ಸಮಾಚಾರ

ಇಂದು ಬೆಳಗ್ಗೆ ನಿಧನರಾದ ಬಿಬಿಎಂಪಿ ಪಕ್ಷೇತರ ಸದಸ್ಯ ಏಳುಮಲೈ

ಕಳೆದ 28 ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಬಿಬಿಎಂಪಿ ಕಾರ್ಪೊರೇಟರ್ ಏಳುಮಲೈ ರವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಇಂದು ಬೆಳಗ್ಗೆ ಏಳುಮಲೈ(40) ರವರು ನಿಧನರಾಗಿದ್ದಾರೆ.

ಸಗಾಯಪುರ ವಾರ್ಡ್‌ನ ಪಕ್ಷೇತರ ಕಾರ್ಪೊರೇಟರ್ ಆಗಿದ್ದ ಏಳುಮಲೈ ರವರು ಸಗಾಯಪುರಂ ವಾರ್ಡ್‌ (ನಂ.60)ರ ಪಕ್ಷೇತರ ಬಿಬಿಎಂಪಿ ಸದ್ಯಸರಾಗಿದ್ದರು.

ಮೂಗಿನ ಮೇಲೆ ಗುಳ್ಳೆ ಆಗಿದೆ ಎಂಬ ಕಾರಣಕ್ಕಾಗಿ ಏಳುಮಲೈ ರವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೆಂದು ತಿಳಿದು ಬಂದಿದೆ.

ಚಿಕಿತ್ಸೆ ನೀಡುವಾಗ ವೈದ್ಯರು ಹೈ ಡೋಸ್ ಅನಸ್ತೇಷಿಯಾ ನೀಡಿದ್ದರಿಂದ ಏಳುಮಲೈ ರವರು ಕೋಮಾ ಸ್ಥಿತಿಗೆ ತಲುಪಿದ್ದರು ಎಂಬ ಆರೋಪ ಕೇಳಿ ಇತ್ತೀಚಿಗೆ ಕೇಳಿ ಬರುತಿತ್ತು. ಹಾಗೂ ಇದರ ನಿಟ್ಟಿನಲ್ಲಿ ಅವರಿಗೆ ಸಮರ್ಪಕವಾದ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಈ ಸಮಯದಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಏಳುಮಲೈ ರವರ ಆರೋಗ್ಯ ವಿಚಾರಿಸಲು ಸಚಿವ ಜಮೀರ್ ಅಹಮದ್ ಸೇರಿದಂತೆ ಹಲವಾರು ಸಚಿವರು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು.ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ವಿಧಿಯ ಆಟಕ್ಕೆ ಸೋತ ಏಳುಮಲೈ ರವರು ಇಂದು ಮುಂಜಾನೆ ಅಸುನೀಗಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top