ಮಾಹಿತಿ

ಎರಡೇ ದಿನದಲ್ಲಿ ಬಂದ್ ಆಗಲಿದೆ ಎಸ್‌ಬಿಐ ನ ಈ ಬೃಹತ್ ಸೇವೆಗಳು – ಎಸ್‌ಬಿಐ ನ ಗ್ರಾಹಕರು ತಪ್ಪದೇ ತಿಳಿದುಕೊಳ್ಳಿ.

ನೀವು ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ದ ಗ್ರಾಹಕರೇ? ಹಾಗಾದರೆ ನೀವು ಈ ಸುದ್ದಿಯನ್ನು ಪೂರ್ಣವಾಗಿ ಓದಿ ತಿಳಿದುಕೊಳ್ಳಿ. ಮುಂದಿನ ಎರಡು ದಿನಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ 4 ದೊಡ್ಡ ಸೇವೆಗಳನ್ನು ನಿಲ್ಲಿಸುತ್ತಿದೆ ಎಂಬ ಮಾತುಗಳು ಎಲ್ಲೆಡೆಯಿಂದ ಹರಿದು ಬರುತ್ತಿದ್ದು, ಹೀಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರು ಎಚ್ಚೆತ್ತುಕೊಳ್ಳ ಬೇಕಾಗಿದೆ.

ಹೌದು, ಡಿಸೆಂಬರ್ 1 ರಿಂದ ಎಸ್.ಬಿ.ಐ ಕೆಳಕಂಡ ಈ ನಾಲ್ಕು ಸೇವೆಗಳನ್ನು ಸ್ಥಗಿತಗೊಳಿಸುತ್ತಿದೆ :

ಪಿಂಚಣಿ ಸಾಲದ ಸೌಲಭ್ಯ ಕ್ಕೆ ಎಸ್‌ಬಿಐ ನಿಂದ ತಿಲಾಂಜಲಿ :

ಎಸ್‌ಬಿಐ ನಲ್ಲಿ ಪಿಂಚಣಿ ಪಡೆಯುವವರಿಗೆ ಹಬ್ಬದ ಋತುವಿನಲ್ಲಿ ಸಾಲ ನೀಡುವ ಸೌಲಭ್ಯವನ್ನು ಪ್ರಾರಂಭಿಸಲಾಯಿತು. ಎಸ್ಬಿಐನ ಯಾವುದೇ ಶಾಖೆಯಲ್ಲಿ ಪಿಂಚಣಿ ಬರುವವರಿಗೆ ಈ ಅವಕಾಶವನ್ನು ಕಲ್ಪಿಸಲಾಗಿತ್ತು .ಈ ಯೋಜನೆಯಡಿಯಲ್ಲಿ ಯಾವುದೇ ಪ್ರಕ್ರಿಯೆ ಶುಲ್ಕವಿಲ್ಲದೆ ಸಾಲ ಸೌಲಭ್ಯ ನೀಡಲಾಗಿತ್ತು. ಬ್ಯಾಂಕ್ ಪ್ರಕಾರ, 76 ವರ್ಷದೊಳಗಿನ ಕೇಂದ್ರ, ರಾಜ್ಯ ಮತ್ತು ಸೇನೆಯಿಂದ ನಿವೃತ್ತಿ ಹೊಂದಿದ ನಿವೃತ್ತಿ ವೇತನದಾರರಿಗೆ ಈ ಅವಕಾಶವನ್ನು ಪ್ರಾರಂಭಿಸಲಾಗಿತ್ತು. ಆದರೆ ಈ ಸೇವೆ ನವೆಂಬರ್ 30 ರಂದು ಕೊನೆಗೊಳ್ಳಲಿದ್ದು ಇದರಿಂದ ಕೆಲವರಿಗೆ ನಿರಾಶೆಯಾಗುವುದಂತೂ ಖಚಿತ.

ಎಸ್‌ಬಿಐ ನ ‘ನೆಟ್ ಬ್ಯಾಂಕಿಂಗ್’ ಸೇವೆ ಬಂದ್ ಆಗಲಿದೆ :

