ದೇವರು

ಹನುಮಂತ ದೇವರ 5 ವಿವಿಧ ರೂಪಗಳೇನು ? ಇವುಗಳ ವಿಶಿಷ್ಟತೆಗಳೇನು ಯಾವ ಪೂಜೆಗೆ ಯಾವ ಫಲ ದೊರೆಯುವುದು ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ

ಹನುಮಂತ ದೇವರ ವಿವಿಧ ಈ ಐದು ರೂಪಗಳನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಪೂಜಿಸಿದರೆ ಯಶಸ್ಸು,ಕೀರ್ತಿ ಲಭಿಸುವುದು.

ಆಂಜನೇಯ ಸ್ವಾಮಿಯು ಶಿವನ ಹನ್ನೊಂದನೇ ರುದ್ರ ಆವತಾರ ಎಂದು ಹೇಳಲಾಗುತ್ತದೆ. ಜಗತ್ತಿನಾದ್ಯಂತ ಜನರು ಹನುಮಂತನನ್ನು ಆರಾಧಿಸುತ್ತಾರೆ. ಅದರಲ್ಲೂ ಮಂಗಳವಾರ ಆಂಜನೇನನ್ನು ಪೂಜಿಸಿದರೆ ಶ್ರೇಷ್ಠ ಎನ್ನುವ ನಂಬಿಕೆ ಇದೆ. ಹನುಮಂತನ ವಿವಿಧ ರೂಪಗಳನ್ನು ಆರಾಧಿಸುವುದರಿಂದ ಭಕ್ತರ ಇಷ್ಟಾರ್ಥ ಸಿದ್ಧಿಸುತ್ತದೆ.

 

 

 

ಜ್ಯೋತಿಷ್ಯದ ಪ್ರಕಾರ ಮಂಗಳವಾರ ಕೆಂಪು ಗ್ರಹ ಮಂಗಳನಿಗೆ ಸೇರಿತ್ತು ಶೌರ್ಯ, ಧೈರ್ಯ ಮತ್ತು ನಿರ್ಭೀತಿಯ ಸಂಕೇತ. ಆಂಜನೇಯ ಸ್ವಾಮಿಯು ಕೂಡ ಕೆಂಪು ಸಿಂಧೂರವನ್ನು ಇಟ್ಟುಕೊಳ್ಳುತ್ತಾನೆ.ಈ ಮೇಲಿನ ಎಲ್ಲ ಗುಣಗಳು ಅವನಲ್ಲಿವೆ. ಹಾಗಾಗಿ ಹನುಮಂತ ದೇವರಿಗೂ ಮಂಗಳವಾರಕ್ಕೂ ತಾರ್ಕಿಕ ಸಂಬಂಧವಿದೆ. ಹನುಮಂತನ ಈ ಐದು ರೂಪಗಳು ಯಾವುವು ? ಎಂದು ತಿಳಿದುಕೊಳ್ಳೊಣ.

ಪಾದಸ್ಪರ್ಶಿ ಹನುಮಾನ :ಇಲ್ಲಿ ಹನುಮಂತನು ರಾಮನ ಪಾದ ಸ್ಪರ್ಶ ಮಾಡಿ ಆಶೀರ್ವಾದ ಪಡೆಯುತ್ತಾನೆ. ಪಾದಸ್ಪರ್ಶಿ ಹನುಮಂತನನ್ನು ಪೂಜಿಸಿದರೆ ನಿಮ್ಮ ವೈಯಕ್ತಿಕ ಬದುಕು ಮತ್ತು ಉದ್ಯೋಗದಲ್ಲಿನ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ . ಸೂರ್ಯಮುಖಿ ಹನುಮಾನ್ :ಸೂರ್ಯನ ಕಿರಣಗಳು ಜ್ಞಾನ ಮತ್ತು ವಿವೇಕದ ಸಂಕೇತ. ಈ ರೂಪದಲ್ಲಿ ಹನುಮಂತ ಸೂರ್ಯನನ್ನು ಆರಾಧಿಸುತ್ತಾನೆ. ಸೂರ್ಯ ಮುಖಿ ಆಂಜನೇಯನನ್ನು ಪೂಜಿಸುವುದರಿಂದ ನಿಮಗೆ ಬುದ್ಧಿವಂತಿಕೆ ಮತ್ತು ಯಶಸ್ಸು ಎರಡೂ ಲಭಿಸುತ್ತದೆ.

ಮಹಾಬಲಿ ಹನುಮಾನ್ :ಈ ರೂಪದಲ್ಲಿರುವ ಆಂಜನೇಯ ಅತ್ಯಂತ ಶಕ್ತಿಶಾಲಿಯೂ , ಭಯ ರಹಿತನು ಹಾಗೂ ಯೋಧನೂ ಆಗಿದ್ದಾನೆ. ಲಂಕೆಯ ರಾಕ್ಷಸರನ್ನೆಲ್ಲ ಇದೇ ರೂಪದಲ್ಲಿ ಸಂಹರಿಸುದ್ದಾನೆ. ಮಹಾಬಲಿ ಹನುಮಾನ ಆನ್ನು ಪೂಜಿಸಿದರೆ ನಿಮ್ಮಲ್ಲಿರುವ ಭಯ ತೊಲಗಿ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ.ಭಕ್ತ ಹನುಮಾನ್:ಈ ರೂಪದಲ್ಲಿ ಹನುಮಂತನು ರಾಮನನ್ನು ಪೂಜಿಸುತ್ತಾನೆ. ಭಕ್ತ ಹನುಮಂತನನ್ನು ಆರಾಧಿಸುವುದರಿಂದ . ನೀವು ಅತಿ ಶೀಘ್ರವಾಗಿ ಬದುಕಿನ ಗುರಿ ತಲುಪಬಹುದು . ಉತ್ತರ ಮುಖಿ ಹನುಮಾನ : ದೇವರುಗಳೆಲ್ಲಾ ಉತ್ತರ ದಿಕ್ಕಿನಲ್ಲಿ ಇರುತ್ತಾರೆ ಎಂಬ ನಂಬಿಕೆ ಇದೆ . ಹನುಮಂತ ಉತ್ತರ ದಿಕ್ಕಿಗೆ ಮುಖ ಮಾಡಿರುವ ಮೂರ್ತಿಯನ್ನು ಇಟ್ಟು ಪೂಜಿಸುವುದರಿಂದ ಎಲ್ಲ ದೇವರ ಕೃಪೆಯೂ ನಿಮಗೆ ದೊರೆಯುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top