ಭವಿಷ್ಯ

ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಬೆರಳುಗಳು ಮದುವೆ ಸಂಬಂಧಗಳ ಬಗ್ಗೆ ಹಾಗೂ ಮನುಷ್ಯನ ನಿಯತ್ತಿನ ಬಗ್ಗೆ ಚೆನ್ನಾಗಿ ಹೇಳ್ತವಂತೆ

ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ನಿಮ್ಮ ಕೈಗಳಲ್ಲಿ ಇರುವ ಬೆರಳುಗಳು ತುಲನಾತ್ಮಕ ಗಾತ್ರ ವ್ಯಕ್ತಿಯ ಸ್ವಭಾವಗಳನ್ನು ನಿರ್ಧರಿಸುತ್ತವೆ. ಜ್ಯೋತಿಷಿಗಳ ಪ್ರಕಾರ ಓರ್ವ ವ್ಯಕ್ತಿಯ ವ್ಯಕ್ತಿತ್ವ ಆತನ ದೈಹಿಕ ಆಕಾರದಿಂದ ಬಹುವಾಗಿ ಪ್ರಭಾವಿತವಾಗಿರುತ್ತದೆ. ಅದರಲ್ಲೂ ನಮ್ಮ ಹಸ್ತ ಮತ್ತು ಬೆರಳುಗಳು ಬಹಳಷ್ಟನ್ನು ತಿಳಿಸುತ್ತವೆ. ಹಸ್ತರೇಖಾಶಾಸ್ತ್ರ ಎಂದೇ ಪ್ರಸಿದ್ಧಿ ಪಡೆದಿರುವ ಈ ಜ್ಞಾನದಲ್ಲಿ ಬೆರಳುಗಳ ಉದ್ದವನ್ನು ಪರಿಗಣಿಸಿ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ.

 

 

 

ಕೆನಡಾದಲ್ಲಿ ಗಿಲ್ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದ ಪ್ರಕಾರ ಹುಟ್ಟಿಗೂ ಮೊದಲೇ ಬೆರಳಿನ ಉದ್ದ ನಿರ್ಧಾರವಾಗಿರುತ್ತದೆ. ತಾಯಿಯ ಗರ್ಭದಲ್ಲಿರುವ ಮಗುವಿನ ಮೇಲೆ ಲೈಂಗಿಕ ಹಾರ್ಮೋನ ಮಟ್ಟ ಬೀರುವ ಪರಿಣಾಮವನ್ನು ಅದು ಆಧರಿಸುತ್ತದೆ.ಉಂಗುರ ಬೆರಳು ಹೆಚ್ಚು ಉದ್ದವಿರುವ ಮಹಿಳೆಯರು ಹಾಗೂ ಪುರುಷರು ಬಹುಶಃ ಹೆಚ್ಚು ಪ್ರಮಾಣದ ಆಯಾ ಹಾರ್ಮೋನ್ ಗಳು ಸೇರಿಕೊಂಡಿರಬಹುದು. ಒಬ್ಬರಿಗಿಂತ ಹೆಚ್ಚು ಮಂದಿಯ ಜೊತೆಗೆ ಸಾಂಗತ್ಯ ಬಯಸಲು ಈ ಅಂಶ ಕಾರಣವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ .ಮದುವೆಯಾಗದ ಗಂಡು ಮತ್ತು ಹೆಣ್ಣು ಜೀವಿಗಳಿಗೆ ಸಂಬಂಧಿಸಿದ ವಿಷಯವಿದು. ಇಂಥವರಿಗೆ ಯಾರಾದರೂ ಹೊಸಬರು ಪರಿಚಿತರಾದರೆ ಉಂಗುರದ ಬೆರಳನ್ನು ಮೊದಲು ನೋಡುತ್ತಾರೆ, ಎನ್ನುತ್ತಿದೆ ಹೊಸ ಸಂಶೋಧನೆಯ ಸಮೀಕ್ಷೆ.

ಮಾನವರಿಗೆ ಸಹಜವಾಗಿ ಬಂದಿರುವ ಒಂದು ಗುಣವೆಂದರೆ ಕುತೂಹಲ. ಅದರಲ್ಲೂ ಅಚ್ಚರಿಯ ಸಂಗತಿ ಏನೆಂದರೆ ತೋರು ಬೆರಳು ಹಾಗೂ ಉಂಗುರ ಬೆರಳಿನ ಉದ್ದ ಸಮವಾಗಿರುವವರು ದೀರ್ಘಕಾಲೀನ ಹೆಣ್ಣು ಗಂಡಿನ ಬೆಸುಗೆಯ ನೆಲೆ ನಿಲ್ಲುವುದು ಎಂಬ ಸ್ವಾರಸ್ಯಕರ ಸಂಗತಿ ತಿಳಿದು ಬಂದಿದೆ.ಉಂಗುರ ಧರಿಸಿದ ಬೆರಳು ಮತ್ತು ಸತಿ ಪತಿಯರ ದಾಂಪತ್ಯ ಸುಖದ ಪ್ರಮಾಣ ಇವೆರಡಕ್ಕೂ ನೇರ ಸಂಬಂಧವಿದೆ ಎಂದರ್ಥ.ಅಬ್ರಹಾಂ ಲಿಂಕನ್ ಪ್ರಕಾರ ನೀವು ಸಂಪೂರ್ಣವಾಗಿ ಮೇಲಿನ ಮಾತನ್ನು ಎಲ್ಲವನ್ನೂ ನಂಬಲೇಬೇಕು. ಹೊಸ ಸಂಶೋಧನೆಯ ಪ್ರಕಾರ ಮನುಷ್ಯನ ಬೆರಳಿನ ಉದ್ದ ಅವರವರ ಲೈಂಗಿಕ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ವಿವರಗಳನ್ನು ಹೇಳುತ್ತದೆ ಎಂದು ಅಧ್ಯಯನದ ವರದಿ ತಿಳಿಸಿದೆ .

 

 

 

ಬಲಗೈನ ಉಂಗುರ ಬೆರಳು , ತೋರು ಬೆರಳಿಗಿಂತ ಹೆಚ್ಚು ಉದ್ದವಾಗಿದ್ದರೆ ಅಂಥವರು ಸಂಗಾತಿಗೆ ಹೆಚ್ಚು ನಿಷ್ಠಾವಂತರಾಗಿರುವುದಿಲ್ಲ.ತೋರು ಬೆರಳು ಹಾಗೂ ಉಂಗುರ ಬೆರಳಿನ ಉದ್ದ ಸಮವಾಗಿರುವವರು ದೀರ್ಘಕಾಲೀನ ಸಂಬಂಧವನ್ನು ಬಯಸುತ್ತಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top