ದೇವರು

ಈ ದೇವಸ್ಥಾನಕ್ಕೆ ಗಂಡಸರು ಹೋಗ್ಬೇಕಾದ್ರೆ ಸೀರೆ ಉಟ್ಟುಕೊಂಡು ,ಲಿಪ್ಸ್ಟಿಕ್ ಹಚ್ಕೊಂಡು ಹೆಣ್ಣಿನ ಅಲಂಕಾರ ಮಾಡ್ಕೊಂಡು ಹೋಗ್ಬೇಕಂತೆ ಯಾಕೆ ಹೀಗೆ ಮಾಡ್ತಾರೆ ? ಬನ್ನಿ ತಿಳ್ಕೊಳ್ಳೋಣ

ಪುರುಷರು ಸೀರೆ ಉಟ್ಟುಕೊಂಡು ಲಿಪ್ಸ್ಟಿಕ್ ಹಚ್ಚಿಕೊಂಡು ಈ ದೇವಸ್ಥಾನಕ್ಕೆ ಹೋಗುತ್ತಾರೆ. ಯಾಕೆ ಹೀಗೆ ಮಾಡುತ್ತಾರೆ ? ಈ ದೇವಸ್ಥಾನವಾದರೂ ಎಲ್ಲಿದೆ ಎಂದು ನಿಮಗೆ ಗೊತ್ತಾ ?

ನಮಗೆ ಸಂತೋಷವಾದರೂ, ದುಃಖವಾದರೂ ತಕ್ಷಣ ದೇವಸ್ಥಾನಕ್ಕೆ ಹೋಗುತ್ತೇವೆ.ದೇವಸ್ಥಾನಕ್ಕೆ ಹೋದರೆ ನಮಗೆ ತಿಳಿಯದಂತೆಯೇ ಧೈರ್ಯ ಬರುತ್ತದೆ. ಆ ಧೈರ್ಯದಿಂದಲೇ ನಮ್ಮ ಜೀವನದಲ್ಲಿ ಬರುವ ಅದೆಷ್ಟೋ ಸಮಸ್ಯೆಗಳನ್ನು ಎದುರಿಸಿ ನಾವು  ಸಂತೋಷವಾಗಿರುತ್ತೇವೆ.

 

 

 

ದೇವಸ್ಥಾನಕ್ಕೆ ಹೋದಾಗ ಕೆಲವು ನಿಯಮಗಳನ್ನು ನಾವು ತಪ್ಪದೇ ಪಾಲಿಸಲೇಬೇಕು. ಮಾಂಸಾಹಾರ ಸೇವಿಸಬಾರದು, ಸ್ನಾನ ಮಾಡದೇ ದೇವಸ್ಥಾನಕ್ಕೆ ಹೋಗಬಾರದು, ಅಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಎಷ್ಟು ಪ್ರದಕ್ಷಿಣೆಗಳನ್ನು ಮಾಡಬೇಕೆಂದು ತಿಳಿದುಕೊಂಡು ಪ್ರದಕ್ಷಿಣೆಯನ್ನು ಹಾಕಬೇಕು .ಹಾಗೆಯೇ ಪ್ರಮುಖ ದೇವಸ್ಥಾನಗಳಲ್ಲಿ ಸ್ತ್ರೀಯರು ಮತ್ತು  ಪುರುಷರು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಬೇಕು ಎಂಬ ನಿಯಮ ಇರುವುದು ನಮಗೆ ತಿಳಿದಿರುವ ವಿಷಯವೇ .ಆದರೂ ಈ ದೇವಸ್ಥಾನಕ್ಕೆ ಪುರುಷರು ಮಹಿಳೆಯರಂತೆ ಸಿದ್ಧವಾಗಿ ಒಳಗೆ ಬರಬೇಕೆಂಬ ನಿಯಮವಿದೆ.ತುಟಿಗಳಿಗೆ ಲಿಪ್ಸ್ಟಿಕ್ ಹಚ್ಚಿ , ಹೂವು ಮುಡಿದು ಬ0ದರೆ ಮಾತ್ರ ಆ ದೇವಸ್ಥಾನದ ಓಳಗೆ ಪ್ರವೇಶಿಸಲು ಅನುಮತಿ ನೀಡುತ್ತಾರೆ .

