fbpx
ಸಮಾಚಾರ

IPL 2019ಕ್ಕೆ ಹೆಸರು ಬದಲಿಸಿಕೊಂಡು ಅದೃಷ್ಟ ಪರೀಕ್ಷೆಗಿಳಿದ ‘ಡೆಲ್ಲಿ’ – ಉದಯೋನ್ಮುಖ ಆಟಗಾರನಿಗೆ ನಾಯಕತ್ವ.

ಭಾರತದಲ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಆರಂಭವಾದಾಗಿನಿಂದಲೂ ಅಸ್ತಿತ್ವದಲ್ಲಿರುವ ಡೆಲ್ಲಿ ಡೇರ್​ ಡೆವಿಲ್ಸ್​ ತಂಡ ಮರು ನಾಮಕರಣಗೊಂಡಿದೆ. ಡೆಲ್ಲಿ ಡೇರ್ ಡೆವಿಲ್ಸ್ ತನ್ನ ಹೆಸರನ್ನು ಡೆಲ್ಲಿ ಕ್ಯಾಪಿಟಲ್ಸ್ ಎಂದು ಬದಲಾಯಿಸಿದೆ. ಜೆಎಸ್ ಡಬ್ಲ್ಯು ಸ್ಪೋರ್ಟ್ಸ್ ಮತ್ತು ಜಿಎಂಆರ್ ಗ್ರೂಪ್ ಮಾಲಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಘೋಷಣೆ ಮಾಡಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ನಾಯಕರಾಗಿ ಉದಯೋನ್ಮುಖ ಆಟಗಾರ ಶ್ರೇಯಸ್ ಅಯ್ಯರ್ ಆಯ್ಕೆಯಾಗಿದ್ದು, ಮೊಹಮ್ಮದ್‌ ಶಮಿ, ಜೇಸನ್‌ ರಾಯ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ ಸೇರಿ ಇತರೆ ಆಟಗಾರರನ್ನು ತಂಡ ಉಳಿಸಿಕೊಂಡಿದೆ. ಹಿಂದಿನ ಐಪಿಎಲ್‌ ಟೂರ್ನಿಯಲ್ಲಿ ಕಳಪೆ ಪ್ರದರ್ಶನದಿಂದ ಹಿಂದೆ ಉಳಿದಿರುವ ದೆಹಲಿ ಫ್ರಾಂಚೈಸಿ 2019ರಲ್ಲಿ ಉತ್ತಮ ಪ್ರಾರಂಭ ಪಡೆಯಲು ಸಜ್ಜಾಗಿದೆ.

ಸದ್ಯ ತಂಡದ ಲೋಗೋ ಕೂಡ ಬದಲಾಗಿದೆ. ಅಂತೆಯೇ ತಂಡದ ಜೆರ್ಸಿ ಕೂಡ ಬದಲಾಯಿಸುವ ಮುನ್ಸೂಚನೆ ನೀಡಿದೆ. ಇನ್ನು ಇತ್ತೀಚೆಗೆ ನಡೆದ ಐಪಿಎಲ್ 12ರ ಟೂರ್ನಿಯ ಹರಾಜು ಪ್ರಕ್ರಿಯೆಯಲ್ಲಿ ಶಿಖರ್ ಧವನ್ ರನ್ನು ಖರೀದಿ ಮಾಡಿದ್ದು ತಂಡದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.

ಡೆಲ್ಲಿ ತಂಡದ ಐಪಿಎಲ್ ಸಾಧನೆ:
2008ರಲ್ಲಿ ಐಪಿಎಲ್​ ಆರಂಭವಾದಾಗಿನಿಂದಲೂ ಡೆಲ್ಲಿ ಡೇರ್​​ ಡೆವಿಲ್ಸ್​ ತಂಡ ಕೂಟದ ಭಾಗವಾಗಿ ಆಡುತ್ತಿದೆ. ಆರಂಭದ ಎರಡು ಕೂಟಗಳಲ್ಲಿ ಸೆಮಿಫೈನಲ್​ ತಲುಪಿರುವ ಡೆಲ್ಲಿ ತಂಡ, ಒಂದು ಬಾರಿ ಮಾತ್ರ ಪ್ಲೇಆಫ್ ತಲುಪಿತ್ತು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top