ಎಸ್ ಬಿ ಐ ತನ್ನೆಲ್ಲ ಗ್ರಾಹಕರಿಗೆ ನವೆಂಬರ್ ಅಂತ್ಯದೊಳಗೆ ತಮ್ಮ ಬ್ಯಾಂಕ್ ಖಾತೆ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಲು ಈ ಮುಂಚೆಯೇ ಸೂಚಿಸಿತ್ತು ಹಾಗೂ ಎಲ್ಲಾ ಗ್ರಾಹಕರೂ ನವೆಂಬರ್ 30ರೊಳಗೆ ತಮ್ಮ ತಮ್ಮ ಮೊಬೈಲ್ ನಂಬರ್ ನ್ನೂ ಎಸ್‌ಬಿಐ ಗೆ ನೀಡಬೇಕು ಎಂಬ ಆದೇಶವನ್ನು ಹೊರಡಿಸಿತ್ತು. ಎಸ್‌ಬಿಐ ನಿಗದಿ ಪಡಿಸಿರುವ ಸಮಯದಲ್ಲಿ ನೀವು ಮೇಲೆ ಹೇಳಿರುವ ಕೆಲಸ ಮಾಡದೇ ಹೋದಲ್ಲಿ ಬ್ಯಾಂಕ್ ನಿಮ್ಮ ಖಾತೆಯನ್ನು ರದ್ದು ಮಾಡುವುದಂತೆ ಹಾಗೂ ಅದಾದನಂತರ ನಿಮ್ಮ ಖಾತೆಯಿಂದ ಆನ್ಲೈನ್ ಮೂಲಕ ಯಾವುದೇ ವ್ಯವಹಾರ ನಡೆಸಲು ಸಾಧ್ಯವಾಗುವುದಿಲ್ಲವಂತೆ.

ಈ ಕುರಿತು ಎಸ್ ಬಿ ಐ ತನ್ನ ಅಫೀಷಿಯಲ್ ವೆಬ್ಸೈಟ್ ನಲ್ಲಿ ಮಾಹಿತಿ ನೀಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿಯಂತೆ ನೀವು ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಪಡೆಯುತ್ತಿದ್ದರೆ ಬ್ಯಾಂಕ್ ಖಾತೆಗೆ ಮೊಬೈಲ್ ನಂಬರ್ ಲಿಂಕ್ ಮಾಡುವುದು ಅನಿವಾರ್ಯವೆಂದು ಬ್ಯಾಂಕ್ ಸಾರಿ ಹೇಳಿದೆ.

ಮೊಬೈಲ್ ವ್ಯಾಲೆಟ್ ಬಡ್ಡಿ ಸೇವೆ ಬಂದ್ ಮಾಡಲಿದೆ ಎಸ್‌ಬಿಐ :

ಎಸ್‌ಬಿಐ ನ ಪ್ರಮುಖ ಸೇವೆಗಳಲ್ಲಿ ಒಂದಾದ ಬಡ್ಡಿ ಮೊಬೈಲ್ ವ್ಯಾಲೆಟ್ ಸೇವೆಯು ಈ ನವೆಂಬರ್ 30 ಕ್ಕೆ ಬಂದ್ ಆಗಲಿದೆ. ಇದರ ಬದಲಿಗೆ 2017 ರ ಕೊನೆ ಅವಧಿಯಲ್ಲಿ ಚಾಲ್ತಿಗೆ ಬಂದಿದ್ದ ಎಸ್‌ಬಿಐ ನ ‘ಯೋನೋ’ ಅನ್ನು ಮುಂದುವರಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂದು ಎಸ್‌ಬಿಐ ತಿಳಿಸಿದೆ. ಯಾವುದೇ ಹಣ ಜಮಾವಣೆ ಆಗದ ಮೊಬೈಲ್ ವ್ಯಾಲೆಟ್ಗಳು ಈಗಾಗಲೇ ಮುಚ್ಚಲ್ಪಡುತ್ತಿವೆ ಎಂಬ ಮಾಹಿತಿಗಳು ಹೊರ ಬಿದ್ದಿವೆ.

ಪಿಂಚಣಿ ಬೇಕೆಂದರೆ ಜೀವನ ಪ್ರಮಾಣಪತ್ರ ಸಲ್ಲಿಸಲೇಬೇಕು :

ನೀವು ಅಥವಾ ನಿಮ್ಮ ಕುಟುಂಬದ ಯಾವುದೇ ಸದಸ್ಯರು ನಿವೃತ್ತರಾಗಿದ್ದರೆ ಮತ್ತು ಅವರ ಪಿಂಚಣಿ ಎಸ್‌ಬಿಐ ನ ಯಾವುದೇ ಶಾಖೆಗೆ ಬರುತ್ತಿದ್ದರೆ, ನೀವು ನವೆಂಬರ್ 30 ರೊಳಗೆ ನಿಮ್ಮ ಜೀವನ ಪ್ರಮಾಣಪತ್ರವನ್ನು ಎಸ್ ಬಿ ಐ ಗೆ ಸಲ್ಲಿಸಬೇಕು. ನವೆಂಬರ್ 30, 2018 ಒಳಗೆ ತಮ್ಮ ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸಲು ಬ್ಯಾಂಕ್ ಎಲ್ಲಾ ಪಿಂಚಣಿದಾರರಿಗೆ ಮಾಹಿತಿ ಸೂಚಿಸಿದೆ ಎಂದು ತಿಳಿದು ಬಂದಿದೆ . ನವಂಬರ್ 30 ರೊಳಗೆ ಜೀವನ ಪ್ರಮಾಣಪತ್ರವನ್ನು ಸಲ್ಲಿಸದಿದ್ದರೆ ಪಿಂಚಣಿ ಪಡೆಯಲು ಮುಂದೆ ತೊಂದರೆಯಾಗಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top