ಮನೋರಂಜನೆ

3 ನಿಮಿಷ 54 ಸೆಕೆಂಡಿನ ನಿರರ್ಗಳ ಶಂಖನಾದವನ್ನು ನೀವು ಎಂದಾದರೂ ಕೇಳಿದ್ದೀರಾ? – ತಪ್ಪದೆ ವಿಡಿಯೋ ನೋಡಿ

ಸಿನಿಮಾಗಳಲ್ಲಿ ಒಂದೇ ಉಸಿರಿನಿಂದ ಹಾಡಿರುವ ಹಾಡುಗಳನ್ನು ನೀವೆಲ್ಲರೂ ಕೇಳಿ ಹೌಹಾರಿರಬಹುದು. ಭೇಷ್ !ಭೇಷ್ ! ಎಂದಿರಬಹುದು. ಆದರೆ ಎಂದಾದರೂ ಒಂದೇ ಉಸಿರಿನಿಂದ ಯಾರಾದರೂ ಶಂಖನಾದ ಮಾಡಿರುವುದನ್ನು ಕೇಳಿದ್ದೀರಾ? ಹೌದು, ಇಂತಹದೊಂದು ಅಪರೂಪದ ಕಲೆಗೆ ಸುಳ್ಯ ತಾಲೂಕು ಸಾಕ್ಷಿಯಾಗಿದೆ.

ಸುಳ್ಯ ಸಮೀಪದ ದೇವರಗುಂಡಿ ‘ಸೂರ್ಯನಾರಾಯಣ ಭಟ್’ ಅವರು ತ್ರಿಕಾಲ ಪೂಜೆ ಧಾರ್ಮಿಕ ಕಾರ್ಯಕ್ರಮದಲ್ಲಿ ಸತತ 3 ನಿಮಿಷ 54 ಸೆಕೆಂಡುಗಳ ಕಾಲ ಶಂಖನಾದ ಮಾಡಿದ್ದಾರೆ. ಈ ವೀಡಿಯೋ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳಲ್ಲಿ ವೈರಲ್‌ ಆಗಿದ್ದು, ಜನ ಮೆಚ್ಚುಗೆಗೆ ಪಾತ್ರವಾಗಿದೆ.

ಸೂರ್ಯನಾರಾಯಣ ಭಟ್‌ ಅವರ ಒಂದೇ ಉಸಿರಿನ ಶಂಖನಾದ ಫೇಸ್‌ಬುಕ್‌ನಲ್ಲಿ ಭಾರಿ ಲೈಕ್ , ಶೇರ್ ಗಿಟ್ಟಿಸಿದ್ದು. ‘ಗಿಳಿಯಾಲು ಮಹಾಬಲೇಶ್ವರ ಭಟ್‌’ ಈ ಶಂಖನಾದದ ವೀಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ.

ಒಂದೇ ಉಸಿರಿನಿಂದ ಹಾಡುವುದೇ ಸವಾಲಾಗಿರುವಾಗ, ಸೂರ್ಯನಾರಾಯಣ ಭಟ್‌ ರವರು ಒಂದೇ ಉಸಿರಿನ ಶಂಖ ನಾದವನ್ನು ಮಾಡಿರುವುದು ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದೆ. ಸೂರ್ಯನಾರಾಯಣ್ ಭಟ್ ರವರ ಪ್ರತಿಭೆ ಇನ್ನಷ್ಟು ಬೆಳಕಿಗೆ ಬರಬೇಕೆಂಬುದು ನೆಟ್ಟಿಗರ ಒಮ್ಮತದ ಅಭಿಪ್ರಾಯವಾಗಿದೆ.

ನೀವು ಕೂಡ ಸೂರ್ಯನಾರಾಯಣ ಭಟ್‌ ಅವರ ಒಂದೇ ಉಸಿರಿನ ಶಂಖನಾದ ನುಡಿಸಿರುವ ವಿಡಿಯೋ ನೋಡಿ ಆನಂದಿಸಬಹುದು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top