ಹೆಚ್ಚಿನ

ಮಹೇಂದ್ರ ಸಿಂಗ್ ಧೋನಿ ತಮ್ಮ ಮಗಳು ಜೀವಾ ಜೊತೆ ಮಾಡಿರುವ ಬ್ಯೂಟಿಫುಲ್ ಡ್ಯಾನ್ಸ್ ವಿಡಿಯೋ ವನ್ನು ತಪ್ಪದೆ ನೋಡಿ.

ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯವರಿಗೆ ಅವರ ಮಗಳು ಜೀವಾ ಎಂದರೆ ಎಲ್ಲಿಲ್ಲದ ಪ್ರೀತಿ. ಮಗಳಿಗಾಗಿ ಸಾಕಷ್ಟು ಸಮಯ ಮೀಸಲಿಡುವ ಧೋನಿ. ಮಗಳೊಂದಿಗೆ ಹರಟುವ, ಆಟವಾಡುವ, ಮಾತನಾಡುವ , ಡ್ಯಾನ್ಸ್ ಮಾಡುವ ಹಾಗೂ ಇನ್ನೀತರ ಫೋಟೋ ಅಥವಾ ವಿಡಿಯೋಗಳನ್ನೂ ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಒಟ್ಟಿನಲ್ಲಿ ಧೋನಿ ತಮ್ಮ ಮಗಳ ಸಲುವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ.

ಇದೀಗ ಮತ್ತೆ ಸುದ್ದಿಯಾಗಿರುವ ಧೋನಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಮಗಳ ಜೊತೆ ಇಂಗ್ಲಿಷ್ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದನ್ನು ಹಾಕಿ ಅದಕ್ಕೆ, “ನಾವು ಡ್ಯಾನ್ಸ್ ಮಾಡುವಾಗ ಇನ್ನೂ ಉತ್ತಮವಾಗಿ ಕಾಣುತ್ತೇವೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಈ ಹಿಂದೆ ಜೀವಾ ಸ್ಕೂಲ್‍ನಲ್ಲಿ ತನ್ನ ಸ್ನೇಹಿತರ ಜೊತೆ ರಂಗೋಲಿ ಬಿಡಿಸುತ್ತಿರುವ ಫೋಟೋ ಹಾಗೂ ಜೀವಾ ತನ್ನ ತಂದೆ ಧೋನಿಗೆ ಈ ಮೊದಲು ಎರಡು ಭಾಷೆಗಳನ್ನು ಹೇಳಿಕೊಡುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಒಟ್ಟಿನಲ್ಲಿ ಈಗ ಧೋನಿ ಹಾಗೂ ಜೀವಾ ರ ಡ್ಯಾನ್ಸ್ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

 

 

View this post on Instagram

 

Even better when we are dancing @zivasinghdhoni006

A post shared by M S Dhoni (@mahi7781) on

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top