fbpx
ಭವಿಷ್ಯ

ವಾರ ಭವಿಷ್ಯ ಡಿಸೆಂಬರ್ 3ನೇ ತಾರೀಖಿನಿಂದ 9ನೇ ತಾರೀಖಿನವರೆಗೆ

ಮೇಷ ರಾಶಿ

 

 

 

ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ ಯಾಗಲಿದೆ,ಮಿತ್ರರು ಶತ್ರುಗಳಾಗಲಿದ್ದಾರೆ, ಮಾನಸಿಕ ನೆಮ್ಮದಿ ಲಭ್ಯವಾಗಲಿದೆ, ವಾರದ ಮಧ್ಯಭಾಗದಲ್ಲಿ ಅನಾರೋಗ್ಯ ಪೀಡಿತರಾಗಬೇಕಾಗುತ್ತದೆ, ಯಂತ್ರೋಪಕರಣಗಳಿಂದ ಬಹಳಷ್ಟು ಲಾಭ, ಷೇರು ವ್ಯವಹಾರಗಳಲ್ಲಿ ಅನುಕೂಲ, ಸ್ತ್ರೀಯರಿಗೆ ಶುಭಫಲ ಪ್ರಾಪ್ತಿಯಾಗಲಿದೆ.

ಪರಿಹಾರ:ದುರ್ಗಾ ಸಪ್ತಶತಿ ಪಾರಾಯಣವನ್ನು ಮಾಡಿ ಮಂಗಳವಾರ ಎಂಟು ಜನ ಸುಮಂಗಲಿಯರಿಗೆ ಅರಿಶಿನ-ಕುಂಕುಮವನ್ನು ಕೊಟ್ಟು ನಮಸ್ಕಾರ ಮಾಡಿ.

ವೃಷಭ ರಾಶಿ

 

 

 

ಈ ವಾರ ಮಂಗಳ ಕಾರ್ಯದಲ್ಲಿ ಭಾಗಿಯಾಗುವ ಶುಭಯೋಗ, ವಿರೋಧಿಗಳಿಂದ ಕುತಂತ್ರಗಳು ನಡೆಯಲಿವೆ, ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ ಮತ್ತು ಪುಣ್ಯ ಕ್ಷೇತ್ರ ದರ್ಶನ ಮಾಡುವ ಶುಭಯೋಗ, ಮನಸ್ಸಿನಲ್ಲಿ ಏನೋ ಒಂದು ರೀತಿಯ ಆತಂಕ, ಮಾನಸಿಕ ವ್ಯತೆ ನಿಮ್ಮನ್ನು ಕಾಡಲಿದೆ .

ಪರಿಹಾರ:“ಓಂ ಭೂ ವರಹ ಸ್ವಾಮಿಯೇ ನಮಃ” ಈ ಮಂತ್ರವನ್ನು 108 ಪಠಿಸಿ ಬಡಮಕ್ಕಳಿಗೆ ಅನ್ನದಾನವನ್ನು ಮಾಡಿ.

ಮಿಥುನ ರಾಶಿ

 

 

 

 

ದಿನಸಿ ವ್ಯಾಪಾರಿಗಳಿಗೆ ಬಹಳಷ್ಟು ಲಾಭ ,ದುಶ್ಚಟಗಳಿಗೆ ಹಣ ವ್ಯಯ, ತಾಳ್ಮೆ ಅತ್ಯಗತ್ಯ ,ನಾನಾ ರೀತಿಯ ತೊಂದರೆ ಮತ್ತು ದುರಭ್ಯಾಸಗಳಿಗೆ ಹಣ ವ್ಯಯವಾಗಲಿದೆ , ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ , ಮಕ್ಕಳಿಂದ ಸಹಾಯ, ಶತ್ರುಗಳ ಭಾದೆಗೆ ಒಳಗಾಗಲಿದ್ದೀರಿ.

ಪರಿಹಾರ:ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಿ ಆದಿತ್ಯ ಹೃದಯ ಪಾರಾಯಣವನ್ನು ಮಾಡಿ.

