ಹೆಚ್ಚಿನ

ನಿಮ್ಮ ಪರ್ಸ್ ಅಥವಾ ಹಣದ ಚೀಲದಲ್ಲಿ ಯಾವುದೇ ಕಾರಣಕ್ಕೂ ಈ ರೀತಿಯ ವಸ್ತುಗಳನ್ನು ಇಟ್ಟುಕೊಳ್ಳಬೇಡಿ ಅದು ದಾರಿದ್ರ್ಯ ತರುತ್ತೆ

ನಮ್ಮ ಪರ್ಸ್ ಗಳಲ್ಲಿ ತುಂಬಾ ವಸ್ತುಗಳನ್ನು ಸಾಮಾನ್ಯವಾಗಿ ಇಟ್ಟುಕೊಂಡಿರುತ್ತೇವೆ. ಕರವಸ್ತ್ರ, ಹಣ, ಮನೆಯ ಕೀಲಿ ಕೈ, ಈ ರೀತಿ ಇನ್ನೂ ಅನೇಕ ವಸ್ತುಗಳನ್ನು ಸಾಮಾನ್ಯವಾಗಿ ಇಟ್ಟುಕೊಂಡಿತ್ತೇವೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಪರ್ಸ್ ಅಥವಾ ವಾಲೆಟ್ ಅಥವಾ ಕೈ ಚೀಲದಲ್ಲಿ ಕೆಲವು ವಸ್ತುಗಳನ್ನು ಇಟ್ಟರೆ ಅಲ್ಲಿ ದುಡ್ಡಿನ ಅಂದರೆ ಹಣದ ಸಮಸ್ಯೆ ಹೆಚ್ಚಾಗಿ ಕಾಡುವುದು ಮತ್ತು ಅಂತಹ ವಸ್ತುಗಳು ಋಣಾತ್ಮಕ ಶಕ್ತಿಯನ್ನು ಕೂಡ ಹೆಚ್ಚಾಗಿ ಆಕರ್ಷಿಸುತ್ತವೆ.ಆದ್ದರಿಂದ ಅಂತಹ ವಸ್ತುಗಳನ್ನು ಎಂದು ಇಟ್ಟುಕೊಳ್ಳಬಾರದು ಹಾಗಾದರೆ ಆ ವಸ್ತುಗಳು ಯಾವುವು ? ಎಂದು ಮುಂದೆ ತಿಳಿಯೋಣ ಬನ್ನಿ.

 

 

 

ಹಳೆಯ ಬಿಲ್ ಗಳು, ಚೀಟಿಗಳು:ಹಳೆಯ ಬಿಲ್ ,ಚೀಟಿಗಳು ಅಥವಾ ಮಸೂದೆಗಳನ್ನು ಇಟ್ಟುಕೊಂಡರೆ, ಅವು ಹೆಚ್ಚಾಗಿ ಋಣಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಒಂದು ವೇಳೆ ಯಾವುದೋ ಕಾರಣಕ್ಕೆ ಆ ಚೀಟಿಗಳನ್ನು ಇಟ್ಟುಕೊಳ್ಳ ಬೇಕಾಗಿದ್ದರೆ ಮನೆಯಲ್ಲಿ ಅಥವಾ ಕಚೇರಿಯಲ್ಲಿ ಇಟ್ಟುಕೊಳ್ಳಿ ಪರ್ಸ್ ಅಥವಾ ಜೇಬಿನಲ್ಲಿ ಇಟ್ಟುಕೊಳ್ಳಬೇಡಿ.

