fbpx
ಸಮಾಚಾರ

ಪೋಷಕರೇ ಹುಷಾರ್ ! ‘ಪಬ್ ಜಿ’ ಎಂಬ ಡೆಡ್ಲಿ ಗೇಮ್ ನಿಂದ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ ಮಕ್ಕಳು

ಕೆಲ ದಿನಗಳ ಹಿಂದೆ ಬ್ಲೂ ವೆಲ್ ಗೇಮ್ ಜಗತ್ತಿನಾದ್ಯಂತ ಪ್ರಸಿದ್ದಿಯಾಗಿ ಅನೇಕ ಮಕ್ಕಳನ್ನು ಮತ್ತು ಯುವಕರನ್ನು ಬಲಿ ಪಡೆದಿತ್ತು. ಇದೀಗ ಮತ್ತೊಂದು ಡೆಡ್ಲಿ ಗೇಮ್ ಬಂದಿದ್ದು, ಈ ಗೇಮ್ ಗೆ ಅಡಿಕ್ಟ್ ಆದ ಹಲವು ಮಕ್ಕಳು ಮತ್ತು ಯುವಕರು ಮಾನಸಿಕ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಬ್ಲೂವೆಲ್ ನಷ್ಟೇ ಮಾರಕವಾದ ಈ ಗೇಮ್ ಯಾವುದೆಂದರೆ ಅದು ‘ಪಬ್ ಜಿ'((Player Unknown’s Battle Ground-PUBG)

ಹಾಗಾದರೆ ಏನಿದು ಪಬ್ ಜಿ ಗೇಮ್?

ಪಬ್ ಜಿ ಎನ್ನುವುದು ಒಂದು ಬ್ಯಾಟಲ್ ಫೀಲ್ಡ್ ಗೇಮ್ (ಯುದ್ಧ ಭೂಮಿ ಆಟ). ಈ ಆಟದ ಸಂಪೂರ್ಣ ಭೂಪಟವನ್ನು ಆಟಗಾರಿಗೆ ಮೊದಲು ತೋರಿಸಲಾಗುತ್ತದೆ. ಬಳಿಕ ಆಟಗಾರರು ತಮಗೆ ಬೇಕಾದ ಪ್ರದೇಶವನ್ನು ಆಯ್ದುಕೊಂದು ಆ ಪ್ರದೇಶಕ್ಕೆ ವಿವಾನದಿಂದ ಕೆಳಗೆ ಹಾರಿ ಮನೆಗಳತ್ತ ಓಡ್ತಾರೆ. ಆಟಗಾರರಿದ್ದ ಪ್ರದೇಶದಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳನ್ನು, ಮೆಡಿಕಲ್ ಕಿಟ್‍ಗಳನ್ನು, ಯುದ್ಧಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಆಯ್ದುಕೊಂಡು ಮುಂದೆ ಸಾಗುತ್ತಾರೆ. ಆಟಗಾರರು ಇಳಿದ ಪ್ರದೇಶದ ಸುತ್ತ ವೃತ್ತವೊಂದು ಸಿಗುತ್ತದೆ. ಆಗ ಅಲ್ಲಿದ್ದ ನೂರಾರು ಜನರ ಜೊತೆ ಹೋರಾಡಿ ಉಳಿದರೇ ಗೆದ್ದಂತೆ, ಮೃತಪಟ್ಟರೆ ಸೋತಂತೆ. ಈ ಆಟದ ವಿಶೇಷ
ಏನೆಂದರೆ ಇದನ್ನು ಸ್ನೇಹಿತರೊಂದಿಗೆ ಕೂಡಿ ಆಡಬಹುದಾಗಿದೆ.

