fbpx
ಸಮಾಚಾರ

ಸಾವಿನಲ್ಲಿ ತನ್ನ ಅಣ್ಣನನ್ನೇ ಹಿಂಬಾಲಿಸಿದ ಜಲೀಲ – ಇದು ಕಾಕತಾಳೀಯವೋ ಅಥವಾ ವಿಚಿತ್ರವೋ?

ಸ್ಯಾಂಡಲ್ ವುಡ್ ನ ‘ಜಲೀಲ’ ಎಂದೇ ಖ್ಯಾತರಾದ ನಟ ಅಂಬರೀಶ್ ರವರು ಇದೇ ಶನಿವಾರ ಇಹಲೋಕ ತ್ಯಜಿಸಿದ್ದು ಇದರಿಂದಾಗಿ ಇಡೀ ಕರ್ನಾಟಕವೇ ದುಃಖಸಾಗರದಲ್ಲಿ ಮುಳುಗಿ ಹೋಗಿದೆ.
ಇದೇ ದಿನ ಮಂಡ್ಯದ ವಿಸೀ ನಾಲೆಯ ದುರಂತವು ನಡೆದಿದ್ದು ಅದರೊಂದಿಗೆ ಮಂಡ್ಯದ ಗಂಡು ಕೂಡ ಬಾರದ ಲೋಕಕ್ಕೆ ಹೋಗಿರುವುದು ಮಂಡ್ಯದ ಜನತೆಗೆ ದೊಡ್ಡ ಆಘಾತವನ್ನುಂಟು ಮಾಡಿದೆ ಎಂದರೆ ಸುಳ್ಳಲ್ಲ.

ಅನಾರೋಗ್ಯದಿಂದ ಬಳಲುತ್ತಿದ್ದ ಅಂಬರೀಶ್ ನವೆಂಬರ್ 24 ರ ರಾತ್ರಿ 10:15 ಸುಮಾರಿಗೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆದರೆ ವಿಪರ್ಯಾಸ ಏನಂದ್ರೆ, ಅಂಬರೀಶ್ ರವರ ಸಹೋದರ ಡಾ.ಹರೀಶ್ ವಿಧಿವಶರಾಗಿ ಈ ಶನಿವಾರಕ್ಕೆ ಸರಿಯಾಗಿ ಒಂದು ವರ್ಷವಾಗಿದೆ.

ಹೌದು, ಕಳೆದ ವರ್ಷ, ಅಂದರೆ ನವೆಂಬರ್ 24, 2017 ರಂದು ಅಂಬರೀಶ್ ಅವರ ಅಣ್ಣ ಡಾ.ಹರೀಶ್ ಕೊನೆಯುಸಿರೆಳೆದಿದ್ದರು. ವಿಚಿತ್ರ ಅಂದ್ರೆ, ಈ ವರ್ಷದ ನವೆಂಬರ್ 24 ರಂದು ಅಂಬರೀಶ್ ಅಣ್ಣನನ್ನೇ ಹಿಂಬಾಲಿಸಿದ್ದು ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ.

ಶನಿವಾರ ಮೃತಪಟ್ಟ ಅಂಬರೀಶ್ ರವರ ಪಾರ್ಥೀವ ಶರೀರವನ್ನ ಮಂಡ್ಯದ ‌ಜನತೆಯ‌ ಕೋರಿಕೆಯ ಮೇರೆಗೆ ಮಂಡ್ಯ ಗೆ ಕರೆದುಕೊಂಡು ಹೋಗಿದ್ದು ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಕುಮಾರ್ ಸ್ಮಾರಕ ಪಕ್ಕದಲ್ಲೆ ಅಂಬರೀಶ್ ರವರ ಅಂತಿಮ ಸಂಸ್ಕಾರ ನಡೆಸಲು ಸರ್ಕಾರ ತೀರ್ಮಾನಿಸಿದೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top