ಸಮಾಚಾರ

“ನಟ ಚೇತನ್ ರನ್ನು ಕರ್ನಾಟಕದಿಂದ ಓಡಿಸುತ್ತೇನೆ” ಎಂದ ಯುವ ನಿರ್ದೇಶಕ.

ಈ ಹಿಂದೆ ಹುಚ್ಚಾ ವೆಂಕಟ ತನ್ನ ಸಿನಿಮಾದಲ್ಲಿ ನಟಿಸೋದಾಗಿ ದುಡ್ಡು ಪಡೆದು ಯಾಮಾರಿಸಿದ್ದಾನೆ ಅಂತ ಲಬೋ ಅಂದಿದ್ದ ಯುವ ನಿರ್ದೇಶಕ(?) ಇತ್ತೀಚಿಗಷ್ಟೇ ಕಿರಿಕ್ ಹುಡುಗಿ ಸಂಯುಕ್ತಳನ್ನು ನೀಲಿತಾರೆ ಸನ್ನಿಲಿಯೊನಿಗೆ ಹೋಲಿಸಿ ವಿವಾದವೆಬ್ಬಿಸಿ ಸುದ್ದಿಯಾಗಿದ್ದನು.. “ಸಂಯುಕ್ತ ಹೆಗ್ಡೆ ಕನ್ನಡದ ಸನ್ನಿಲಿಯೋನ್ ಇದ್ದಂತೆ ಆಕೆ ಹೀಗೆ ಹಾಗೆ” ಅಂತೆಲ್ಲಾ ಅಬ್ಬರಿಸಿ ಕೊನೆಗೆ ಸಾರಿ ಕೇಳಿದ್ದ ಕೀರ್ತನ್ ಇದೀಗ ಮತ್ತೊಮ್ಮೆ ಪ್ರತ್ಯಕ್ಷನಾಗಿದ್ದಾನೆ.

ತಾನು ನಿರ್ದೇಶಕ, ಅದ್ಯಾವುದೋ ಮೀಟೂ ಅಭಿಯಾನದ ಕುರಿತು ಸಿನಿಮಾ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿರೋ ಕೀರ್ತನ್ ಈಗ ಅದೇ ಮೇಟೂ ವಿಚಾರದಲ್ಲಿ ಸುದ್ದಿಯಾಗಿದ್ದ ನಟ ಚೇತನ್ ಅವರ ವಿರುದ್ಧ ಫೇಸ್ಬುಕ್ ನಲ್ಲಿ ನೇರಾನೇರವಾಗಿಯೇ ಬರೆದುಕೊಂಡಿದ್ದಾನೆ. “ಬಿರುಗಾಳಿಯ ಆ ದಿನಗಳು ಚೇತನ್ #ಕನಾ೯ಟಕ ಬಿಟ್ಟು ಅಮೆರಿಕಕ್ಕೆ ಹೋಗಬೇಕು ಹೋಗಿಲ್ಲ ಅಂದ್ರೇ ನಾನೇ ಓಡಿಸ್ತಿನಿ” ಎಂದು ಪೋಸ್ಟ್ ಮಾಡಿದ್ದಾನೆ.

 


 

