ಸಮಾಚಾರ

ಯೂಟ್ಯೂಬ್ ಸ್ಟಾರ್ ಅತ್ಯಂತ ಹಿರಿಯ ಪಾಕ ಪ್ರವೀಣೆ ಮಸ್ತಾನಮ್ಮ ನಿಧನ.

ಅಪ್ಪಟ ನಾಟಿ ಶೈಲಿಯ ಅಡುಗೆಗಳನ್ನು ಮಾಡುತ್ತ ಯೂಟ್ಯೂಬ್‌ ವಿಡಿಯೊಗಳ ಮೂಲಕ ಲಕ್ಷಾಂತರ ಖಾದ್ಯಪ್ರಿಯರ ಮನಗೆದ್ದಿದ್ದ 107 ವರ್ಷದ ಕಾರೆ ಮಸ್ತಾನಮ್ಮ ಬುಧವಾರ ಆಂಧ್ರ ಪ್ರದೇಶದ ಗುಂಟೂರು ಗ್ರಾಮದಲ್ಲಿ ನಿಧನ ಹೊಂದಿದ್ದಾರೆ. ಕೇವಲ 2 ವರ್ಷದಲ್ಲಿ ದೇಶದ ಅತಿ ಹಿರಿಯ ಯೂಟ್ಯೂಬ್‌ ಸ್ಟಾರ್‌ ಎನಿಸಿಕೊಂಡಿದ್ದರು. ಯೂಟ್ಯೂಬ್‌ನಲ್ಲಿ ‘ಮಾಸ್ತಾನಮ್ಮ ಚಾನೆಲ್‌’ ಕೇವಲ ಎರಡು ವರ್ಷದಲ್ಲಿ 12 ಲಕ್ಷ ಜನ ಚಂದಾದಾರರನ್ನು ಹೊಂದಿದೆ.

ದೇಶದ ಅತಿ ಹಿರಿಯ ಯೂಟ್ಯೂಬ್‌ ಸ್ಟಾರ್‌ ಎನಿಸಿಕೊಂಡಿದ್ದರು. ಇವರ ವಿಡಿಯೊಗಳು ಮಾಂಸ ಪ್ರಿಯರಿಗೆ ಭಾರಿ ಮೋಡಿ ಮಾಡಿದ್ದವು. ತಮ್ಮ ಹಳ್ಳಿ ಸೊಡಗಿನ ಅಡುಗೆ ಶೈಲಿಯಿಂದಲೇ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದ ಮಸ್ತಾನಮ್ಮ ನಿಧನರಾದ ಸುದ್ದಿ ಕೇಳಿ ವಿಶ್ವದಾದ್ಯಂತ ಅಜ್ಜಿಯ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

11ನೇ ವರ್ಷದಲ್ಲಿ ಮದುವೆಯಾಗಿ, 22ನೇ ವರ್ಷದಲ್ಲಿ ವಿಧವೆಯಾದರು. ಇಷ್ಟೊಂದು ನೋವಿನಲ್ಲೂ ಎದೆಗುಂದದೇ ದಿನಗೂಲಿ ಕಾರ್ಮಿಕರಾಗಿ ಜೀವನ ನಡೆಸಿದರು. ತನ್ನ ಮೊಮ್ಮಗ ಲಕ್ಷ್ಮಣ ಮತ್ತು ಅವರ ಗೆಳೆಯರ ಸಹಾಯದಿಂದ, ಮಸ್ತಾನಮ್ಮ ಅಡುಗೆಯ ವಿಡಿಯೋಗಳನ್ನು ಪ್ರತಿ ವಾರ ಬಿಡುಗಡೆ ಮಾಡುತ್ತಲೇ ಇದ್ದರು, ಆ ಮೂಲಕ ಜಗತ್ತಿನ ಅತಿ ಹಿರಿಯ ಯುಟ್ಯೂಬ್ ತಾರೆಯಾಗಿ ಹೊರಹೊಮ್ಮಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top