ಹೆಚ್ಚಿನ

ಯುಟ್ಯೂಬ್ ಚಾನೆಲ್ ನಡೆಸುವ ಈ 7 ವರ್ಷದ ಪೋರ ಮಿನಿ-ಮಿಲಿಯನೇರ್.

ಸಾಮಾಜಿಕ ಜಾಲ ತಾಣಗಳು ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ? ಚಿಕ್ಕ ಮಕ್ಕಳಿನಿಂದ ಹಿಡಿದು ದೊಡ್ಡವರ ತನಕ ಈ ಸೋಶಿಯಲ್ ಮೀಡಿಯಾ ಗಳು ಎಲ್ಲರ ಫೇವರಿಟ್. ವಾಟ್ಸಪ್, ಫೇಸ್ಬುಕ್ , ಟ್ವಿಟ್ಟರ್ ಹಾಗೂ ಯುಟ್ಯೂಬ್ ಸದ್ಯಕ್ಕೆ ಪ್ರಪಂಚ್ವನ್ನೇ ಅಳುತ್ತಿರುವ ಮೀಡಿಯಾಗಳು.

ಒಂದು ಫೇಮಸ್ ಸೋಶಿಯಲ್ ಮೀಡಿಯಾ ಆದ ಯುಟ್ಯೂಬ್ ಬಗ್ಗೆ ಮಾತಿಗೆ ಕೂತರೆ, ಯುಟ್ಯೂಬ್ ಹಲವರಿಗೆ ವರವಾಗಿದೆ ಎಂದರೆ ತಪ್ಪಗಲಾರದು. ನಿಮಗೆ ಬೇಕಾದ ಮಾಹಿತಿಗೆ ಸಂಬಂಧ ಪಟ್ಟಂತ ವಿಡಿಯೋಗಳು ಚಿಟಕಿ ಒಡೆಯೋ ಅಷ್ಟರಲ್ಲಿ ಯುಟ್ಯೂಬ್ ನಲ್ಲಿ ಸಿಗುತ್ತದೆ. ಈಗ ನೆಟ್ಟಿಗರಿಗಂತೂ ವಾಟ್ಸಪ್, ಫೇಸ್ಬುಕ್ , ಟ್ವಿಟ್ಟರ್ ನಷ್ಟೇ ಯುಟ್ಯೂಬ್ ಕೂಡ ಪ್ರಿಯವಾದ ಮೀಡಿಯಾವಾಗಿದೆ . ಹೀಗಿರುವಾಗ ಆಗಾಗ ಯುಟ್ಯೂಬ್ ಬಳಕೆದಾರರಲ್ಲಿ ಅತಿ ಹೆಚ್ಚು ಹಣ ಸಂಪಾದಿಸುವ ಯುಟ್ಯೂಬರ್ ಯಾರು ಅನ್ನೋ ಪ್ರಶ್ನೆ ಮೂಡುವುದಂತೂ ಸಹಜ.

ಯುಟ್ಯೂಬ್ ನಲ್ಲಿ ಅತಿ ಹೆಚ್ಚು ಹಣ ಸಂಪಾದಿಸಿವ ಯುಟ್ಯೂಬರ್ ಯಾರು ಅನ್ನುವ ನೆಟ್ಟಿಗರ ಪ್ರಶ್ನೆಗೆ ಉತ್ತರ ಸಿಕ್ಕಿದೆ . ಹೌದು, ಯುಟ್ಯೂಬ್ ನಲ್ಲಿ ಅತಿ ಹೆಚ್ಚು ಗಳಿಸುವ ಯುಟ್ಯೂಬರ್ 7 ವರ್ಷದ ಪೋರ
RYAN , ಹೌದು ಈತ “RYAN TOY REVIEW” ಅನ್ನುವ ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದು. ಹಲವು ನೆಟ್ಟಿಗರ ಫೇವರಿಟ್ ಯುಟ್ಯೂಬರ್ ಆಗಿದ್ದಾನೆ. ತನ್ನ ಯುಟ್ಯೂಬ್ ಚಾನೆಲ್ ನಲ್ಲಿ ಆಟಿಕೆಗಳ ರಿವ್ಯೂ ನೀಡುವ ಈತ 26 ಬಿಲಿಯನ್ ಗೂ  ಹೆಚ್ಚಿನ  VIEWS ಪಡೆದಿದ್ದಾನೆ ಮತ್ತು ಈಗಾಗಲೇ 22 ಮಿಲಿಯನ್ ಡಾಲರ್ ಸಂಪಾದಿಸಿದ್ದಾನೆ . ಸದ್ಯಕ್ಕೆ ದಿ ಈತ ಬೆಸ್ಟ್ ಯುಟ್ಯುಬರ್ಸ್ ಆದ JAKE PAUL ಮತ್ತು JEFFREE STARR ರವರನ್ನು ಹಿಂದಕ್ಕಿ ಮುಂಚೂಣಿಯಲ್ಲಿದ್ದಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top