ಆದರೆ. ಇತ್ತೀಚಿಗೆ ಪಬ್ ಜಿ ಗೇಮ್ ನಲ್ಲಿ ಸಾವಿರಾರು ಜನರು ಮುಳುಗಿ ಹೋಗಿದ್ದು .ಅದರಲ್ಲೂ ಯುವ ಪೀಳಿಗೆ ಪಬ್ ಜಿ ಗೇಮ್‍ ನಿಂದಾಗಿ ಲೋಕವನ್ನೇ ಮರೆತಿದ್ದಾರೆ. ಇದರಿಂದಾಗಿ ಪೋಷಕರಿಗೆ ಈ ಆಟ ಭಾರಿ ತಲೆ ನೋವಾಗಿ ಪರಿಣಮಿಸಿದೆ.

8 ತಿಂಗಳ ಹಿಂದಷ್ಟೇ ಭಾರತಕ್ಕೆ ಬಂದಿರುವ ಪಬ್‌ಜಿ ಗೇಮ್ ವಿಪರ್ಯಾಸವೆಂಬಂತೆ ಇದೀಗ ನಮ್ಮ ಬೆಂಗಳೂರಿಗೂ ಕಾಲಿಟ್ಟಿದ್ದು. ಇದರ ಕ್ರೇಜ್ ನಮ್ಮ ಬೆಂಗಳೂರಿನಲ್ಲಿ ಎಷ್ಟರ ಮಟ್ಟಿಗೆ ಇದೆ ಎಂದರೆ ನಾವು ಎಲ್ಲಿ ನೋಡಿದರೂ ‘ಪಬ್ ಜಿ’ ಆಡುವ ಆಟಗಾರರೇ ಕಾಣಸಿಗುತ್ತಾರೆ. ಈ ಗೇಮ್ ಗೆ ಆಟಗಾರರು ಎಷ್ಟರ ಮಟ್ಟಿಗೆ ಆಡಿಕ್ಟ್ ಆಗಿರುತ್ತಾರೆಂದರೆ ಪಬ್ ಜಿ ಗೇಮ್ ಬಿಟ್ಟರೆ ಪ್ರಪಂಚದಲ್ಲಿ ಏನೂ ಇಲ್ಲ ಎಂದು ವರ್ತಿಸುತ್ತಾರೆ ಹಾಗೂ ತಮ್ಮನ್ನು ತಾವು ಅವರು ಸೈನಿಕರು ಎಂದು ಕರೆದುಕೊಳ್ಳುತ್ತಾರೆ ಅಥವಾ ಆ ಭ್ರಮ ಲೋಕದಲ್ಲಿ ಇರುತ್ತಾರೆ. ಪಬ್ ಜಿ ಗೇಮ್ ನಿಂದಾಗಿ ಇಷ್ಟು ಮಾನಸಿಕ ಸಮಸ್ಯೆಗಳು ಎದುರಾಗುತ್ತಿದ್ದರು ದಿನದಿಂದಕ್ಕೆ ಅದನ್ನು ಆಡುವವರ ಸಂಖ್ಯೆ ಮಾತ್ರ ಜಾಸ್ತಿ ಆಗುತ್ತಲೇ ಇದೆ.

ಇದಕ್ಕೆ ಪೂರಕವಾಗಿ ಪ್ರತಿ ತಿಂಗಳು ನಿಮ್ಹಾನ್ಸ್ ಆಸ್ಪತ್ರೆಗೆ ಪಬ್ ಜಿ ಗೇಮ್‍ನಿಂದ ಮಾನಸಿಕ ಖಿನ್ನತೆಗೆ ಒಳಗಾದ ಸುಮಾರು 40 ಕೇಸ್‍ಗಳು ದಾಖಲಾಗುತ್ತಿದೆಯಂತೆ ಹಾಗೂ ಇಲ್ಲಿಯವರೆಗೆ ಪಬ್ ಜಿ ಗೇಮ್ ಗೆ ಸಂಬಂಧಿಸಿದಂತೆ ಸುಮಾರು 120 ಮಾನಸಿಕ ಮಾನಸಿಕ ಆರೋಗ್ಯ ಪರಿಸ್ಥಿತಿ ಗೆ ಸಂಬಂಧ ಪಟ್ಟ ನೂರಾರು ಕೇಸ್‍ಗಳು ನಿಮ್ಹಾನ್ಸ್‍ನಲ್ಲಿ ದಾಖಲಾಗಿದೆ ಎಂಬ ಸುದ್ದಿಗಳು ಕೇಳಿ ಬರುತ್ತಿದೆ.

