fbpx
ಭವಿಷ್ಯ

ರವಿಯ ನಕ್ಷತ್ರವಾದ ಉತ್ತರಾಷಾಡ ನಕ್ಷತ್ರದಲ್ಲಿ ಕೇತುವಿನ ಸಂಚಾರವಾಗಲಿದೆ,ಇದರಿಂದ 12 ರಾಶಿಗಳ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಗೊತ್ತಾ

ಕೇತುವನ್ನು ಮೋಕ್ಷಾಧಿಪತಿ ಎಂದು ಕರೆಯುತ್ತಾರೆ. ರವಿಯ ನಕ್ಷತ್ರ ಅಂದರೆ ಉತ್ತರಾಷಾಡ ನಕ್ಷತ್ರದಲ್ಲಿ ಕೇತು ಸಂಚಾರವನ್ನು ಮಾಡುತ್ತಾನೆ. ಇದು ತುಂಬಾ ಗಂಭೀರವಾದ ಕೆಲವೊಂದು ಪರಿಣಾಮಗಳನ್ನು ಬೀರುತ್ತದೆ. “ಫಸಲಿಗೆ ಬಂದ ಪೈರು ಅನಾಥವಾದೀತು, ಕುರ್ಚಿ ಮುರಿದು ಬಿದ್ದಿದ್ದು, ಪಾರ್ವತಿ ಪತಿ, ಪುತ್ರ ಹೆಸರಿನವನು ಒಂದು ಖುರ್ಚು ಸರಿ ಮಾಡಿ ಕೂತಾನು” ಎನ್ನುವುದು ಒಂದು ವಾಕ್ಯ ಇದನ್ನು ಅರ್ಥ ಮಾಡಿಕೊಂಡರೆ ಮುಂದೆ ನಡೆಯುವುದು ತಿಳಿಯುತ್ತದೆ.ಈ ಪರಿಣಾಮಗಳನ್ನು ಏಪ್ರಿಲ್ 2019 ರವರೆಗೆ ಎದುರಿಸಬೇಕಾಗಿದೆ.

ಮೇಷ ರಾಶಿ:ಅದ್ಭುತವಾದ ಅವಕಾಶಗಳು, ಹೆಸರು, ಕೀರ್ತಿ, ಪ್ರತಿಷ್ಠೆ ಲಭಿಸುತ್ತದೆ. ರಾಜಕೀಯದಿಂದ ಅನುಕೂಲ, ಸರ್ಕಾರಿ ಕೆಲಸಗಳಲ್ಲಿ ಅನುಕೂಲ, ಪಿತ್ರಾಜಿತ ಆಸ್ತಿ ತಗಾದೆಗಳು ಬಗೆಹರಿಯುತ್ತವೆ.
ವೃಷಭ ರಾಶಿ:ತುಂಬಾ ಒತ್ತಡಕ್ಕೆ ಸಿಲುಕುತ್ತೀರಿ, ಯಾವುದೋ ಒಂದು ರೀತಿಯಲ್ಲಿ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುವ ಸನ್ನಿವೇಶ, ಡೈವರ್ಸ್ ಅಥವಾ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಏನಾದರೂ ಒಂದು ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳಬೇಕಾಗುತ್ತದೆ. ಹೊಡೆದಾಟ, ಬಡಿದಾಟ, ಕಿರಿಕಿರಿ ಇಂತಹ ವಿಷಯಗಳಿಗೆ ಹೋಗಬೇಡಿ. ಇದರಿಂದ ಸಮಸ್ಯೆಗಳು ಉಂಟಾಗುತ್ತದೆ.
ಮಿಥುನ ರಾಶಿ:ಮಿಥುನ ರಾಶಿಯವರಿಗೆ ಆಯುಷ್ಯಕ್ಕೆ ಕಂಟಕಗಳ ಬರುತ್ತದೆ, ಸಣ್ಣದಾಗಿ ಬಿದ್ದು ಪೆಟ್ಟು ಮಾಡಿಕೊಳ್ಳುವಿರಿ, ಏಪ್ರಿಲ್ ತಿಂಗಳಿನ ಒಳಗಡೆ ಮಿಥುನ ರಾಶಿಯವರಿಗೆ ಖಂಡಿತವಾಗಿಯೂ ಸರಿ ಇಲ್ಲ ಆದ್ದರಿಂದ ಎಚ್ಚರವಾಗಿರಿ.
ಕಟಕ ರಾಶಿ:ಹಣಕಾಸಿನ ವಿಚಾರದಲ್ಲಿ ಅವಕಾಶಗಳು ಒದಗಿ ಬರುತ್ತವೆ. ಸರ್ಕಾರಿ ಬ್ಯಾಂಕ್ ಗಳಿಂದ ಸಾಲ ಸಹಾಯಗಳು ಲಭಿಸುತ್ತದೆ.

