ಅರೋಗ್ಯ

ಚಿನ್ನದ ಆಭರಣಗಳನ್ನು ಧರಿಸುವಾಗ ಏನೆಲ್ಲಾ ಜಾಗ್ರತೆ ವಹಿಸಬೇಕು? ಇಲ್ಲಿದೆ ಮಾಹಿತಿ.

ಚಿನ್ನದ ಆಭರಣಗಳಿಗೆ ಭಾರತೀಯ ಮಹಿಳೆಯರು ಅತಿಹೆಚ್ಚಾಗಿ ಹಾತೊರೆಯುತ್ತಾರೆ.  ಮಹಿಳೆಯರು ತಮ್ಮ ದೇಹದ ವಿವಿಧ ಅಂಗಗಳಲ್ಲಿ ವಿವಿಧ ಆಭರಣಗಳನ್ನು ಧರಿಸುತ್ತಾರೆ. ವಿಶೇಷವೆಂದರೆ ದೇಹದ ಮೇಲ್ಭಾಗದಲ್ಲಿ ಚಿನ್ನದ ಆಭರಣಗಳನ್ನು ಧರಿಸಿದರೆ ದೇಹದ ಕೆಳಭಾಗದಲ್ಲಿ ಬೆಳ್ಳಿಯ ಆಭರಣಗಳನ್ನು ಧರಿಸುತ್ತಾರೆ  ವೈಜ್ಞಾನಿಕ ತತ್ವದ ಪ್ರಕಾರ ಬೆಳ್ಳಿಯು ಭೂಮಿಯ ಶಕ್ತಿಯೊಂದಿಗೆ ಸ್ಪಂದಿಸಿದರೆ ಚಿನ್ನ ದೇಹದ ಅಗೋಚರ ಶಕ್ತಿಯೊಂದಿಗೆ ಸ್ಪಂದಿಸಿ ತೇಜಸ್ಸನ್ನು ಹೆಚ್ಚಿಸುತ್ತದೆ. ಈ ಲೇಖನದಲ್ಲಿ ವಿವಿಧ ಆಭರಣಗಳು ದೇಹದ ಮೇಲೆ ಬೀಳುವ ಪರಿಣಾಮಗಳ ವೈಜ್ಞಾನಿಕ ಮಹತ್ವಗಳನ್ನು ಅವಲೋಕಿಸೋಣ.

 

Related image

 

 

ಯಾರೇ ಆಗಲಿ ಎಡಗೈ ಬೆರಳಿಗೆ ಚಿನ್ನದ ಉಂಗುರ ಧರಿಸಬಾರದು. ಜ್ಯೋತಿಷಿಗಳು ಹೇಳಿದರೆ ಹೊರತು ಆ ರೀತಿ ಮಾಡಬಾರದು. ಯಾಕೆಂದರೆ ಚಿನ್ನದ ಉಂಗುರವನ್ನು ಎಡಗೈ ಬೆರಳಿಗೆ ಧರಿಸಿದರೆ ಅವರಿಗೆ ಜೀವನದಲ್ಲಿ ಎಲ್ಲವೂ ಸಮಸ್ಯೆಗಳೇ ಬರುತ್ತವಂತೆ. ಕಷ್ಟಗಳ ಸುಳಿಗೆ ಸಿಕ್ಕಿ ಒದ್ದಾಡಬೇಕಾಗುತ್ತದಂತೆ. ಹೆಜ್ಜೆಹೆಜ್ಜೆಗೂ ಎಲ್ಲಾ ವಿಷಯಗಳಲ್ಲೂ ಸಮಸ್ಯೆಗಳು ಎದುರಾಗುತ್ತವಂತೆ. ಆದಕಾರಣ ಉಂಗುರಗಳನ್ನು ಎಡಗೈಗೆ ಇಟ್ಟುಕೊಳ್ಳಬಾರದು.  ಬಹಳಷ್ಟು ಮಂದಿ ಮಹಿಳೆಯರು ಚಿನ್ನದಿಂದ ಮಾಡಿದ ಕಾಲ್ಗೆಜ್ಜೆಗಳನ್ನು ಧರಿಸುತ್ತಾರೆ. ಆದರೆ ಆ ರೀತಿ ಮಾಡಬಾರದು. ಆ ರೀತಿ ಧರಿಸಿದರೆ ಒಳ್ಳೆಯದು. ಅವರಿಗೆ ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ. ಅವು ಕಡಿಮೆಯಾಗಲ್ಲ.ಚಿನ್ನವನ್ನು ಯಾವಾಗಲೂ ಮನೆಯಲ್ಲಿ ಸೇಫ್ಟಿ ಲಾಕರ್‌ನಲ್ಲೇ ಇಡಬೇಕು. ಆ ಲಾಕರನ್ನು ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಇದರಿಂದ ಎಲ್ಲವೂ ಶುಭವಾಗುತ್ತದೆ. ಅಂದುಕೊಂಡಿದ್ದು ನೆರವೇರುತ್ತದೆ. ಅಪಾರ ಸಂಪತ್ತು ಲಭಿಸುತ್ತದೆ.ಗರ್ಭಿಣಿ ಮಹಿಳೆಯರು ಚಿನ್ನದ ಆಭರಣಗಳನ್ನು ಹೆಚ್ಚಾಗಿ ಧರಿಸಬಾರದು. ಅವರು ಧರಿಸದೆ ಇರುವುದೇ ಉತ್ತಮ. ಯಾಕೆಂದರೆ ಆ ಆಭರಣಗಳಿಂದ ಹೊಟ್ಟೆಯಲ್ಲಿರುವ ಮಗುವಿಗೆ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತವೆ.

