ಅರೋಗ್ಯ

ಅನಗತ್ಯವಾದ ದೇಹದ ಬೊಜ್ಜನ್ನು ಕಡಿಮೆ ಮಾಡಿಕೊಳ್ಳೋಕೆ ಮನೇಲೆ ಸಿಗೋ ತುಂಬಾ ಸಿಂಪಲ್ ಮನೆಮದ್ದುಗಳು ಬಳಸಿಕೊಳ್ಳಿ

ನಿಮ್ಮ ದೇಹದ ತೂಕ ಅತಿ ಬೇಗ ಇಳಿಸಿಕೊಳ್ಳಲು ಹೀಗೆ ಮಾಡಿ :ದೇಹದ ಅತಿಯಾದ ತೂಕ ನಾವು ಈಗ ಕೇಳುವಂತ ಅತಿ ದೊಡ್ಡ ಸಮಸ್ಯೆ ,ಎಲ್ಲಾರು ಆರೋಗ್ಯವಾಗಿ ಸಣ್ಣವಾಗಿ ,ಸುಂದರವಾಗಿ ಕಾಣಲು ಇಷ್ಟ ಪಡುತ್ತಾರೆ ಆದರೆ ಕೆಲವು ಕಾರಣಗಳಾದನಾವು ತಿನ್ನುವಂತ ಊಟ,ವಾತಾವರಣ,ಅನುವಂಶೀಯ ಕಾರಣ.ಹೀಗೆ ಇನ್ನು ಅನೇಕ ಕಾರಣದಿಂದ ನಾವು ಏನೇ ಮಾಡಿದರು ದೇಹದ ತೂಕ ಕಡಿಮೆ ಮಾಡಲು ಆಗುವುದಿಲ್ಲ .ಈ ದೇಹದ ತೂಕದಿಂದ ಹೆಚ್ಚು ವಯಸ್ಸಾದಂತೆ ಕಾಣುತ್ತೀರಿ .ಹೆಚ್ಚು ಯೋಚಿಸಬೇಡಿ ನಾವು ಹೇಳುವ ಮನೆಮದ್ದನ್ನು ಬಳಸಿ ನಿಮ್ಮ ದೇಹದ ತೂಕವನ್ನು ಅತಿ ಬೇಗ ಕಡಿಮೆ ಮಾಡಿಕೊಳ್ಳಿ.

ಒಂದು ಲೋಟ ನೀರನ್ನು ಬಿಸಿ ಮಾಡಿ ಅದಕ್ಕೆ 1/4 ಚಮಚ ಧನಿಯಾ ಬೀಜ ,1/4 ಚಮಚ ಜೀರಿಗೆ ಮತ್ತು 1/4 ಚಮಚ ಓಂ ಕಾಳು ಹಾಕಿ 5 ನಿಮಿಷಗಳ ಕಾಲ ಕುದಿಸಿ ನಂತರ ಅದನ್ನು ಶೋಧಿಸಿಕೊಂಡು ಅದಕ್ಕೆ 1 ಚಮಚ ಜೇನು ತುಪ್ಪ ಹಾಕಿಕೊಂಡು ದಿನ 2 ಬಾರಿ ಕುಡಿದರೆ ಸಾಕು ನಿಮ್ಮ ದೇಹದ ತೂಕ ಅತಿ ಕಡಿಮೆ ಅವಧಿಯಲ್ಲಿ ಕಡಿಮೆಯಾಗುತ್ತದೆ.

 

 

 

ಒಂದು ಲೋಟ ನೀರನ್ನು ಬಿಸಿ ಮಾಡಿ ಅದಕ್ಕೆ 1/2 ಚಮಚ ಚಕ್ಕೆ ಪುಡಿ ಸೇರಿಸಿ ಅದನ್ನು ಚೆನ್ನಾಗಿ ಕುದಿಸಿ ,ಚೆನ್ನಾಗಿ ಕುದಿಸಿ ಮತ್ತೆ ಆರಿದ ಮೇಲೆ ಅದಕ್ಕೆ ಒಂದು ಚಮಚ ಜೇನು ತುಪ್ಪ ಹಾಕಿ ದಿನ ಮಲಗುವ ಮುನ್ನ, ಒಂದು ಸಲ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಸಲ ಕುಡಿಯಬೇಕು ಇದರಿಂದ ನಿಮ್ಮ ತೂಕ ಕಡಿಮೆಯಾಗುವುದು ಖಂಡಿತ.ಒಂದು ಲೋಟ ನೀರನ್ನು ಬಿಸಿ ಮಾಡಿ ಅದಕ್ಕೆ ಚಿಕ್ಕದಾಗಿ ಕತ್ತರಿಸಿಕೊಂಡ ಶುಂಠಿ ಸ್ವಲ್ಪ ಚೆನ್ನಾಗಿ ಕುದಿದ ಮೇಲೆ ಆರಿಸಿ ಅದಕ್ಕೆ 1/2 ಚಮಚ ನಿಂಬೆ ರಸ ಮತ್ತು 1 ಚಮಚ ಜೇನು ತುಪ್ಪ ಹಾಕಿ ದಿನ ಬೆಳಗ್ಗೆ ಒಂದು ಸಲ ಕುಡಿಯಬೇಕು.ಒಂದು ಲೋಟ ಬೆಚ್ಚಗಿನ ನೀರಿಗೆ ಅರ್ಧ ನಿಂಬೆರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಪಕ್ಕದಲ್ಲಿ ಇರಿಸಿಕೊಳ್ಳಬೇಕು ನಂತರ ,3 ಬೆಳ್ಳುಳ್ಳಿ ದಳಗಳನ್ನೂ ತಿಂದು ತಕ್ಷಣ ಆ ನೀರನ್ನು ಕುಡಿಯಬೇಕು .ಹೀಗೆ ದಿನ ಒಂದು ಬಾರಿ ಈ ನೀರನ್ನು ಕುಡಿಯಬೇಕು .

2 ಲೋಟ ನೀರಿಗೆ 1/2 ಚಮಚ ಅರಿಶಿನದ ಪುಡಿ ,ಸ್ವಲ್ಪ ಚಕ್ಕೆ ,ಸ್ವಲ್ಪ ಕಪ್ಪು ಮೆಣಸಿನ ಕಾಳು ಮತ್ತು ಚಿಕ್ಕದಾಗಿ ಕತ್ತರಿಸಿಕೊಂಡ ಶುಂಠಿ ಹಾಕಿ ಚೆನ್ನಾಗಿ ಕುದಿಸಿ ನಂತರ ಅದನ್ನು ಒಂದು ಲೋಟಕ್ಕೆ ಶೋದಿಸಿಕೊಂಡು ದಿನ ಮಲಗುವ ಮುಂಚೆ ಅಥವಾ ಬೆಳ್ಳಗೆ ಖಾಲಿ ಹೊಟ್ಟೆಯಲ್ಲಿ ಒಂದು ಸಲ ಕುಡಿಯಬೇಕು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top