ಪ್ರಚೋದನಕಾರಿ ಕೊಳಕು ಚಿತ್ರಗಳು:ಸತ್ತವರ ಫೋಟೋಗಳು, ಹಿಂಸೆ ನೀಡುತ್ತಿರುವ, ಯುದ್ಧ, ಕದನ, ಜಗಳ, ಭಯಾನಕ ಚಿತ್ರಗಳು ಹಾಗೂ ವಿಚಿತ್ರ ಅಥವಾ ದುಷ್ಟರ ಚಿತ್ರಗಳನ್ನು ಇಟ್ಟುಕೊಳ್ಳಬೇಡಿ. ಇವು ನಿಮ್ಮ ಮನಸ್ಸಿನ ಶಾಂತಿಯನ್ನು ಕೆಡಿಸುತ್ತವೆ ಅಷ್ಟೇ ಅಲ್ಲದೆ ನಿಮ್ಮ ಮನಸ್ಸಿನ ಮೇಲೆ ಭೀಕರ ಪರಿಣಾಮ ಬೀರುತ್ತವೆ. ಹಾಗಾಗಿ ಈ ರೀತಿಯ ಚಿತ್ರಗಳನ್ನು ಇಟ್ಟುಕೊಂಡಿದ್ದರೆ ಮೊದಲು ತೆಗೆದು ಹೊರಗೆ ಹಾಕಿ.ಹರಿದು ಹೋಗಿರುವ ಪರ್ಸ್:ಹರಿದು ಹೋಗಿರುವ ಪರ್ಸ್ ಅನ್ನು ಇಟ್ಟುಕೊಳ್ಳಬೇಡಿ. ನೀವು ಅದರಲ್ಲಿ ಹಣ ಇಟ್ಟುಕೊಂಡರೆ ಅದು ಉಳಿತಾಯವಾಗುವುದಿಲ್ಲ, ಬದಲಾಗಿ ಖರ್ಚಾಗಿ ಹೋಗುವುದು. ಬೇರೆಯವರ ಪರ್ಸ್ ಅನ್ನು ನೀವು ಬಳಸಬೇಡಿ. ಯಾಕೆಂದರೆ ನಿವು ಹಾಗೆ ಬಳಸುವುದರಿಂದ ನಿಮ್ಮ ಹಣ ಉಳಿಯುವುದಿಲ್ಲ ,ಬದಲಿಗೆ ನೀವು ಯಾರ ಪರ್ಸ್ ಬಳಸುತ್ತೀರೋ ಅವರಿಗೆ ಹಣ ಹೆಚ್ಚುತ್ತದೆ. ನೀವು ಒಂದು ಹೊಸ ಪರ್ಸ್ ತೆಗೆದುಕೊಂಡು ಇಟ್ಟುಕೊಳ್ಳಿ ಜೊತೆಗೆ ತೆಗೆದುಕೊಂಡಾಗ ಅದರೊಳಗೆ ಸ್ವಲ್ಪ ಹಣವನ್ನು ಇಟ್ಟುಕೊಳ್ಳಿ ಮುಂದೆ ಯಾವತ್ತೂ ಅದು ಖಾಲಿ ಪರ್ಸ್ ಆಗಿ ಉಳಿಯುವುದಿಲ್ಲ .

ಲೇಖನ ಪತ್ರಗಳು:ಹಳೆಯ ಅಥವಾ ಕೆಲಸಕ್ಕೆ ಬಾರದ ಲೇಖನ ಪತ್ರಗಳು ಅಥವಾ ಟಿಪ್ಪಣಿ ಚೀಟಿಗಳನ್ನು ಇಡಬೇಡಿ. ಜೊತೆಗೆ ಅವಶ್ಯಕತೆ ಇಲ್ಲದೇ ಇರುವ ವಿಸಿಟಿಂಗ್ ಕಾರ್ಡ್ ಗಳು ಅಥವಾ ಅವಧಿ ಮುಗಿದಿರುವ ವಿಸಿಟಿಂಗ್ ಕಾರ್ಡ್ಗಳನ್ನು ಇಡಬೇಡಿ. ಯಾವುದೇ ಅನವಶ್ಯಕ ಚೀಟಿ ಕಾರ್ಡುಗಳನ್ನು ಇಡಬೇಡಿ. ಇವು ನಿಮ್ಮ ಮನಸ್ಸನ್ನು ಹಾಳು ಮಾಡಿ ಹತಾಶೆ ಗೊಳಿಸುತ್ತವೆ. ಒಂದು ವೇಳೆ ಯಾವುದೇ ಟಿಪ್ಪಣಿ ಮತ್ತು ಲೇಖನ ಚೀಟಿಯನ್ನು ಎಲ್ಲಿಯಾದರೂ ತೆಗೆದುಕೊಂಡು ಹೋಗಬೇಕು ಎಂದರೆ ಹಣ ಇರುವ ಪರ್ಸ್ ನಲ್ಲಿ ಹಾಕಿ ಇಟ್ಟುಕೊಂಡು ಹೋಗಬೇಡಿ. ಬೇರೆ ಒಂದು ಪ್ಯಾಕೆಟ್ ನಲ್ಲಿ ತೆಗೆದುಕೊಂಡು ಹೋಗಿ.

