ಹೆಚ್ಚಿನ

ಶಾಸ್ತ್ರಗಳ ಪ್ರಕಾರ ಸಂಪತ್ತು ,ಸಮೃದ್ಧಿ ಮತ್ತು ಬುದ್ಧಿ ಶಕ್ತಿ ಹೆಚ್ಚಾಗಬೇಕಾದ್ರೆ ಈ 3 ಮಂತ್ರಗಳನ್ನು ದಿನಾಗಲೂ ತಪ್ಪಿಸದೇ ಜಪಿಸಿ.

ಜೀವನವೆಂಬ ಬಂಧನದಿಂದ ಬಿಡಿಸಿಕೊಳ್ಳುವುದಕ್ಕೆ ಹಾಗೂ ಮೋಕ್ಷ ಪಡೆಯುವುದಕ್ಕೆ ಮನಸ್ಸೇ ಮುಖ್ಯ ಕಾರಣವಾಗುತ್ತದೆ. ಸಂಪತ್ತು ,ಬುದ್ಧಿವಂತಿಕೆ ಹೆಚ್ಚಬೇಕೆಂದರೆ ಮನಸ್ಸು ನಿರ್ಮಲವಾಗಿರುವುದು ಅತೀ ಮುಖ್ಯವಾಗಿರುತ್ತದೆ. ಅಂತೆಯೇ ಮನಸ್ಸನ್ನು ನಿರ್ಮಲವಾಗಿಟ್ಟುಕೊಳ್ಳಲು ಸಹಕಾರಿಯಾಗುವಂತೆ ಸನಾತನ ಧರ್ಮದಲ್ಲಿ ಋುಷಿ ಮುನಿಗಳು ಹಲವು ತಂತ್ರಗಳನ್ನು ಹೇಳಿಕೊಟ್ಟಿದ್ದಾರೆ.ಮನಸ್ಸನ್ನು ನಿಗ್ರಹಿಸಿ ಬುದ್ಧಿವಂತಿಕೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಬ್ರಹ್ಮರ್ಷಿ ವಿಶ್ವಾಮಿತ್ರರು ಗಾಯತ್ರಿ ಮಂತ್ರವನ್ನು ರಚಿಸಿದ್ದಾರೆ. ಇಪ್ಪತ್ತ್ನಾಲ್ಕು ಅಕ್ಷರಗಳ ಒಂದು ಛಂದಸ್ಸಿನ ಗಾಯತ್ರಿ ಮಂತ್ರಕ್ಕೆ ಸಮನಾದ ಮಂತ್ರ ವೇದದಲ್ಲಿಯೇ ಮತ್ತೊಂದಿಲ್ಲ ಎನ್ನುತ್ತಾರೆ ಋಷಿಗಳು.

 

 

 

ಬ್ರಹ್ಮದೇವನು ಮೂರು ವೇದದ ಸಾರವನ್ನು ಗಾಯಿತ್ರಿ ನಂತರದ ಮೂರು ಚರಣಗಳಲ್ಲಿ ತುಂಬಿಸಿ ಕೊಟ್ಟಿರುವರು. ಗಾಯಿತ್ರಿಯಿಂದ ಸರ್ವ ರೀತಿಯ ಸುಖ ಪ್ರಾಪ್ತಿಯಾಗುತ್ತದೆ ಎನ್ನುತ್ತಾನೆ ಭಗವಂತನಾದ ಮನು. ಎಲ್ಲಾ ಮಂತ್ರ, ಪೂಜೆ ಮತ್ತು ಪುನಸ್ಕಾರಗಳಿಗೆ ಅತಿ ಎತ್ತರದಲ್ಲಿ ರಾರಾಜಿಸುವುದು ಗಾಯತ್ರಿ ಮಹಾಮಂತ್ರ.ಅದೇ ಗಾಯತ್ರಿ ಮಹಾಮಂತ್ರ ಎನಿಸಿಕೊಂಡಿದೆ. ಅಥರ್ವಣ ವೇದದಲ್ಲಿ ಗಾಯತ್ರಿ ಮಂತ್ರವನ್ನು ಶಕ್ತಿ, ಧನ, ಸಂಪತ್ತು ಮತ್ತು ಬ್ರಹ್ಮ ತೇಜಸ್ಸನ್ನು ನೀಡುವ ಮಹಾಮಾತೆ ಎಂದು ಉಲ್ಲೇಖಿಸಿದ್ದಾರೆ .ಇನ್ನು ಮಹಾಭಾರತವನ್ನು ರಚಿಸಿದ ವ್ಯಾಸ ಮಹರ್ಷಿಗಳು ಸಹ ಗಾಯತ್ರಿ ಮಂತ್ರವನ್ನು ಕೊಂಡಾಡಿದ್ದು, ಗಾಯತ್ರಿಯನ್ನು ಪಕ್ವಾನ್ನ ಅಂದರೆ ಮೃಷ್ಟಾನ್ನಕ್ಕೆ ಹೋಲಿಕೆ ಮಾಡಿದ್ದಾರೆ. ಗಾಯತ್ರಿಯು ಲೋಕಕ್ಕೆ ತಾಯಿ, ಪರಬ್ರಹ್ಮನ ಸ್ವರೂಪ ಉಳ್ಳವಳು, ಶ್ರೇಷ್ಠ ಸಂಪತ್ತನ್ನು ಕೊಡುವವಳು, ಜಪಿಸಲು ಯೋಗ್ಯಳು, ಬ್ರಹ್ಮ ತೇಜಸ್ಸನ್ನು ಹೆಚ್ಚಿಸುವವಳೂ ಆಗಿದ್ದಾಳೆ .

