fbpx
ಸಮಾಚಾರ

ಭಾರತದ ಟಾಪ್ 100 ಸೆಲೆಬ್ರಿಟಿಗಳ ಫೋರ್ಬ್ಸ್ ಪಟ್ಟಿ ಬಿಡುಗಡೆ: ಈ ಬಾರಿಯೂ ಸಲ್ಮಾನ್ ಖಾನ್ ನಂ.1, ಯಾರ‍್ಯಾರು ಯಾವ ಸ್ಥಾನದಲ್ಲಿದ್ದಾರೆ ನೋಡಿ

ಮನರಂಜನೆಗೆ ಸಂಬಂಧಿಸಿದ ಸೆಲೆಬ್ರಿಟಿಗಳ ವರ್ಷದ ಆದಾಯದ ಮೇರೆಗೆ ಫೋರ್ಬ್ಸ್‌ ಪ್ರತಿ ವರ್ಷ ಈ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಅದರಂತೆ 2018ನೇ ಸಾಲಿನ ಭಾರತೀಯ​ ಸೆಲೆಬ್ರಿಟಿ ಪಟ್ಟಿಯನ್ನು ಫೋರ್ಬ್ಸ್ ಇಂದು ಬಿಡುಗಡೆ ಮಾಡಿದ್ದು ಸತತ ಮೂರನೇ ಬಾರಿ ಸಲ್ಮಾನ್​ ಖಾನ್​ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಪೋರ್ಬ್ಸ್ ಪಟ್ಟಿಯಲ್ಲಿರುವ 100 ಭಾರತೀಯ ಗಣ್ಯರ ಪೈಕಿ ಸಲ್ಮಾನ್ ಖಾನ್ ಸಿನಿಮಾ, ಉತ್ಪನ್ನಗಳ ಜಾಹೀರಾತು ಮೊದಲಾದವುಗಳಿಂದ ಒಟ್ಟು 253 ಕೋಟಿ ರು ಆದಾಯ ಗಳಿಸಿದ್ದು ಆ ಮೂಲಕ ಸಲ್ಮಾನ್ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ. ವಿರಾಟ್​ ಕೊಹ್ಲಿ (228 ಕೋಟಿ.ರೂ) ಎರಡನೇ ಸ್ಥಾನ ಹಾಗೂ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ (185 ಕೋಟಿ ರೂ.) ಮೂರನೇ ಸ್ಥಾನದಲ್ಲಿದ್ದಾರೆ. ಅಚ್ಚರಿ ಎಂದರೆ ಕಳೆದ ವರ್ಷ ಎರಡನೇ ಸ್ಥಾನದಲ್ಲಿದ್ದ ಶಾರುಖ್​ ಖಾನ್​ ಈ ಬಾರಿ 13ನೇ ಸ್ಥಾನಕ್ಕೆ ಕುಸಿದಿದ್ದಾರೆ. ಏಕೆಂದರೆ, ಈ ಅವಧಿಯಲ್ಲಿ ಅವರ ಯಾವ ಸಿನಿಮಾ ಕೂಡ ತೆರೆಕಂಡಿಲ್ಲ.

ಇತ್ತೀಚೆಗಷ್ಟೇ ವಿವಾಹವಾದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ 112.8 ಕೋಟಿ ರೂ. ಆದಾಯ ಗಳಿಸಿಕೊಳ್ಳುವ ಮೂಲಕ 4ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಐದನೇ ಸ್ಥಾನದಲ್ಲಿ ಎಂ.ಎಸ್​.ಧೋನಿ, ಆರನೇ ಸ್ಥಾನದಲ್ಲಿ ಬಾಲಿವುಡ್​ ನಟ ಅಮೀರ್​ ಖಾನ್​, ಏಳನೇ ಸ್ಥಾನದಲ್ಲಿ ಅಮಿತಾಭ್​ ಬಚ್ಚನ್​, ಎಂಟನೇ ಸ್ಥಾನದಲ್ಲಿ ರಣವೀರ್​ ಸಿಂಗ್​, ಒಂಭತ್ತನೇ ಸ್ಥಾನದಲ್ಲಿ ಸಚಿನ್​ ತೆಂಡೂಲ್ಕರ್​, ಹತ್ತನೇ ಸ್ಥಾನದಲ್ಲಿ ಅಜಯ್​ ದೇವಗನ್​ ಇದ್ದಾರೆ.. ಉಳಿದಂತೆ ಟಾಪ್ 100ರಲ್ಲಿ ಎ.ಆರ್​. ರೆಹ್ಮಾನ್​, ಆಲಿಯಾ ಭಟ್​, ರಜನಿಕಾಂತ್​ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಯಾವುದೇ ಕನ್ನಡಿಗರು ಸ್ಥಾನ ಪಡೆದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top