ಫೇಸ್ಬುಕ್ ಪೋಸ್ಟ್ ನಲ್ಲಿರುವುದು ಇಷ್ಟು:
ಹಾಯ್ ಸ್ನೇಹಿತರೇ ಹೆಂಗಿದೆ ನನ್ನ ನಿದೇ೯ಶನದ #ಮೀಟೂwithಪೈಟೂ ಚಿತ್ರದ ಪೋಸ್ಟರ್ ಒಂಥರಾ #Different ಆಗಿದೆ ಅಲ್ವಾ ಮತ್ತೇ ನಾವ್ ಅಂದ್ರೇ ಕಮ್ಮಿನಾ HaHaHa ಈ ಪೋಸ್ಟರ್ ರನ್ನು ಕನ್ನಡ ಚಿತ್ರರಂಗದ ಖ್ಯಾತ ದೊಡ್ಡ ನಟರಿಂದ ಬಿಡುಗಡೆ ಮಾಡಬೇಕೆಂದು ಇತ್ತು ಆದರೆ ಅವರ ಕೆಲಸದ ಒತ್ತಡ ಮತ್ತು ನಾನು ಬೇರೆ ಊರಿನಲ್ಲಿರುವ ಕಾರಣ ನಾವೇ ಬಿಡುಗಡೆ ಮಾಡಿದ್ದೀವಿ…ದಯವಿಟ್ಟು ನಮ್ಮ ಚಿತ್ರದಲ್ಲಿ ಯಾವ ವ್ಯಕ್ತಿಗೂ #ಧಕ್ಕೆ ತರುವ ಹಾಗೆ ಇಲ್ಲ ಯಾರನ್ನು ಕೆಟ್ಟದಾಗಿ ತೋರಿಸಲ್ಲ…ನಾನು ಯಾವತ್ತಿದ್ರೂ #ಗಂಡಸರ ಪರ ಆದರೆ ನಮ್ಮ ಚಿತ್ರ #Controversy ಆಗುತ್ತೇ ಆದರೆ ಅದು ನಮ್ಮ ಚಿತ್ರರಂಗದ ಯಾವುದೇ ಗಂಡಸರಿಗೂ ಸಂಬಂಧ ಪಟ್ಟದಲ್ಲ ನಮ್ಮ ಚಿತ್ರ ನಾಯಕಿಯರ ಪ್ರಧಾನವಾಗಿದ್ದು…ಕೆಲವು ಧಿಮಾಕು ನಟಿಯರಿಂದ ಚಿತ್ರರಂಗ ಹಾಳಗುತ್ತಿದೆ ಕೆಲವು ನಟಿಯರು #MeToo ವನ್ನು ದುರುಪಯೋಗಪಡಿಸಿಕೊಂಡು ಗಣ್ಯರ ಹೆಸರಿನ ಜೊತೆ ಆಟವಾಡುತ್ತಿದ್ದರೆ…ಅಂತವರು ನಮ್ಮ ಚಿತ್ರವನ್ನು ನೋಡಿ ಆದರು ಬುದ್ಧಿ ಕಲಿತರ ನೋಡಬೇಕು ಅಷ್ಟೇ…ನಮ್ಮ ಚಿತ್ರ ನೋಡಿಯದಾರೂ ತನ್ನ ತಪ್ಪು ಒಪ್ಪಿಕೊಳ್ಳುತ್ತಾರ ನೋಡಬೇಕು…ಆದರೆ ಇನ್ನೊಂದು ನನ್ ಒಳ್ಳೆ ಚಿತ್ರ ಮಾಡಿಲ್ಲ ಅಂದ್ರೇ ಹುಡುಕೊಂಡ್ ಬಂದು ಹೊಡಿರಿ 😂😂😂 🎬🎥👒👓🎤😙😍❤

“ಬಿರುಗಾಳಿಯ ಆ ದಿನಗಳು ಚೇತನ್ #ಕನಾ೯ಟಕ ಬಿಟ್ಟು ಅಮೆರಿಕಕ್ಕೆ ಹೋಗಬೇಕು ಹೋಗಿಲ್ಲ ಅಂದ್ರೇ ನಾನೇ ಓಡಿಸ್ತಿನಿ” 💪💪💪👊

ಕನ್ನಡ ಸಿನಿಮಾ ಮತ್ತು ಭಾಷೆಯನ್ನು ಉಳಿಸಿ ಬೆಳೆಸಿ…ಪೋಸ್ಟರ್ ಚೆನ್ನಾಗಿದ್ರೇ Share And Support ಮಾಡಿ

ಈ ಪೋಸ್ಟ್ ನೋಡಿರುವ ಅನೇಕರು ತಮ್ಮ ಸಿನಿಮಾ ಪ್ರಚಾರಕ್ಕಾಗಿ ಮಾಡಿರುವ ಈ ರೀತಿ ಪೋಸ್ಟ್ ಮಾಡಿ ಸುದಿಯಾಗುವ ರೂಟನ್ನು ಕೀರ್ತನ್ ಹಿಡಿದಿರಬಹುದು ಎಂದು ಹೇಳುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top