 

Related image

 

 

ಮಕ್ಕಳಾಗಬೇಕೆಂದು ಎದುರುನೋಡುವ ಮಹಿಳೆಯರು ಎಷ್ಟು ಸಮಯಕ್ಕೂ ಮಕ್ಕಳಾಗದಿದ್ದರೆ ಅವರು ಬಲಗೈ ಉಂಗುರ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸಬೇಕು. ಇದರಿಂದ ಅವರ ಗ್ರಹಸ್ಥಿತಿ ಪ್ರಭಾವ ಅವರ ಮೇಲೆ ಕಡಿಮೆಯಾಗುತ್ತದೆ. ಪ್ರತಿಫಲವಾಗಿ ಸಂತಾನ ಭಾಗ್ಯ ಲಭಿಸುವ ಸಾಧ್ಯತೆಗಳಿರುತ್ತವೆ.ಸಂನ್ಯಾಸಿಗಳು, ಋಷಿಗಳು, ಸ್ವಾಮೀಜಿಗಳಿಗೆ ಚಿನ್ನವನ್ನು ದಾನ ಕೊಟ್ಟರೆ ಒಳ್ಳೆಯದು. ಅದಕ್ಕೂ ಮಿಕ್ಕಿ ಚಿನ್ನವನ್ನು ಯಾರಾದರೂ ಸಂಪಾದಿಸುತ್ತಾರೆ. ಎಲ್ಲವೂ ಒಳಿತಾಗುತ್ತದೆ. ಆದರೆ ಯಾರೇ ಆಗಲಿ ತಮಗೆ ಪರಿಚಿತರಲ್ಲದ ವ್ಯಕ್ತಿಗಳಿಂದ ಚಿನ್ನವನ್ನು ಉದಾರವಾಗಿ ತೆಗೆದುಕೊಳ್ಳಬಾರದು, ಧರಿಸಬಾರದು. ಅಂದರೆ ಇತರರ ಚಿನ್ನದ ಆಭರಣಗಳನ್ನು ನಾವು ಧರಿಸಬಾರದು.ಚಿನ್ನ ಕಳೆದುಕೊಂಡರೂ, ಸಿಕ್ಕಿದರೂ ಎರಡೂ ಶುಭಸೂಚನೆಗಳಲ್ಲ. ಚಿನ್ನ ಕಳೆದುಕೊಂಡರೆ ಆ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಇನ್ನು ಬಂಗಾರ ಸಿಕ್ಕಿದರೆ ಅವರಿಗೆ ಖರ್ಚುಗಳು ಹೆಚ್ಚುತ್ತವೆ. ಆರ್ಥಿಕ ಸಮಸ್ಯೆಗಳು ಬರುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top