fbpx
ಅರೋಗ್ಯ

ಕಲ್ಲಂಗಡಿ ಬೀಜಗಳಿಂದಾಗೋ ಆರೋಗ್ಯಕಾರಿ ಪ್ರಯೋಜನಗಳೇನು ಗೊತ್ತಾ

ಕಲ್ಲಂಗಡಿ ಹಣ್ಣು ತಿನ್ನುವಾಗ ಅದರ ಬೀಜವನ್ನು ಉಗಿದು ಬೇಡುತೇವೆ. ಆದರೆ ಅದು ನೀಡುವ ಆರೋಗ್ಯಕರ ಉಪಯೋಗಗಳನ್ನ ತಿಳ್ಕೊಂಡರೆ ಉಗಿಯುವುದನ್ನ ಖಂಡಿತ ಬಿಡುತ್ತೀರಾ.ಅಂತಹದ್ದೇನಿದೆ ಅದರಲ್ಲಿ ಎನ್ನುತೀರಾ ? ಕಲ್ಲಂಗಡಿ ಹಣ್ಣಿನ ಜೊತೆ ಹಸಿಯಾಗಿ ತಿನ್ನಲು ಇಷ್ಟವಿಲ್ಲದಿದ್ದರೆ , ಒಣಗಿಸಿ ಕುರು ಎಂದು ಸವಿಯಬಹುದು . ಇದರಲ್ಲಿ ಸೆಲೆನಿಯಂ , ಪೊಟ್ಯಾಶಿಯಂ , ಅಂಶ ಜಾಸ್ತಿಯಿದೆ ಎಂದು ಸಂಶೋಧಕರು ಹೇಳುತ್ತಾರೆ .

 

 

 

ಇದನ್ನು ತಿನ್ನುದರಿಂದ ಹೃದಯ ಆರೋಗ್ಯಕ್ಕೆ ಒಳ್ಳೆಯದಂತೆ . ಅಲ್ಲದೆ ರಕ್ತದೊತ್ತಡ ಏರುವುದಿಲ್ಲ ಜೊತೆಗೆ ದೇಹದ ರೋಗ ನಿರೋಧಕ ಶಕ್ತಿ ಇನ್ನಷ್ಟು ಜಾಸ್ತಿಯಾಗುತ್ತದೆಂತೆ ಇನ್ನು ಇದರಲ್ಲಿ “ಶುಗರ್” ಲೆವೆಲ್ ನಿಯಂತ್ರಣದಲ್ಲಿಡುವ ಗುಣವಿರುವ ಕಾರಣ ಮಧುಮೇಹಿಗಳಿಗಂತೂ ಭಾರಿ ಒಳ್ಳೆಯದು ಅಂತ್ತಾರೆ.

 

 

 

ಹೀಗಾಗಿ ವಾರಕ್ಕೆರೆಡು ಭಾರಿ ತಲಾ ಅರ್ಧ ಚಮಚ ಕಲ್ಲಂಗಡಿ ಹಣ್ಣಿನ ಬೀಜ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.ಆದರೆ ನೆನಪಿಡಿ, ಬೇಯಿಸಿ ಅಥವಾ ಫ್ರೈ ಮಾಡಿ ತಿನ್ನುವುದರಿಂದ ಪ್ರಯೋಜನವಿಲ್ಲ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top