 

 

 

ಆ ದೇವಸ್ಥಾನ ಇರುವುದಾದರೂ ಎಲ್ಲಿ ? ಇಂತಹ ನಿಯಮವನ್ನು ನಾವು ಏಕೆ ಪಾಲಿಸಬೇಕು ? ಎಂಬುವುದನ್ನು ತಿಳಿಯೋಣ

ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯಲ್ಲಿರುವ , ಈ ದೇವಸ್ಥಾನದ ಹೆಸರು ಕೊಟ್ಟಾಲ್ ಕೊಲ್ಲಾರ್. ಇಲ್ಲಿ ಅನಾದಿ ಕಾಲದಿಂದಲೂ ಸಹ ಈ ಆಚಾರವಿದೆ. ಈ ದೇವಸ್ಥಾನದಲ್ಲಿ ಪುರುಷರಿಗೆ ಪ್ರವೇಶ ಇರುವುದಿಲ್ಲ .ಆದರೆ ಪುರುಷರು ಮಹಿಳೆಯರಂತೆ ಉಡುಪು ಧರಿಸಿದರೆ ಮಾತ್ರ ಪ್ರವೇಶವಿರುತ್ತದೆ.ಹೀಗೆ ಸಿದ್ಧವಾಗಲು ದೇವಸ್ಥಾನದ ಸುತ್ತಮುತ್ತ ಅದಕ್ಕೆ ಬೇಕಾದ ಎಲ್ಲ ಸೌಕರ್ಯಗಳು ಇವೆ. ಕಣ್ಣಿಗೆ ಕಾಡಿಗೆ ,ತುಟಿಗೆ ಲಿಪ್ಸ್ಟಿಕ್ , ತಲೆಯಲ್ಲಿ ಹೂವು ಮುಡಿದುಕೊಂಡು ಬರಬೇಕು. ಆರೋಗ್ಯ, ವಿದ್ಯೆ, ವಿವಾಹ ಇಂತಹ ವಿಷಯಗಳ ಬಗ್ಗೆ ಹರಕೆ ಹೊತ್ತವರು ದೇವಿಯನ್ನು ಬೇಡಿಕೊಳ್ಳುತ್ತಾರೆ.

ಈ ಆಚಾರದ ಹಿಂದೆ ಒಂದು ಕತೆಯಿದೆ.

ಒಂದು ಸಲ ಹಸುಗಳನ್ನು ಮೇಯಿಸುವವರು ಸೀರೆಯನ್ನು ಉಟ್ಟು, ಹತ್ತಿರದಲ್ಲಿದ್ದ ಒಂದು ಶಿಲೆಗೆ ಪೂಜೆ ಮಾಡುತ್ತಾರೆ. ಆ ಶಿಲೆಯಲ್ಲಿ ದೈವ ಭಕ್ತಿ ಇರುವುದನ್ನು ಗಮನಿಸಿ, ಮುಂದಿನ ದಿನಗಳಲ್ಲಿ ಆ ಶಿಲೆಗೆ ಗುಡಿಯನ್ನು ನಿರ್ಮಿಸಿ ಕೊಟ್ಟಾನು ಎಂದು ಹೆಸರಿಟ್ಟರು .ಅಂದಿನಿಂದ ಇಲ್ಲಿ ಪುರುಷನು, ಸ್ತ್ರೀ ವೇಷ ಧರಿಸಿ ಪೂಜೆ ಮಾಡುವುದನ್ನು ಪ್ರಾರಂಭಿಸಿದರು ಹಾಗೆಯೇ ಒಂದು ಸಲ ತೆಂಗಿನ ಕಾಯಿಯನ್ನು ಆ ಶಿಲೆಯ ಮೇಲೆ ಹೊಡೆದಾಗ ಅದರಿಂದ ರಕ್ತ ಸೋರಿತೆ0ದು ತೋರಿಸಿದರು. ಅಷ್ಟೇ ಅಲ್ಲದೆ ಆ ಶಿಲೆಯ ಗಾತ್ರವು ದಿನೇ ದಿನೇ ಬೆಳೆಯುತ್ತಿರುತ್ತದೆ ಎಂದು ದೇವಸ್ಥಾನದ ಆರ್ಚಕರು ಮತ್ತು  ನಿರ್ವಾಹಕರು ಹೇಳುತ್ತಾರೆ.ಆದ್ದರಿಂದ ಈ ದೇವಸ್ಥಾನದ ಒಳಗೆ ಪುರುಷರು ಸ್ತ್ರೀಯರಂತೆ ಹೋಗಿ ಪೂಜೆ ಸಲ್ಲಿಸಿ ಬೇಡಿಕೆಗಳು ನೆರವೇರಿದ ನಂತರ ಹರಕೆ ತೀರಿಸಲು ಬರುತ್ತಾರೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top