 

 

 

ಕೈ ಚೀಲದಲ್ಲಿ ಸ್ನ್ಯಾಕ್ಸ್ ಕುರುಕಲು ತಿಂಡಿ:ನಿಮ್ಮ ಕೈಚೀಲದಲ್ಲಿ ಸ್ನಾಕ್ಸ್, ಜಂಕ್ ಫುಡ್ಗಳನ್ನು ಇಟ್ಟುಕೊಂಡು ಹೋಗಬೇಡಿ. ಇದು ನಿಮ್ಮ ಸೋಮಾರಿತನ ಮತ್ತು ಅಜಾಗರೂಕತೆಯನ್ನು ಪ್ರತಿನಿಧಿಸುತ್ತದೆ. ಜೊತೆಗೆ ಇವುಗಳನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳುವುದನ್ನು ತಪ್ಪಿಸಿದರೆ ಧನಾತ್ಮಕ ಶಕ್ತಿ ಹೆಚ್ಚುತ್ತದೆ.ಔಷಧಿಗಳು:ನಿಮ್ಮ ಪರ್ಸ್ ನಲ್ಲಿ ಸದಾ ಔಷಧಿಯನ್ನು ಇಟ್ಟುಕೊಂಡರೆ, ಅದು ಇನ್ನಷ್ಟು ಅನಾರೋಗ್ಯವನ್ನು ತರುತ್ತದೆ. ಕೆಲವರು ಯಾವಾಗಲೂ ಮಾತ್ರೆಗಳನ್ನು ಇಟ್ಟುಕೊಂಡೇ ಇರುತ್ತಾರೆ. ನೆಗಡಿ ಆಗಿಬಿಟ್ಟರೆ, ಕೆಮ್ಮ ಬಂದರೆ , ತಲೆ ನೋವು, ಬಂದರೆ ಎಂದು ಮುಂಜಾಗ್ರತೆಯ ಯೋಚನೆ ಮಾಡಿ, ಇಟ್ಟುಕೊಳ್ಳುತ್ತಾರೆ. ಬೇರೆ ಎಲ್ಲಾದರು ಅವುಗಳನ್ನು ಇಟ್ಟುಕೊಳ್ಳಿ. ಆದರೆ ಅದನ್ನು ಹಣದ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಡಿ.ಚೂಪಾದ ವಸ್ತುಗಳು:ಪರ್ಸ್ ನಲ್ಲಿ ಅದರಲ್ಲೂ ಮಹಿಳೆಯರು ತಮ್ಮ ಸುರಕ್ಷತೆಯ ದೃಷ್ಟಿಯಿಂದ ಚಾಕು, ಕತ್ತರಿ ಇಟ್ಟುಕೊಂಡಿರುತ್ತಾರೆ. ಆದರೆ ಇವು ಋಣಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ.

ಇತರೆ ವಸ್ತುಗಳು:ಪರ್ಸ್ ನಲ್ಲಿ ಚಲಾವಣೆಯಲ್ಲಿ ಇಲ್ಲದೇ ಇರುವ ನಾಣ್ಯ , ನೋಟುಗಳು ಹಾಗೂ ಮರಣ ಹೊಂದಿರುವ ಪೂರ್ವಜರ ಫೋಟೋಗಳನ್ನು ಇಟ್ಟುಕೊಂಡಿರುತ್ತಾರೆ. ಇವು ನಿಮ್ಮ ಜೀವನದಲ್ಲಿ ಋಣಾತ್ಮಕ ಶಕ್ತಿಯನ್ನು ಹೆಚ್ಚಾಗಿ ಆಕರ್ಷಿಸುತ್ತವೆ.ಧಾರ್ಮಿಕ ದಾರಗಳು:ಕೈಗೆ ಅಥವಾ ಕುತ್ತಿಗೆಗೆ ಹಾಕಿಕೊಳ್ಳಲು ಕೊಟ್ಟ ಧಾರ್ಮಿಕ ದಾರಗಳನ್ನು ಪರ್ಸ ನಲ್ಲಿ ಇಟ್ಟುಕೊಳ್ಳಬಾರದು. ವಾಸ್ತು ತೊಂದರೆಯಿಂದ ಅವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top