ಕಟಕ ರಾಶಿ

 

 

 

ವಿದ್ಯಾಭ್ಯಾಸದಲ್ಲಿ ಪ್ರಗತಿ, ಪರರಿಂದ ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿದೆ, ಎಚ್ಚರವಹಿಸಿ, ಕಾರ್ಯದಲ್ಲಿ ಬದಲಾವಣೆ ಮಾಡುವುದಕ್ಕೆ ಬಹಳಷ್ಟು ಆಲೋಚನೆ ಮಾಡುತ್ತಿರ, ರಿಯಲ್ ಎಸ್ಟೇಟ್ ನವರಿಗೆ ಲಾಭವಾಗಲಿದೆ, ಆಹಾರ ಸೇವನೆಯಲ್ಲಿ ಬಹಳಷ್ಟು ವ್ಯತ್ಯಾಸ ಉಂಟಾಗಿ ಅನಾರೋಗ್ಯ ಪೀಡಿತರಾಗಬೇಕಾಗುತ್ತದೆ, ಕುಟುಂಬ ಸೌಖ್ಯ , ವಾರಾಂತ್ಯದಲ್ಲಿ ಮಾನಸಿಕ ಶಾಂತಿ ಮತ್ತು ನೆಮ್ಮದಿ ಲಭಿಸಲಿದೆ .

ಪರಿಹಾರ:ಪ್ರತಿನಿತ್ಯ ಗಣೇಶನ ದೇವಾಲಯಕ್ಕೆ ಭೇಟಿ ನೀಡಿ ಮಂಗಳವಾರ ಅರ್ಕ ಪುಷ್ಪವನ್ನು ಅರ್ಪಿಸಿ ದೀರ್ಘದಂಡ ನಮಸ್ಕಾರವನ್ನು ಮಾಡಿ.

ಸಿಂಹ ರಾಶಿ

 

 

 

ಇಷ್ಟವಾದ ವಸ್ತುಗಳ ಖರೀದಿಯನ್ನು ಮಾಡಲಿದ್ದೀರಿ, ಆತ್ಮೀಯರಲ್ಲಿ ಪ್ರೀತಿ ವಾತ್ಸಲ್ಯ ಅಧಿಕವಾಗಲಿದೆ ,ನಿಮ್ಮ ಶರೀರದಲ್ಲಿ ಉತ್ತಮ ಬುದ್ಧಿಶಕ್ತಿ ಪ್ರಾಪ್ತಿಯಾಗುತ್ತದೆ, ವಾಹನ ರಿಪೇರಿಗೋಸ್ಕರ ಬಹಳಷ್ಟು ಹಣವನ್ನು ಖರ್ಚು ಮಾಡಲಿದ್ದೀರಿ, ಗುರುಗಳ ದರ್ಶನ ಮಾಡುವ ಶುಭಯೋಗ, ಹೊಟ್ಟೆನೋವು,ಹಿರಿಯರ ಸಲಹೆ ಮತ್ತು ಮಾತೃವಿನಿಂದ ಸಹಾಯ ಪಡೆದುಕೊಳ್ಳಲಿದ್ದೀರಿ, ಕೃಷಿ ಚಟುವಟಿಕೆಯಲ್ಲಿರುವವರಿಗೆ ಬಹಳಷ್ಟು ಲಾಭ .

ಪರಿಹಾರ:ಪ್ರತಿನಿತ್ಯ ಹನುಮಾನ್ ಚಾಲೀಸವನ್ನು ಪಾರಾಯಣ ಮಾಡಿ ಶನಿವಾರ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ ನಾಟಿ ತುಳಸಿಯನ್ನು ಅರ್ಪಿಸಿ ದೀರ್ಘದಂಡ ನಮಸ್ಕಾರವನ್ನು ಮಾಡಿ.

ಕನ್ಯಾ ರಾಶಿ

 

 

 

ಅನಿರೀಕ್ಷಿತ ಖರ್ಚು, ಮಾತಿನ ಮೇಲೆ ಹಿಡಿತವಿರಲಿ , ನಿವೇಶನ ಪ್ರಾಪ್ತಿಯಾಗಲಿದೆ, ದಾಂಪತ್ಯದಲ್ಲಿ ಕಲಹಗಳು ಉಂಟಾಗಲಿವೆ, ಅವಾಚ್ಯ ಶಬ್ದಗಳನ್ನು ಈ ವಾರ ಉಪಯೋಗಿಸಬೇಡಿ , ಮಾನಸಿಕ ವ್ಯಥೆ, ಪರರಿಂದ ಸಹಾಯ, ದೂರ ಪ್ರಯಾಣ, ನೆಮ್ಮದಿ ಇಲ್ಲದ ಜೀವನ ಈ ವಾರ ನಿಮ್ಮದಾಗಲಿದೆ.

ಪರಿಹಾರ:ಪ್ರತಿನಿತ್ಯ ಶಿವಾಲಯಕ್ಕೆ ಹೋಗಿ  ಶಿವನಿಗೆ ಬಿಲ್ವಾರ್ಚನೆಯನ್ನು ಮಾಡಿಸಿ, ಸೋಮವಾರ ಶಿವಾಲಯದಲ್ಲಿ ಅಭಿಷೇಕಕ್ಕೆ ಕ್ಷೀರ ದಾನವನ್ನು ಮಾಡಿ.

