fbpx
ಹೆಚ್ಚಿನ

ಜೀವನದಲ್ಲಿ ಈ ವಿಷಯಗಳು ಯಾವುದೇ ಕಾರಣಕ್ಕೂ ಅಪ್ಪಿತಪ್ಪಿನೂ ಮರಿಬೇಡಿ ಉದ್ದಾರ ಆಗ್ತೀರಾ

ಬದುಕಿನಲ್ಲಿ ನಮ್ಮ ಜೀವನದಲ್ಲಿ ಈ ಏಳು ವಿಷಯಗಳನ್ನು ಯಾವತ್ತೂ,ಎಂದಿಗೂ,ಯಾವುದೇ ಕಾರಣಕ್ಕೂ ಮರೆಯಬಾರದು.

ಇನ್ನೊಬ್ಬರೊಡನೆ ಸುಮ್ಮನೆ ವಾಗ್ವಾದಕ್ಕೆ ಇಳಿಯಬೇಡಿ , ಯಾಕೆಂದರೆ ಅಲ್ಲಿ ಇನ್ನೂಬ್ಬರಿಗೆ ಮಾತನಾಡಲು ಬರುವುದೇ ಇಲ್ಲ.

 

 

 

ನೀವು ತಿನ್ನುವ ಆಹಾರದ ರುಚಿಯ ಬಗ್ಗೆ ದೂರಬೇಡಿ, ಯಾಕೆಂದರೆ ಕೆಲವರಿಗೆ ಒಂದು ಹೊತ್ತಿನ ಊಟವೂ ಸಹ ತಿನ್ನಲು ಸಿಗುವುದಿಲ್ಲ .ನಿಮ್ಮ ಸಂಗಾತಿಯ ಬಗ್ಗೆ ಸಹನೆ ಕಳೆದುಕೊಳ್ಳಬೇಡಿ,ಯಾಕೆಂದರೆ ನೆನ್ನೆಯಷ್ಟೇ ಒಬ್ಬ, ತನ್ನ ಸಂಗಾತಿಯನ್ನು ಮಣ್ಣು ಮಾಡಿದ ದುಃಖದಲ್ಲಿದ್ದಾರೆ.ನಿಮ್ಮ ಮನೆ ಸೋರುತ್ತಿದೆ ಎಂದು ಬೇಸರ ಪಡಬೇಡಿ, ಅಲ್ಲೊಬ್ಬರ ತಲೆಯ ಮೇಲೆ ಸೂರೇ ಇರುವುದಿಲ್ಲ.ನಿಮ್ಮ ಮಕ್ಕಳ ಮೇಲೆ ಕೋಪ ಮಾಡಿಕೊಳ್ಳಬೇಡಿ, ಅದೆಷ್ಟೋ ದಂಪತಿಗಳಿಗೆ ತಂದೆ ತಾಯಿಯರಾಗುವ ಭಾಗ್ಯವೇ ಇರುವುದಿಲ್ಲ.ನಿಮ್ಮ ಉದ್ಯೋಗದ ಬಗ್ಗೆ ಅಸಡ್ಡೆ ತೋರಬೇಡಿ , ಯಾಕೆಂದರೆ ಅಲ್ಲೊಬ್ಬ ಯುವಕನಿಗೆ ಎಷ್ಟೇ ಓದಿದರೂ ಕೂಡ ಕೆಲಸವೇ ಸಿಕ್ಕಿರುವುದಿಲ್ಲ .

 

 

 

ನಿಮ್ಮ ಜೀವನವನ್ನು ಶಪಿಸುತ್ತಾ ಕುಳಿತುಕೊಳ್ಳಬೇಡಿ , ಎಷ್ಟೋ ಜನಗಳು ಯೌವನದಲ್ಲೇ ಹಾಸಿಗೆ ಹಿಡಿದು ನರಳುತ್ತಿದ್ದಾರೆ.ಜೀವನವೆಂಬುದು ಸುಂದರವಾದ ಉಡುಗೊರೆ , ವ್ಯರ್ಥ ಆಲಾಪದಲ್ಲಿ ಯೋಚನೆ ಮಾಡುತ್ತಾ, ಅದನ್ನು ಹಾಳು ಮಾಡಿಕೊಳ್ಳಬೇಡಿ. ಬದುಕಿನಲ್ಲಿ ಏನೋ ಸರಿಯಿಲ್ಲ ,ಎನ್ನಿಸುತ್ತಿದ್ದರೆ ಒಮ್ಮೆ ಯೋಚಿಸಿ , ನೀವಿನ್ನೂ ಬದುಕಿದ್ದೀರಿ ಎಂದರೆ ನಿಮಗಿಷ್ಟವಾಗದ ಸಂಗತಿಯನ್ನು ಬದಲಾಯಿಸುವ ಅವಕಾಶ ನಿಮಗಿದೆ . ನಿಮಗೆ ಬೇಕಾದಂತೆ ನಿಮ್ಮ ಜೀವನವನ್ನು ನೀವೇ ರೂಪಿಸಿಕೊಳ್ಳಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top