 

 

 

ಸಿಂಹ ರಾಶಿ:ಸ್ವಂತ ಉದ್ಯಮ , ವ್ಯಾಪಾರದಲ್ಲಿ ಏನಾದರೂ ಬದಲಾವಣೆಯಾಗುತ್ತದೆ, ಪ್ರಗತಿ ಹೊಂದುತ್ತೀರ, ಮನಸ್ಸಿನಲ್ಲಿ ಧೈರ್ಯ ಬರುತ್ತದೆ, ಸರ್ಕಾರದಿಂದ ಮನ್ನಣೆ ದೊರೆಯಲಿದೆ.
ಕನ್ಯಾ ರಾಶಿ:ಒತ್ತಡಗಳು ಜಾಸ್ತಿಯಾಗುತ್ತವೆ, ನಷ್ಟವನ್ನು ಅನುಭವಿಸಬೇಕಾಗುತ್ತದೆ, ಮಕ್ಕಳಿಂದ ನೋವು, ಮಕ್ಕಳು ದೂರವಾಗಲಿದ್ದಾರೆ ಇವೆಲ್ಲಾ ಪರಿಸ್ಥಿತಿಗಳು ನಿರ್ಮಾಣವಾಗುತ್ತವೆ.
ತುಲಾ ರಾಶಿ:ಬಾಧೆಯನ್ನು ಅನುಭವಿಸಬೇಕಾಗುತ್ತದೆ, ಮಕ್ಕಳಿಂದ ಬಾದೆ, ಮೇಲಧಿಕಾರಿಗಳಿಂದ ಬಾಧೆ,ಇವೆಲ್ಲವೂ ಕೂಡ ನಿರ್ಮಾಣವಾಗುತ್ತವೆ.
ವೃಶ್ಚಿಕ ರಾಶಿ:ಉದ್ಯೋಗದಲ್ಲಿ ಬಡ್ತಿ ಸಿಗಲಿದೆ, ಉದ್ಯೋಗ ದೊರೆಯುತ್ತದೆ,ಧನಾಗಮನವಾಗಲಿದೆ.
ದನಸ್ಸು ರಾಶಿ:ಪಿತ್ರಾರ್ಜಿತ ಆಸ್ತಿ ಒದಗಿ ಬರುತ್ತದೆ, ಅನುಕೂಲಗಳು ಪ್ರಾಪ್ತಿಯಾಗುತ್ತವೆ.
ಮಕರ ರಾಶಿ:ಅನುಕೂಲ ಪ್ರಾಪ್ತಿಯಾದರೂ ಕೂಡ ಒತ್ತಡಕ್ಕೆ ಸಿಲುಕಿ ಹಾಕಿಕೊಳ್ಳುತ್ತೀರಿ, ಕೋರ್ಟ್ ,ಕೇಸ್ ಮತ್ತು ಸಮಸ್ಯೆಗಳು ಖಾಯಿಲೆಗಳಿಂದ ಬಳಲಬೇಕಾಗುತ್ತದೆ.
ಕುಂಭ ರಾಶಿ:ದಾಂಪತ್ಯದಲ್ಲಿ ಸಮಸ್ಯೆಗಳು ಉತ್ಪತ್ತಿಯಾಗುತ್ತವೆ,ನಾನು ಎನ್ನುವ ಅಹಂಭಾವ ಹೆಚ್ಚಾಗಲಿದೆ.
ಮೀನ ರಾಶಿ:ಅಪಘಾತವನ್ನು ಮಾಡಿಕೊಳ್ಳುತ್ತೀರಿ, ಅನಾರೋಗ್ಯದಿಂದ ಬಳಲುತ್ತೀರ, ಅನಾರೋಗ್ಯ ಸಮಸ್ಯೆಗಳು ಕೂಡ ಬರುವ ಸಾಧ್ಯತೆ ಉಂಟು ಮತ್ತು ಅಜೀರ್ಣ ಸಮಸ್ಯೆಗಳು ಹೆಚ್ಚಾಗುತ್ತವೆ ಮತ್ತು ಕಣ್ಣು ಉರಿ ತಲೆ ನೋವು ಇಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top