ಹೆಚ್ಚಿನ

ನಿಮ್ಮ ಕಾಲಿನ ಬೆರಳನ್ನು ನೋಡಿ ನೀವು ಎಂತಹ ವ್ಯಕ್ತಿತ್ವ ಉಳ್ಳವರು ಎಂದು ತಿಳಿಯಿರಿ ನಿಮ್ಮ ಬಗ್ಗೆ ತಿಳ್ಕೊಬೇಕಾ ಹಾಗಾದ್ರೆ ನಿಮ್ಮ ಕಾಲಿನ ಬೆರಳುಗಳು ನೋಡ್ಕೊಳ್ಳಿ ಅಂತಾರೆ

ನಿಮ್ಮ ಕಾಲಿನ  ಬೆರಳನ್ನು  ನೋಡಿ  ನೀವು ಎಂತಹ ವ್ಯಕ್ತಿತ್ವ  ಉಳ್ಳವರು  ಎಂದು  ತಿಳಿಯಿರಿ

ನಿಮ್ಮ ಪಾದವನ್ನು ನೋಡಿ ನೀವು ಎಂತಹ ವ್ಯಕ್ತಿತ್ವ ಉಳ್ಳವರು ಎಂಬುದನ್ನು ಹೇಳಬಹುದು. ನೀವು ಸಾಹಸ ಪ್ರವೃತ್ತಿ ಇರುವವರೋ ? ಅಥವಾ ಸೂಕ್ಷ್ಮ ಸ್ವಭಾವದ ಪ್ರವೃತ್ತಿಯನ್ನು ಹೊ೦ದಿರುವವರೋ ? ಎಂಬುದನ್ನು ಪಾದಗಳು ಮತ್ತು ಪಾದಗಳಲ್ಲಿ ಇರುವ ಬೆರಳುಗಳನ್ನು ನೋಡಿ ಹೇಳಬಹುದು ಎನ್ನುತ್ತಾರೆ ಜೇನ್ ಶೆಹಾನ್ ಎಂಬ ಸಂಶೇಶಿೢತವಾದಿ ( reflexologist).

ಹೆಬ್ಬೆರಳು:ಉಳಿದ ಬೆರಳುಗಳಿಗಿ೦ತ  ಹೆಬ್ಬೆರಳು ಉದ್ದವಾಗಿದ್ದರೆ ಇವರು ತುಂಬ ಬುದ್ಧಿವಂತರು, ಚತುರರು ಹಾಗೂ ಸೃಜನಶೀಲತೆಯ ವ್ಯಕ್ತಿತ್ವ ಉಳ್ಳವರಾಗಿರುತ್ತಾರೆ. ಯಾವುದೇ ಸಮಸ್ಯೆ ಬರಲಿ ಹಾಗೆಯೇ ಪರಿಹರಿಸಿಕೊಳ್ಳುತ್ತಾರೆ. ಒಂದು ವೇಳೆ ಇದು ಉಳಿದ ಬೆರಳುಗಳಿಗಿಂತ ಚಿಕ್ಕದಾಗಿದ್ದರೆ ಇವರು ಬಹುಕಾರ್ಯಗಳ ವ್ಯಕ್ತಿತ್ವ ಉಳ್ಳವರು. ಬೇರೆಯವರನ್ನು ಪ್ರಭಾವಿಸುವ ಗುಣ ಉಳ್ಳವರು .

 

 

 

