ತಿಂಡಿ ತೀರ್ಥ

ರುಚಿಗೂ ಸೈ , ಆರೋಗ್ಯಕ್ಕೂ ಸೈ ಮನೆಯಲ್ಲಿ ಮಾಡ್ಕೊಂಡು ಜಮಾಯಿಸಿ ಗಸಗಸೆ ಪಾಯಸ !

ಗಸ ಗಸೆ ಪಾಯಸ .

ಬೇಕಾಗುವ ಸಾಮರ್ಗ್ರಿಗಳು :
3 ಚಮಚ ಗಸ ಗಸೆ
ತೆಂಗಿನಕಾಯಿ ತುರಿ 3 ಚಮಚ

 

ಅಕ್ಕಿ 2 ಚಮಚ
ಬೆಲ್ಲ 1 ಚಮಚ
ಗೋಡಂಬಿ 10
ಏಲಕ್ಕಿ 6

ಬಾದಾಮಿ 10
ಹಾಲು
ತುಪ್ಪ
ನೀರು

 

 

ಮಾಡುವ ವಿಧಾನ :

 

 

 

ಮೊದಲಿಗೆ ಒಂದು ಬಾಣಲೆಗೆ ಸ್ವಲ್ಪ ನೀರು ಹಾಕಿ ಅದು ಬಿಸಿಯಾದ ಮೇಲೆ ಅದಕ್ಕೆ ಬೆಲ್ಲದ ಹಚ್ಚನ್ನು ಹಾಕಿ ಕರಗಿಸಿಕೊಳ್ಳಿ ,ಇನ್ನೊಂದು ಬಾಣಲೆ ಬಿಸಿ ಮಾಡಿ ಅಕ್ಕಿಯನ್ನು ಹುರಿದುಕೊಂಡು ಪಕ್ಕದಲ್ಲಿ ಇಟ್ಟುಕೊಳ್ಳಿ ಅದೇ ಬಾಣಲೆಯಲ್ಲಿ ಸಣ್ಣ ಹುರಿಯಲ್ಲಿ ಗಸ ಗಸೆ ಹುರಿದುಕೊಂಡು ಅದಕ್ಕೆ ಏಲಕ್ಕಿ ಸೇರಿಸಿ ಇದನ್ನು ಕೂಡ ಪಕ್ಕದಲ್ಲಿ ಇಟ್ಟುಕೊಳ್ಳಿ ,ಬಾದಾಮಿ ಮತ್ತು ಗೋಡಂಬಿಯನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ ನಂತರ ಬಿಸಿ ಮಾಡಿಕೊಂಡ ಪದಾರ್ಥ ಮತ್ತು ತೆಂಗಿನಕಾಯಿ ತುರಿ ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.ಅನಂತರ ಒಂದು ಬಾಣಲೆ ಬಿಸಿ ಮಾಡಿ ಅದಕ್ಕೆ 2 ಚಮಚ ತುಪ್ಪ ಹಾಕಿ ಅದು ಬಿಸಿಯಾದ ಮೇಲೆ ಅದಕ್ಕೆ ಗೋಡಂಬಿ ಮತ್ತು ಸ್ವಲ್ಪ ದ್ರಾಕ್ಷಿ ಸೇರಿಸಿ 1 ನಿಮಿಷ ಬಾಡಿಸಿ,ನಂತರ ಇದಕ್ಕೆ ಕರಗಿಸಿಕೊಂಡ ಬೆಲ್ಲ ,ರುಬ್ಬಿಕೊಂಡ ಮಿಶ್ರಣ ಮತ್ತು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕುದ್ದ ಮೇಲೆ ಅದಕ್ಕೆ ಹಾಲನ್ನು ಸೇರಿಸಿ 2 ನಿಮಿಷ ಕೈ ಆಡಿಸಿ.ನಂತರ ಬಿಸಿ ಬಿಸಿ ಗಸ ಗಸೆ ಪಾಯಸ ಸವಿಯಿರಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top