ಮನೋರಂಜನೆ

ಒಂದೇ ವಾರದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ರಜಿನಿಯ 2.0- ವಾರದ ಗಳಿಕೆ ಎಷ್ಟು ಗೊತ್ತಾ?

3ಡಿ ಯಲ್ಲಿ ನಿರ್ಮಾಣಗೊಂಡ ಮತ್ತು ವಿಶ್ವಾದ್ಯಂತ 1,500 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ತೆರೆಕಂಡ ಮೊತ್ತ ಮೊದಲ ಭಾರತೀಯ ಚಿತ್ರವಾದ 2 .೦ ಸಿನಿಮಾ ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ಹಾಗು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯಿಸಿರುವ ಈ ಸಿನಿಮಾಗೆ ಶಂಕರ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಇದೀಗ 2 .0 ಚಿತ್ರ ಬಾಕ್ಸ್ ಆಫೀಸ್ ನ್ನು ಕೊಳ್ಳೆ ಹೊಡೆಯುತ್ತಿದ್ದು ಬಿಡುಗಡೆಯಾದ ಈ ಸಿನಿಮಾ ಒಂದೇ ವಾರದಲ್ಲೇ 500 ಕೋಟಿ ಕ್ಲಬ್ ಸೇರಿರುವುದು ವಿಶೇಷ.

ಈಗಾಗಲೇ ಬಾಹುಬಲಿ (ಮೊದಲನೇ ಭಾಗ) ಚಲನಚಿತ್ರ ತನ್ನ ಇಡೀ ಪ್ರದರ್ಶನದಲ್ಲಿ ಗಳಿಸಿದಷ್ಟನ್ನು ಒಂದೇ ವಾರದಲ್ಲಿ ಸಂಪಾದಿಸಿ ಬಾಹುಬಲಿ ದಾಖಲೆ ಮುರಿದಿರುವ 2 .0 ಚಿತ್ರ ಇನ್ನಷ್ಟು ದಾಖಲೆಗಳನ್ನು ಪುಡಿ ಮಾಡುವ ಭರದಲ್ಲಿ ಮುನ್ನುಗುತ್ತಿದೆ. ಪ್ರಪಂಚಾದ್ಯಂತ ಇರುವ ಪ್ರೇಕ್ಷಕರ ಮನಸೂರೆಗೊಂಡಿರುವ ಈ ಚಿತ್ರ ಜನರಿಂದ ಚಪ್ಪಾಳೆಯನ್ನು ಗಿಟ್ಟಿಸಿದೆ.

ದಂಗಲ್​, ಟೈಗರ್​ ಜಿಂದಾ ಹೈ, ಪದ್ಮಾವತ್​, ಸಂಜು, ಸುಲ್ತಾನ್​ ಸಿನಿಮಾಗಳು ವಿಶ್ವದಾದ್ಯಂತ ಪ್ರದರ್ಶನಗೊಂಡು ಗಳಿಸಿದ್ದ ಮೊತ್ತವನ್ನೂ 2.0 ಚಿತ್ರ ಮೀರಿಸಲಿದೆ ಎಂದು ತಿಳಿದು ಬಂದಿದ್ದು , ಈಗಾಗಲೇ 2.0 ಸದ್ಯ ಭಾರತದಲ್ಲಿ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಚಿತ್ರಗಳ ಪಟ್ಟಿಯಲ್ಲಿ 12 ನೇ ಸ್ಥಾನ ಪಡೆದುಕೊಂಡಿದೆ.

2 .0 ಸಿನಿಮಾಯಾದ ಗಳಿಕೆಯ ಬಗ್ಗೆ ಟ್ವೀಟ್ ಮಾಡಿರುವ ವಿಶ್ಲೇಷಕ ರಮೇಶ್​ ಬಾಲಾ ‘2.0 ಸಿನಿಮಾ ಮೊದಲವಾರದಲ್ಲೇ 500 ಕೋಟಿ ರೂಪಾಯಿ ಗಳಿಕೆ ಮಾಡಿದೆ’ ಎಂದಿದ್ದಾರೆ.

 

 

ಹಾಗೂ ಕರಣ್ ಜೋಹರ್ ಸಹ ಚಿತ್ರದ ದಾಖಲೆ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top