ಹೆಚ್ಚಿನ

ಈ ಊರಲ್ಲಿ ಮಣ್ಣಿನ ಬಿಸ್ಕೆಟ್ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ ಜನ , ಯಾಕೆ ಹೀಗೆ ಮಾಡ್ತಾರೆ , ಈ ಬಿಸ್ಕೆಟ್ ಮಾಡೋದು ಹೇಗೆ ಗೊತ್ತಾ

ಮಣ್ಣಿನ ಬಿಸ್ಕೆಟ್ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ ಇಲ್ಲಿನ ಜನ. ಯಾವ ದೇಶದ ಜನ ಇವರು ಏಕೆ ಹೀಗೆ ಮಾಡುತ್ತಾರೆ.? ಈ ಬಿಸ್ಕೆಟ್ ಮಾಡೋದು ಹೇಗೆ ಗೊತ್ತಾ ?

ನಿಜ ಮಣ್ಣಿನ ಬಿಸ್ಕೆಟ್ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ ಈ ಜನ . ಪ್ರಪಂಚದ ಅನೇಕ ಜನರು ಹೊಟ್ಟೆ ತುಂಬಿದ ನಂತರ ನಮ್ಮ ತಟ್ಟೆಯಲ್ಲಿರುವ ಆಹಾರವನ್ನು ಎಸೆಯುತ್ತಾರೆ. ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ಅಂದಾಜಿನ ಪ್ರಕಾರ 1.3 ಶತಕೋಟಿ ಟನ್ಗಳಷ್ಟು ಸೇವನೆಗೆ ಯೋಗ್ಯವಾದ ಆಹಾರ ಪದಾರ್ಥವು ಕಸದ ಬುಟ್ಟಿಗೆ ಸೇರುತ್ತಿದೆಯಂತೆ.

 

 

 

ಆದರೆ ಇದೇ ಜಗತ್ತಿನಲ್ಲಿ ಆಹಾರವಿಲ್ಲದೆ ಪರದಾಡುತ್ತಿರುವ ಜನರ ಸಂಖ್ಯೆ ಕಡಿಮೆ ಏನಿಲ್ಲ. ಇನ್ನು ಈ ವಿಚಾರಕ್ಕೆ ಬಂದರೆ ಲ್ಯಾಟಿನ್ ಅಮೆರಿಕಾ ದೇಶದ ಹ್ಯಾಟಿಯಲ್ಲಿ ಅಮೆರಿಕದ ಜನರು ಮಣ್ಣನ್ನು ಸೇವನೆ ಮಾಡುತ್ತಿದ್ದಾರೆ. ಮಣ್ಣನ್ನು ಹಾಗೆಯೇ ಸೇವನೆ ಮಾಡುವುದು ಕಷ್ಟ ಆದ್ದರಿಂದ ಮಣ್ಣಿನ ಬಿಸ್ಕೆಟ್ ಗಳನ್ನು ತಯಾರಿಸಿ ತಿನ್ನುತ್ತಿದ್ದಾರೆ.ಇಲ್ಲಿನ ಜನರ ಸರಾಸರಿ ಆದಾಯ ಎರಡು ಡಾಲರ್ ಗಿಂತ ಕಡಿಮೆಯೇ ಇದೆ. ಅಂದರೆ ಸುಮಾರು ನೂರಾ ಇಪ್ಪತ್ತು ರುಪಾಯಿ. ಹಣ್ಣು , ಹಾಲು , ತರಕಾರಿ ಇಲ್ಲಿನವರ ಕನಸು ಮಾತ್ರ ಅಷ್ಟೇ. ಇದನ್ನು ದುಬಾರಿ ಆಹಾರವೆಂದು ಅವರು ಪರಿಗಣಿಸಿದ್ದಾರೆ.ಪೌಷ್ಟಿಕಾಂಶದ ಆಹಾರ ಸೇವಿಸುವ ಬದಲು ಇಲ್ಲಿನ ಜನರು ಮಣ್ಣಿನ ಬಿಸ್ಕೆಟ್ ಅನ್ನು ತಿನ್ನುತ್ತಿದ್ದಾರೆ. ಇದರಿಂದ ಪೌಷ್ಟಿಕಾಂಶದ ಕೊರತೆಯ ಜೊತೆಗೆ ಮಣ್ಣಿನಿಂದ ಬರುವ ಅನೇಕ ಖಾಯಿಲೆಗಳು ಕೂಡ ಅವರನ್ನು ಕಾಡುತ್ತಿದೆಯಂತೆ. ಸುಮಾರು ಮೂರು ಲಕ್ಷ ಜನರ ಬಳಿ ಆಹಾರ ಖರೀದಿ ಮಾಡಲು ಹಣವಿಲ್ಲ, ಮಣ್ಣು ಮತ್ತು ಮಣ್ಣಿನ ಬಿಸ್ಕೆಟ್ ಗಳೇ ಇವರ ಆಹಾರವಾಗಿವೆ.

 

 

 

ದೇಶದ ಶೇಕಡ ಹತ್ತರಷ್ಟು ಮಂದಿ ದೇಶದ ಆದಾಯದ ಶೇಕಡ ಎಪ್ಪತ್ತು ರಷ್ಟು ಪಾಲು ಪಡೆಯುತ್ತಾರೆ. ಉಳಿದ ಶೇಖಡ ತೊಂಬತ್ತುರಷ್ಟು ಮಂದಿಯ ಆದಾಯ ನೂರಾ ಇಪ್ಪತ್ತು ರುಪಾಯಿ ಮಾತ್ರ.ಮಣ್ಣು, ನೈಸರ್ಗಿಕ ತೈಲ ಹಾಗೂ ನೀರು ಬೆರೆಸಿ ಬಿಸ್ಕೆಟ್ ತಯಾರಿಸಿ. ಬಿಸಿಲಿನಲ್ಲಿ ಒಣಗಿಸಿ ಹಸಿವಾದಾಗ ತಿನ್ನುತ್ತಾರೆ. ಇದರಲ್ಲಿ ಕ್ಯಾಲ್ಷಿಯಂ ಹಾಗೂ ವಿಟಮಿನ್ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಎನ್ನುತ್ತಾರೆ ಇಲ್ಲಿನ ಜನರು. ಏನೇ ಆದರೂ ಇಂತಹ ಪರಿಸ್ಥಿತಿ ಯಾರಿಗೂ ಕೂಡ ಬರಬಾರದು.ಆಲ್ಲವೇ ?

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top