ತುಲಾ ರಾಶಿ

 

 

 

ನಾನಾ ರೀತಿಯ ಸಂಪಾದನೆಗಳು,ಧನಾಗಮನ ಆಗಲಿದೆ, ಮನಸ್ಸಿನಲ್ಲಿ ಏನೋ ಒಂದು ರೀತಿಯ ಗೊಂದಲಮಯವಾದ ವಾತಾವರಣ , ಸಾಲದಿಂದ ಮುಕ್ತಿಯಾಗಲಿದ್ದೀರ, ದೈವಾನುಗ್ರಹದಿಂದ ಬಹಳಷ್ಟು ಅನುಕೂಲಗಳನ್ನು ಪಡೆಯಲಿದ್ದೀರಿ, ಉತ್ತಮ ಬುದ್ಧಿಶಕ್ತಿ ಈ ವಾರ ನಿಮ್ಮ ಶರೀರದಲ್ಲಿ ಉತ್ಪತ್ತಿಯಾಗಲಿದೆ, ಅಮೂಲ್ಯ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ .

ಪರಿಹಾರ:“ಓಂ ಮಹಾಲಕ್ಷ್ಮಿಯೇ ನಮಃ” ಈ ಮಂತ್ರವನ್ನು ಪ್ರತಿನಿತ್ಯ 48 ಬಾರಿ ಜಪಿಸಿ ಶುಕ್ರವಾರ ಅರಿಶಿನ-ಕುಂಕುಮವನ್ನು ಸುಮಂಗಲಿಯರಿಗೆ ಕೊಟ್ಟು ನಮಸ್ಕಾರ ಮಾಡಿ.

ವೃಶ್ಚಿಕ ರಾಶಿ 

 

 

 

ಮಕ್ಕಳ ಭಾವನೆಗಳಿಗೆ ಸ್ಪಂದಿಸುವಿರಿ, ಸ್ಥಿರಾಸ್ತಿ ಖರೀದಿ ಸಾಧ್ಯತೆ ಇದೆ , ದೇವತಾ ಕಾರ್ಯಗಳಲ್ಲಿ ಭಾಗಿಯಾಗುವ ಶುಭಯೋಗ , ಅತಿಯಾದ ಕೋಪ, ಅನವಶ್ಯಕ ದ್ವೇಷಕ್ಕೆ ಸಾಧನೆ ಒಳ್ಳೆಯದಲ್ಲ, ಮಿತ್ರರಲ್ಲಿ ಸ್ನೇಹ ವೃದ್ಧಿಯಾಗಲಿದೆ.

ಪರಿಹಾರ:ಪ್ರತಿ ನಿತ್ಯ ವಿಷ್ಣುವಿಗೆ ಪೂಜೆಯನ್ನು ಮಾಡಿ ಮಂಗಳವಾರ ವಟು ಬ್ರಾಹ್ಮಣರಿಗೆ ಸ್ವಯಂಪಾಕವನ್ನು ನೀಡಿ ನಮಸ್ಕಾರ ಮಾಡಿ.

ಧನಸ್ಸು ರಾಶಿ

 

 

 

ಉತ್ತಮ ಬುದ್ಧಿಶಕ್ತಿ ನಿಮ್ಮ ಶರೀರದಲ್ಲಿ ಉತ್ಪತ್ತಿಯಾಗಲಿದೆ, ವೃತ ಅಲೆದಾಟ, ಹೊಸ ವ್ಯವಹಾರದಿಂದ ಲಾಭವನ್ನು ಗಳಿಸಲಿದ್ದೀರಿ, ಅನಿರೀಕ್ಷಿತ ದ್ರವ್ಯ ಲಾಭ ಮತ್ತು ವಸ್ತ್ರಾಭರಣದ ಯೋಗವಿದೆ , ಒಳ್ಳೆಯವರ ಸಹವಾಸದಿಂದ ಕೀರ್ತಿ ಪ್ರಾಪ್ತಿಯಾಗಲಿದೆ , ಮಾನಸಿಕ ನೆಮ್ಮದಿ ವಾರಾಂತ್ಯದಲ್ಲಿ ಲಭಿಸುವುದು .

ಪರಿಹಾರ:ಪ್ರತಿನಿತ್ಯ ಔದುಂಬರ ವೃಕ್ಷಕ್ಕೆ ಹದಿನೆಂಟು ಬಾರಿ ಪ್ರದಕ್ಷಿಣೆ ಮಾಡಿ ಗುರುವಾರ ಗುರುಗಳ ದರ್ಶನ ಮಾಡಿ ನಮಸ್ಕಾರ ಮಾಡಿ.