ಎರಡನೇ ಬೆರಳು:ಎರಡನೇ ಬೆರಳು ಉದ್ದವಾಗಿದ್ದರೆ ಇವರಲ್ಲಿ ನಾಯಕತ್ವದ ಗುಣಗಳು ಹೆಚ್ಚಾಗಿರುತ್ತವೆ. ಇವರಲ್ಲಿ ಬೇರೆಯವರ ಮೇಲೆ ನಾನು ಎಂಬ ಅಧಿಕಾರವನ್ನು ಚಲಾಯಿಸುವುದು ಜಾಸ್ತಿ.ಒಂದು ವೇಳೆ ಉದ್ದವಾಗಿ ಇಲ್ಲದಿದ್ದರೆ ಸಾಮರಸ್ಯದ ಜೀವನ  ನಡೆಸುತ್ತಾರೆ.ಎಲ್ಲರ ಜೊತೆಯಲ್ಲೂ ಹೊಂದಿಕೊಂಡು ಹೋಗುತ್ತಾರೆ.ಮೂರನೇ ಬೆರಳು:ಈ ಬೆರಳು ಉದ್ದವಾಗಿದ್ದರೆ ಇವರು ಕೆಲಸದಲ್ಲಿ ಪ್ರಾವೀಣ್ಯತೆ, ಸಂಪನ್ಮೂಲ ಹೊಂದಿರುವ  ವ್ಯಕ್ತಿಯಾಗಿರುತ್ತಾರೆ. ತಮ್ಮ ಸಾಮರ್ಥ್ಯ ಮತ್ತು ದೃಢ ಸಂಕಲ್ಪದಿಂದ ತಮ್ಮ ಗುರಿಯನ್ನು ತಲುಪುತ್ತಾರೆ.ಆದರೆ ಇವರ ಕುಟುಂಬ ಮತ್ತು ಮನರಂಜನೆಗಾಗಿ ಅಷ್ಟಾಗಿ ಪ್ರಾಮುಖ್ಯತೆ ನೀಡಲ್ಲ. ಒಂದು ವೇಳೆ ಇದು ಕಿರಿದಾಗಿದ್ದರೆ ಜೀವನವನ್ನು  ಸಂತೋಷದಿಂದ ಕಾಲ ಕಳೆಯುತ್ತಾರೆ. ಕುಟುಂಬದ ಕಡೆಗೂ ಹೆಚ್ಚು ಗಮನ ಹರಿಸುವವರಾಗಿರುತ್ತಾರೆ.

ನಾಲ್ಕನೇ ಬೆರಳು:ಈ ಬೆರಳು ಉದ್ದವಾಗಿದ್ದರೆ. ಇವರ ಮೊದಲ ಆದ್ಯತೆ ಕುಟುಂಬ. ಈ  ಬೆರಳು ತುಂಬಾ ಬಗ್ಗಿದ್ದರೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸುಖವಾಗಿ ಇರುವುದಿಲ್ಲ .ಆದರೆ ಇವರು ಏನನ್ನೇ ಆಗಲಿ ಗಮನವಿಟ್ಟು ಕೇಳುತ್ತಾರೆ. ಒಂದು ವೇಳೆ ಈ ಬೆರಳು ಕಿರಿದಾಗಿದ್ದರೆ ಇವರು ಜೀವನದಲ್ಲಿ ಕುಟುಂಬ ಹೊರತಾಗಿ ಬೇರೆ ಏನೇನೋ ಒತ್ತಡವನ್ನು ಎದುರಿಸುತ್ತಿರುತ್ತಾರೆ.ಕಿರುಬೆರಳು:ಈ ಬೆರಳು ಚಿಕ್ಕದಾಗಿದ್ದರೆ ಇವರದು ಹುಡುಗಾಟಿಕೆಯ ವ್ಯಕ್ತಿತ್ವ. ಜವಾಬ್ದಾರಿಗಳಿಂದ ತುಂಬಾ ದೂರ ಇರುತ್ತಾರೆ. ಎಲ್ಲವನ್ನೂ ಹಗುರವಾಗಿ ತೆಗೆದುಕೊಳ್ಳುವವರು.ಈ ಕಿರುಬೆರಳು ನಾಲ್ಕನೇ ಬೆರಳಿನಿಂದ ಅಂತರ ಕಾಪಾಡಿದರೆ ಸಾಕಷ್ಟು ಲಾಭಗಳಿವೆ. ಇದರಿಂದ ಹುಡುಗಾಟಿಕೆ ಎಲ್ಲವೂ ಹೋಗುತ್ತವೆ ಎನ್ನುತ್ತಾರೆ ಸಂಶ್ಲೇಷಿತವಾದಿಗಳು.ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ತಿಳಿಯದೇ ಇರುವ ಸಂಗತಿಯಾಗಿದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top