ಭವಿಷ್ಯ

ರವಿಯ ನಕ್ಷತ್ರದಲ್ಲಿ ಕೇತುವಿನ ಸಂಚಾರವಾಗಲಿದೆ,ಇದರಿಂದ ಯಾವೆಲ್ಲಾ ಕ್ಷೇತ್ರದವರಿಗೆ ಹಾಗೂ ರಾಶಿಯವರಿಗೆ ಶುಭ ಮತ್ತು ಅಶುಭವಾಗಲಿದೆ ಗೊತ್ತಾ

ರವಿಯ ನಕ್ಷತ್ರಕ್ಕೆ ಕೇತುವಿನ ಸಂಚಾರವಾಗುತ್ತದೆ. ಇದರಿಂದ ಗಂಡಾಂತರ ಎದುರಾಗುತ್ತದೆ ಎನ್ನುವ ಭಯ,ಭೀತಿ ಕಾಡುತ್ತಿದೆ.ಇದರ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿ ಯಾವ ರೀತಿಯ ಪ್ರಭಾವ ಬೀರುತ್ತದೆ ? ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.ಕೇತು ರವಿಯ ನಕ್ಷತ್ರದಲ್ಲಿ ಅಂದರೆ ಉತ್ತರಾಷಾಡ ನಕ್ಷತ್ರದಲ್ಲಿ ಕೇತುವಿನ ಸಂಚಾರ ಪ್ರಾರಂಭವಾಗಲಿದೆ. ಇದರಿಂದ ಏನೆಲ್ಲಾ ಫಲಗಳು ಲಭಿಸುತ್ತವೆ. ಯಾವೆಲ್ಲ ರಾಶಿಗಳಿಗೆ ಮತ್ತು ಕ್ಷೇತ್ರಗಳಿಗೆ ಶುಭ ಮತ್ತು ಅಶುಭ ಫಲ ಪ್ರಾಪ್ತಿಯಾಗಲಿದೆ ಎನ್ನುವುದನ್ನು ಈಗ ನೋಡೋಣ.

 

 

 

2018 ನೇ ಇಸವಿಯ ಆಗಸ್ಟ್ ನಂತರದಿಂದ ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಅವಘಡಗಳ ಬಗ್ಗೆ ಮೊದಲೇ ಸೂಚನೆಗಳನ್ನು ಗ್ರಹಗಳು ನೀಡಿವೆ. ಅದೇ ರೀತಿಯಲ್ಲಿ ಇನ್ನೂ ಮುಂದಿನ ವರ್ಷ ಏಪ್ರಿಲ್ 2019 ರವರೆಗೆ ಇದೇ ರೀತಿಯಾದಂತಹ ಅವಘಡಗಳು, ಅಪಘಾತಗಳು ನಡೆಯುತ್ತಲೇ ಇರುತ್ತವೆ.ಅದರಲ್ಲಿಯೂ ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಮಟ್ಟದ ದುಷ್ಪರಿಣಾಮಗಳು ಬೀರುತ್ತವೆ. ಅದರಲ್ಲೂ ಮಿಥುನ ಲಗ್ನ ಮತ್ತು ಮಿಥುನ ರಾಶಿಯವರು ಇದ್ದರೆ ಅವರಿಗೆ ಅತಿ ಹೆಚ್ಚಿನ ದುಷ್ಪರಿಣಾಮಗಳು, ತೊಂದರೆಗಳು ಮತ್ತು ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ಆದಷ್ಟು ಒಳ್ಳೆಯದು.
ಪರಿಹಾರ:ದೈವ ನಿಮಿತ್ತವಾದ ದೈವ ಕಾರ್ಯ, ರುದ್ರನ ಆರಾಧನೆ ಮಾಡುವುದರಿಂದ ಬರುವ ಅವಘಡಗಳು, ಅಪಘಾತಗಳು ಮತ್ತು ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದು ಕೊಳ್ಳಬಹುದು. ಏಕದಶಾ ರುದ್ರಾಭಿಷೇಕವನ್ನು ಮಾಡುವುದರಿಂದ ಈ ಅವಘಡಗಳಿಂದ ತೊಂದರೆಗಳಿಂದ ತಕ್ಕಮಟ್ಟಿಗೆ ನಿವಾರಣೆಯನ್ನು ಪಡೆದುಕೊಳ್ಳಬಹುದು. ಆಗುವುದು ಆಗಿಯೇ ತೀರುತ್ತದೆ. ಆದರೆ ಸ್ವಲ್ಪ ಮಟ್ಟಿಗಾದರೂ ಅದರ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top