ಈ ಆಟದ ಬಗ್ಗೆ ಮಾತನಾಡಿದ ಮನೋಶಾಸ್ರ್ತಜ್ಞ ಶ್ರೀಧರ್ “ಡೆಡ್ಲಿ ಗೇಮ್ ನಿಂದ ಯುವ ಸಮೂಹ ಹೆಚ್ಚಾಗಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದೆ. ಈ ಆಟದಿಂದ ಸಾಕಷ್ಟು ಜನರ ಜೀವನ ಹಾಳಾಗುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ಯುವಕರವರೆಗೂ ಪಬ್ ಜಿ ಗೇಮ್ ಪ್ರಭಾವ ಬೀರುತ್ತಿದೆ. ಇದರಿಂದ ಹೆಚ್ಚಾಗಿ ವಿದ್ಯಾರ್ಥಿಗಳು ಮನಸಿಕ ಸಮಸ್ಯೆಗೆ ಒಳಗಾಗುತ್ತಿದ್ದಾರೆ”ಎಂಬ ಕಳವಳವ ಹೊರ ಹಾಕಿದ್ದಾರೆ.

ಹೌದು, ಈ ರೀತಿಯಾ ಡೆಡ್ಲಿ ಗೇಮ್ ಗಳು ನಮ್ಮ ಯುವಪೀಳಿಗೆಯನ್ನು ಆಕರ್ಷಿಸುತ್ತಿದ್ದು , ಈ ನಿಟ್ಟಿನಲ್ಲಿ ಪೋಷಕರು ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ಗೇಮ್ ನಿಂದ ಮಕ್ಕಳಲ್ಲಿ ಆಗುವ ಬದಲಾಣೆಗಳೇನು :

ಮಕ್ಕಳಲ್ಲಿ ನಿದ್ರಾಹೀನತೆ ಆವರಿಸುವುದು

ಶಾಲೆ, ಕಾಲೇಜ್‌ಗೆ ಚಕ್ಕರ್‌ ಹೊಡೆಯಲು ಏನಾದರು ಕುಂಟು ನೆಪ ಹೇಳುವುದು

ಮಕ್ಕಳ ನಡವಳಿಕೆಯಲ್ಲಿ ವ್ಯತ್ಯಾಸ ಉಂಟಾಗುವುದು

ಮಾನಸಿಕ ಖಿನ್ನತೆ ಯಿಂದ ಬಳಲುವುದು.

ಈ ಡೆಡ್ಲಿ ಗೇಮ್ ನಿಂದ ಮಕ್ಕಳನ್ನು ಹೊರತರಲು ಪ್ರೇಕ್ಷಕರು ಸದಾ ಅವರ ಮೇಲೆ ಕಣ್ಣಿಟ್ಟಿರಬೇಕು, ಮಕ್ಕಳ ನಡವಳಿಕೆಯಲ್ಲಿ ಚೂರು ವ್ಯತ್ಯಾಸ ಕಂಡು ಬಂದರು ಅದನ್ನು ಗಮನಿಸಬೇಕು ಹಾಗೂ ಅವರ ಗೇಮಿಂಗ್ ಮೇಲೆ ನಿಗಾ ಇಡಬೇಕು ಮತ್ತು ಮಕ್ಕಳ್ಲ  ನಡವಳಿಕೆಯಲ್ಲಿ ಏನಾದರು ವ್ಯತ್ಯಯ ಕಂಡು ಬಂದರೆ ತಜ್ಞರಿಂದ ಕೌನ್ಸೆಲಿಂಗ್‌ ಮಾಡಿಸಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top