜಾಹೀರಾತುಗಳನ್ನು ದೂರದರ್ಶನಗಳಲ್ಲಿ ನೀಡಿದೆ. ಹಾಗೂ ಮೂರನೇ ಸ್ಥಾನವನ್ನು ‘ ಟ್ರೀ ವಾಗೊ’ (TRIVAGO) 12 ,795 ಜಾಹೀರಾತುಗಳನ್ನು ದೂರದರ್ಶನಗಳಲ್ಲಿ ನೀಡುವುದರ ಮೂಲಕ ಗಿಟ್ಟಿಸಿದೆ. ಉಳಿದಂತೆ ಯಾವ ಯಾವ ಕಂಪನಿಗಳು ಎಷ್ಟು  ಜಾಹೀರಾತುಗಳನ್ನು ಕೊಟ್ಟಿವೆ ಎಂಬುದನ್ನು ನೀವು ಈ ಕೆಳಗಿನ ಚಿತ್ರಪಟದಲ್ಲಿರುವ ವರದಿಯಿಂದ ತಿಳಿದುಕೊಳ್ಳಬಹುದಾಗಿದೆ.

 

 

ಕೆಲ ರಾಜ್ಯಗಳ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಟೀವಿ ಜಾಹೀರಾತಿಗಾಗಿ ಸಾಕಷ್ಟು ಖರ್ಚು ಮಾಡುತ್ತಿರುವುದು ತಿಳಿದು ಬಂದಿದ್ದು ಜಾಹೀರಾತಿಗಾಗಿ ಹಣ ವ್ಯಯಿಸುವ ವಿಚಾರದಲ್ಲಿ ವಾಣಿಜ್ಯ ಕಂಪನಿಗಳನ್ನು ಬಿಜೆಪಿ ಹಿಂದಿಕ್ಕಿರುವ ವಿಚಾರ ಸಧ್ಯಕ್ಕೆ ಸಾಮಾಜಿಕ ಜಾಲತಾಣಗಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಆಡಳಿತಾರೂಢ ಪಕ್ಷವೊಂದು ಜಾಹೀರಾತು ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇರಬಹುದು ಎಂದು ಒಂದು ಖಾಸಗಿ ಜಾಲತಾಣ ಶುಕ್ರವಾರ ವರದಿ ಮಾಡಿದೆ.

ಈ ವಿಚಾರದ ಕುರಿತು ರಾಜ್ಯ ಸಭಾ ಸದಸ್ಯರಾದ ಜಿ.ಸಿ ಚಂದ್ರಶೇಖರ್ ರವರು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರೆಯಾದ ಪ್ರಿಯಾಂಕಾ ಚತುರ್ವೇದಿ ಯವರು ತಮ್ಮ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೀಗೆ ಟ್ವೀಟ್ ಮಾಡಿದ್ದಾರೆ :

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top