fbpx
ಸಮಾಚಾರ

ನಾಗಪಾತ್ರಿ ಗುರುತಿಸಿದ ಸ್ಥಳದಲ್ಲೇ ತ್ರಿಶೂಲ, ನಾಗ ಬಿಂಬ ಪತ್ತೆ- ಅಚ್ಚರಿಗೊಳಗಾದ ಜನತೆ

‘ಶಿವಮೊಗದಲ್ಲಿ ಮಾಧ್ಯಮಗಳ ಸಮ್ಮುಖದಲ್ಲಿ ನಾಗಬಿಂಬ ಇರುವ ಸ್ಥಳವನ್ನು ಹೇಳಿ, ಅವರ ಮುಂದೆಯೇ ತೆಗೆಸುತ್ತೇನೆ’ ಎಂದು ಜಿಲ್ಲೆಯ ತೀರ್ಥಹಳ್ಳಿ ನಾಗಪಾತ್ರಿ ನಾಗರಾಜಭಟ್ಟರು ಸವಾಲು ಹಾಕಿದ್ದು, ಈಗ ಅವರು ಹಾಕಿದ್ದ ಸವಾಲಿನಲ್ಲಿ ಗೆದ್ದಿದ್ದಾರೆ ಎಂಬುದು ಕಂಡುಬಂದಿದೆ.

ಗುಡ್ಡೆಕೊಪ್ಪ ಗ್ರಾಮ ಪಂಚಾಯ್ತಿಯ ಮರಗಳಲೆ ವೆಂಕಟಪೂಜಾರಿ ಎಂಬವರ ಹಿತ್ತಲಿನಲ್ಲಿ ಒಂದು ಮರದ ಕೆಳಗೆ ನಾಗಬಿಂಬ, ತ್ರಿಶೂಲ ಇದೆ ಎಂದು ನಾಗಪಾತ್ರಿ ನಾಗರಾಭಟ್ಟರು ಹೇಳಿ ಬಳಿಕ ಪತ್ತೆ ಹಚ್ಚಿದ್ದಾರಂತೆ. ಈಗ ನಾಗಪಾತ್ರಿ ನಾಗರಾಜಭಟ್ಟರು ಗುರುತಿಸಿದ ಸ್ಥಳದಲ್ಲೇ ತ್ರಿಶೂಲ ಮತ್ತು ನಾಗ ಬಿಂಬ ಪತ್ತೆಯಾಗಿರುವುದು‌ ಕುತೂಹಲವನ್ನು ಮೂಡಿಸಿದೆಯಂತೆ .

ಈ ಬಗೆ ಮಾತನಾಡಿದ ಮನೆಯ ಮಾಲಿಕ ನಾಗಪ್ಪ ”ಬುಧವಾರ ನಾನು ಮನೆಗೆ ಹೋಗಿ ಸಮಸ್ಯೆ ಇದೆ ಎಂದು ಹೇಳಿಕೊಂಡಿದ್ದೆ. ಆಗ ಒಂದು ತ್ರಿಶೂಲ, ಕಲ್ಲು ಇದೆ ಎಂದು ಹೇಳಿದ್ದರು. ಇದಕ್ಕೂ ಮೊದಲು ಅವರು ಇಲ್ಲಿಗೆ ಬಂದು ನೋಡಿಲ್ಲ. ಇಂದು ಬೆಳಗ್ಗೆ ಬಂದು ಎಲ್ಲರೂ ಬಂದು ಮಾಧ್ಯಮಗಳು ಮತ್ತು ಗ್ರಾಮಸ್ಥರ ಮುಂದೆಯೇ ತೆಗೆಸಿದ್ದಾರೆ” ಎಂದು ಹೇಳಿದ್ದಾರೆ.

ಕಳೆದ ಶನಿವಾರ ಉಡುಪಿ ಜಿಲ್ಲೆಯ ಹೆಬ್ರಿ ಸಮೀಪದ ಮುದ್ರಾಡಿಯಲ್ಲಿ ಮನೆಯ ವರಾಂಡ ದಲ್ಲಿ ಆರು ಅಡಿ ಒಳಗೆ ಇದ್ದ ನಾಗ ದೇವರ ವಿಗ್ರಹ ತೆಗೆದಿದ್ದರು. ದಿವ್ಯಶಕ್ತಿಯಿಂದ ಆ ವಿಗ್ರಹವನ್ನು ತೆಗೆದಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈ ಘಟನೆ ಬಗ್ಗೆ ನಾಗಪಾತ್ರಿ ನಾಗರಾಜ ಭಟ್ಟರ ದೈವಿಶಕ್ತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ಮತ್ತು ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತು ಇದರಿಂದಾಗಿ ನಾಗಪಾತ್ರಿ ಅವರು ಸತ್ಯವನ್ನು ಸಾಬೀತುಪಡಿಸುವುದಾಗಿ ಸವಾಲು ಹಾಕಿದ್ದರು.

ಇಂದು ಮುಂಜಾನೆ ಮಾಧ್ಯಮಗಳ ಮುಂದೆಯೇ ನಾಗಶಕ್ತಿಯ ಪವಾಡ ಬಯಲು ಮಾಡಲು ಪ್ರಸಿದ್ಧ ನಾಗಪಾತ್ರಿ ನಾಗರಾಜಭಟ್ಟರು ಮುಂದಾಗಿದ್ದು, ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದ ಸಮೀಪದ ಸ್ಥಳವೊಂದರಲ್ಲಿ ನಾಗಶಕ್ತಿ ಇದೆ, ಆ ಜಾಗದ ಬಗ್ಗೆ ಮಾಧ್ಯಮಗಳಿಗೆ ಮೊದಲು ಮಾಹಿತಿ ನೀಡುತ್ತೇನೆ. ನಿಮ್ಮ ಸಮ್ಮುಖದಲ್ಲೇ ಉತ್ಖನನ ನಡೆಯಲಿ. ನನಗಿರುವ ದೈವ ಬಲದ ಸುಳ್ಳೋ- ಸತ್ಯವೋ ಎಂಬುದು ನಿರ್ಧಾರ ಆಗಲಿ ಎಂದು ಸ್ವಯಂ ಪರೀಕ್ಷೆಗೆ ಸಜ್ಜಾಗಿ ಗೆದ್ದಿದ್ದಾರೆ ಎಂಬ ಸುದ್ದಿ ಜನಜನಿತವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top