fbpx
ಮನೋರಂಜನೆ

ಪೊಲೀಸ್ ಜೀಪ್ ದುರ್ಬಳಿಕೆ ಮಾಡಿಕೊಂಡರೇ ‘ಪ್ರಜಾಕಾರಣಿ’ ಉಪೇಂದ್ರ?

ಪ್ರಜಾಕೀಯ ಅಂತೊಂದು ಪಕ್ಷ ಮಾಡಿ ಇಡೀ ರಾಜಕೀಯ ವ್ಯವಸ್ಥೆಯ ದಿಕ್ಕುದೆಸೆಗಳನ್ನೇ ಬದಲಾಯಿಸುತ್ತೇನೆಂಬಂತೆ ಪುಟಿದೆದ್ದಿದ್ದವರು ಉಪೇಂದ್ರ. ಆದರೆ ಹಳೆ ಪಕ್ಷದಿಂದ ಆಚೆ ಬಂದ ಮೇಲೆ ಚುನಾವಣೆಯೂ ಮುಗಿದು ಸಮ್ಮಿಶ್ರ ಸರ್ಕಸ್ಸು ಆರಂಭವಾದ ನಂತರ ಪ್ರಜಾಕೀಯ ನೆಲೆಗಟ್ಟಿನಲ್ಲಿಯೇ ತಮ್ಮದೇ ಪಕ್ಷವನ್ನೂ ಸ್ಥಾಪಿಸಿದ್ದಾರೆ ಸಮಯ ಸಿಕ್ಕಾಗಲೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಜಾಕೀಯದ ತತ್ವ ಸಿದ್ದಾಂತಗಳ ಬೋಧನೆ ಮಾಡುತ್ತಿರುವ ಉಪ್ಪಿ ಪೊಲೀಸ್‌ ಜೀಪ್‌ ಹತ್ತುವ ವಿಡಿಯೋ ವೈರಲ್‌ ಆಗಿದ್ದು, ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಇದೇ ಬೆನ್ನಲ್ಲೇ ಉಪೇಂದ್ರ ನಡೆಗೆ ವಿರೋಧವು ಕೇಳಿಬರುತ್ತಿದೆ.

ನಿನ್ನೆ ಬಿಜಿಎಸ್​​ ಕಾಲೇಜಿನ ಕಾರ್ಯಕ್ರಮಕ್ಕೆ ಉಪೇಂದ್ರ ಅತಿಥಿಯಾಗಿ ಬಂದಿದ್ದರು. ಅಲ್ಲಿಂದ ಅವರು ಶೂಟಿಂಗ್​ ನಡೆಯುತ್ತಿರುವ ಜಾಗಕ್ಕೆ ಹೋಗಬೇಕಿತ್ತು. ಆದ್ರೆ ಟ್ರಾಫಿಕ್ ತುಂಬಾ ಇದ್ದುದ್ದರಿಂದ ಅವರ ಕಾರು ರಸ್ತೆ ಮದ್ಯೆ ಸಿಲುಕಿಕೊಂಡಿತ್ತು.. . ಟ್ರಾಫಿಕ್‌ನಿಂದಾಗಿ ಬೇರೆ ಗಾಡಿಗಳು ಕೂಡ ಬ್ಲಾಕ್ ಆಗಿದ್ದವು. ಸರಿಯಾದ ಸಮಯಕ್ಕೆ ಶೂಟಿಂಗ್​​ಗೆ ತೆರಳಬೇಕಿದ್ದರಿಂದ ಉಪೇಂದ್ರ ಹಾಗೂ ಕೆ. ಮಂಜು ಪೊಲೀಸ್​​​ ಜೀಪ್​ನಲ್ಲಿ ಡ್ರಾಪ್ ಪಡೆದುಕೊಂಡಿದ್ದಾರೆ., ಈ ವಿಡಿಯೋ ಫೇಸ್ಬುಕ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸರ್ಕಾರೀ ವಾಹನ ದುರ್ಬಳಿಕೆ ಮಾಡಿಕೊಂಡರೇ ಉಪೇಂದ್ರ?
ಉಪೇಂದ್ರ ಅವ್ರು ಪದೇ ಪದೇ ವ್ಯವಸ್ಥೆಯಲ್ಲಿ ಈಗ ಇರುವ ವಿಐಪಿ ಟ್ರೀಟ್ ಮೆಂಟ್ ಬಗ್ಗೆ ಮಾತನಾಡುತ್ತಿರುತ್ತಾರೆ. ತಮ್ಮ ಪ್ರಜಕೀಯದ ತತ್ವ ಸಿದ್ದಾಂತ ವಿಐಪಿ ಟ್ರೀಟ್ ಮೆಂಟ್ ವಿರುದ್ಧವಾಗಿದೆ ಎಂದು ಹೇಳುತ್ತಿರುತ್ತಾರೆ., ಆದರೆ ತಾವೇ ಸರ್ಕಾರೀ ವಾಹನವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆಯೇ? ಎಂಬ ಪ್ರಶ್ನೆ ಕಾಡುತ್ತಿದೆ. ಯಾಕೆಂದರೆ ಪೊಲೀಸ್ ಜೀಪು ಇರುವುದು ಟ್ರಾಫಿಕ್ ನಲ್ಲಿರುವ ವ್ಯಕ್ತಿಯೊಬ್ಬರನ್ನು ಡ್ರಾಪ್ ಮಾಡಲು ಅಲ್ಲ.. ತಮ್ಮ ಸ್ವಂತಕ್ಕೆ ಸರ್ಕಾರಿ ಜೀಪನ್ನು ಬಳಸಿಕೊಂಡಿದ್ದು ಎಷ್ಟು ಸರಿ? ಜನಸಾಮಾನ್ಯರು ಟ್ರಾಫಿಕ್​​ನಲ್ಲಿ ಸಿಲುಕಿದ್ದರೆ ಹೀಗೆ ಮಾಡಬೇಕಾ? ಸಾಮಾನ್ಯ ವ್ಯಕ್ತಿಗಳನ್ನೂ ಪೊಲೀಸ್ ಜೀಪಿನಲ್ಲಿ ಹೀಗೆ ಹತ್ತಿಸಿಕೊಂಡು ಡ್ರಾಪ್ ಮಾಡುತ್ತಾರೆಯೇ? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top