 

 

 

ಗಾಯತ್ರಿ ಮಂತ್ರವನ್ನು. “ಓಂ ಭೂಭುರ್ವಃ ಸ್ವಹ ತತ್ಸ ವಿತುರ್ವರೇಣ್ಯo , ಭರ್ಘೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್”ಈ ಮಂತ್ರವನ್ನು ಜಪಿಸುವುದರಿಂದ ಏಕಾಗ್ರತೆ ಹೆಚ್ಚಲಿದ್ದು , ಮನಸ್ಸನ್ನು ನಿಯಂತ್ರಿಸಿ ಇಷ್ಟಾರ್ಥಗಳನ್ನು ಸಿದ್ಧಿಸುವ ಮನೋಬಲ ಸಿದ್ಧಿಸುತ್ತದೆ. ಈ ಮೂಲಕ ಸಂಪತ್ತು , ಬುದ್ಧಿ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂಬ ನಂಬಿಕೆ ಇದೆ .ಸಂಪತ್ತಿನ ವೃದ್ಧಿಗಾಗಿ ಜಪಿಸಬೇಕು ಮತ್ತೊಂದು ಮಂತ್ರವೆಂದರೆ , ಅದು ವಿಷ್ಣುವಿನ ಮಂತ್ರ ಮಹಾವಿಷ್ಣು ಸಂಪತ್ತಿನ ಅಧಿದೇವತೆಯಾಗಿರುವ ಲಕ್ಷ್ಮೀ ದೇವಿಯ ಪತಿ.“ಓಂ ನಾರಾಯಣಾಯ ವಿದ್ಮಹೀ ವಾಸುದೇವಾಯ ಧೀಮಹಿ , ತನ್ನೋ ವಿಷ್ಣು ಪ್ರಚೋದಯಾತ್”ಲಕ್ಷ್ಮೀ ದೇವಿಯ ಪತಿಯ ಮಂತ್ರವನ್ನು ಜಪಿಸಿದರೆ ಸಂಪತ್ತು ವೃದ್ಧಿಸಲಿದೆ ಎಂಬ ನಂಬಿಕೆ ಇದೆ .“ಓಂ ಮಹಾಲಕ್ಷಮೈಚ ವಿದ್ಮಹೇ, ವಿಷ್ಣು ಪತ್ನಿಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್”ಈ ಮಂತ್ರವು ಸಹ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಇರುವ ಮಂತ್ರವಾಗಿದ್ದು, ಈ ಮಂತ್ರವನ್ನು ಜಪಿಸಿದರು ಸಹ ಸಂಪತ್ತು ,ಸಮೃದ್ಧಿ ಹೆಚ್ಚಲಿದೆ ಎಂಬ ದೃಢ ನಂಬಿಕೆ ಇದೆ . ಸಂಪತ್ತು ಮತ್ತು ಬುದ್ಧಿವಂತಿಕೆ ಹೆಚ್ಚಬೇಕೆಂದರೆ ಮನಸ್ಸು ನಿರ್ಮಾಲವಾಗಿರುವುದು ಅತಿ ಮುಖ್ಯವಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top