ಮಕರ ರಾಶಿ

 

 

 

ವಿವಾಹದ ಮಾತುಕತೆಯನ್ನು ಮಾಡುವ ವಾರವಾಗಲಿದೆ, ವಿದೇಶ ಪ್ರಯಾಣ, ಇಲ್ಲಸಲ್ಲದ ಅಪವಾದಗಳು, ನಿಂದನೆಗಳು ನಿಮ್ಮ ಮೇಲೆ ಬರಲಿವೆ,ಎಚ್ಚರವಹಿಸಿ, ನಿಮ್ಮ ಗೌರವಕ್ಕೆ ಧಕ್ಕೆ ಬರಲಿದೆ, ಅನ್ಯ ಜನರಲ್ಲಿ ಪ್ರೀತಿ ವಾತ್ಸಲ್ಯ ಹೆಚ್ಚಾಗಲಿದೆ, ಬೆಂಕಿಯಿಂದ ತೊಂದರೆಗಳಾಗುವ ಸಾಧ್ಯತೆ ಇದೆ ಎಚ್ಚರಿಕೆ ವಹಿಸಿ, ಅಕಾಲ ಬೋಜನ, ಆದಾಯಕ್ಕಿಂತ ಖರ್ಚನ್ನು ಹೆಚ್ಚಾಗಿ ಮಾಡುತ್ತೀರ, ಆದ್ದರಿಂದ ಖರ್ಚಿನಲ್ಲಿ ಹಿಡಿತವಿರಲಿ.

ಪರಿಹಾರ:“ಓಂ ಹೇರಂಬ ಗಣಪತಯೇ ನಮಃ” ಈ ಮಂತ್ರವನ್ನು ಪ್ರತಿನಿತ್ಯ 21 ಬಾರಿ ಜಪಿಸಿ ಗರಿಕೆಯನ್ನು ಗಣೇಶನಿಗೆ ಅರ್ಪಿಸಿ ದೀರ್ಘದಂಡ ನಮಸ್ಕಾರವನ್ನು ಮಾಡಿ.

ಕುಂಭ ರಾಶಿ

 

 

 

ಯತ್ನ ಕಾರ್ಯದಲ್ಲಿ ಜಯವನ್ನು  ಗಳಿಸಲಿದ್ದೀರಿ, ತೀರ್ಥಯಾತ್ರೆ ದರ್ಶನ ಮಾಡುವ ಶುಭಯೋಗ, ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದೆ ,ನಿಮ್ಮ ಮಾತಿನಲ್ಲಿ ಪ್ರೀತಿ ವಾತ್ಸಲ್ಯ ಅಧಿಕವಾಗಲಿದೆ, ಆದರೆ ವಾರಾಂತ್ಯದಲ್ಲಿ ವಿಪರೀತ ಖರ್ಚು ಉಂಟಾಗಲಿದೆ, ನಯವಂಚಕರ ಮಾತಿಗೆ ಮರುಳಾಗಬೇಡಿ.

ಪರಿಹಾರ:ಪ್ರತಿನಿತ್ಯ ಅಶ್ವತ ವೃಕ್ಷ ಪ್ರದಕ್ಷಿಣೆಯನ್ನು ಹದಿನೆಂಟು ಬಾರಿ ಮಾಡಿ ದೀರ್ಘದಂಡ ನಮಸ್ಕಾರವನ್ನು ಮಾಡಿ.

ಮೀನ ರಾಶಿ

 

 

 

ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ಮತ್ತು ಮುನ್ನಡೆ ದೊರೆಯಲಿದೆ, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ , ಸ್ವಂತ ಉದ್ಯಮ ವ್ಯಾಪಾರಸ್ಥರಿಗೆ ಲಾಭ, ನಿಷ್ಠುರದ ಮಾತುಗಳನ್ನು ಆಡಬೇಡಿರಿ, ಅನ್ಯರಿಗೆ ನೋವುಂಟು ಮಾಡಬೇಡಿ ,ಈ ವಾರ ಎಚ್ಚರಿಕೆಯಿಂದ ಇರುವುದು ಉತ್ತಮ .

ಪರಿಹಾರ:ಪ್ರತಿನಿತ್ಯ ವಿಷ್ಣು ಸಹಸ್ರನಾಮವನ್ನು ಪಾರಾಯಣ ಮಾಡಿ ಬುದುವಾರ ವಿಷ್ಣು ದೇವಾಲಯಕ್ಕೆ ಹೋಗಿ ನಾಟಿ ತುಳಸಿಯನ್ನು ಅರ್ಪಿಸಿ ದೀರ್ಘದಂಡ ನಮಸ್ಕಾರವನ್ನು ಮಾಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top