ಸಮಾಚಾರ

ನಾಟಿ ಹಾಕಿದ್ದ ಭತ್ತದ ಗದ್ದೆ ಕೊಯ್ಲು ಮಾಡಲು ಪಾಂಡವಪುರ ತಾಲೂಕಿನ ಸೀತಾಪುರ-ಅರಳಕುಪ್ಪೆ ಗ್ರಾಮಕ್ಕೆ ಆಗಮಿಸಲಿದ್ದಾರೆ ಸಿಎಂ ಕುಮಾರಸ್ವಾಮಿ

ಕಳೆದ ಆಗಸ್ಟ್‌ 11 ರಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರವರು ಪಾಂಡವಪುರ ತಾಲೂಕಿನ ಸೀತಾಪುರ-ಅರಳಕುಪ್ಪೆ ಗ್ರಾಮದ ಹಳೇಗದ್ದೆ ಬಯಲು ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತದ ಬೆಳೆ ಇದೀಗ ಕಟಾವಿಗೆ ಬಂದಿದ್ದು, ಭತ್ತದ ಕೊಯ್ಲು ಮಾಡಲು ಮತ್ತೆ ಕುಮಾರಸ್ವಾಮಿ ರವರು ಡಿ.7ರಂದು ಹಳೇಗದ್ದೆ ಬಯಲು ಪ್ರದೇಶಕ್ಕೆ ಭೇಟಿ ನೀಡಿ ತಾವು ನಾಟಿ ಮಾಡಿದ್ದ ಭತ್ತವನ್ನು ಕಟಾವು ಮಾಡಿ, ಬಳಿಕ ಪಕ್ಕದ ಜಮೀನಿನಲ್ಲಿಯೇ ಭತ್ತವನ್ನು ಯಂತ್ರದ ಮೂಲಕ ಒಕ್ಕಣೆ ಮಾಡಿ ಭತ್ತದ ರಾಶಿಗೆ ಪೂಜೆ ಸಲ್ಲಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮುಖ್ಯಮಂತ್ರಿ ಕುಮಾರಸ್ವಾಮಿಯವರ ಈ ಕಾರ್ಯಕ್ಕೆ ಎಲ್ಲಡೆಯಿಂದ ಪ್ರಶಂಸೆ ದೊರೆತಿದ್ದು. ಸಿಎಂ ಕಟಾವು ಮಾಡಲು ಸಹ ಬರುತ್ತಿದ್ದಾರೆ ಎಂದು ತಿಳಿದ ಅಲ್ಲಿನ ರೈತರು ದಿಲ್ ಖುಷ್ ಆಗಿದ್ದಾರೆ. ಇನ್ನೂ ಮುಖ್ಯ ಮಂತ್ರಿಗಳಿಗೆ ಭದ್ರತೆಯನ್ನು ಒದಗಿಸುವ ಸಲುವಾಗಿ ಪೊಲೀಸ್‌ ಇಲಾಖೆಯವರು ಜಮೀನಿನ ಸುತ್ತಮುತ್ತ ಬ್ಯಾರಿಕೇಡ್‌ಗಳನ್ನು ಹಾಕುತ್ತಿದ್ದಾರೆ ಹಾಗೂ ಭತ್ತ ಕಟಾವು ಮಾಡುವ ಜಮೀನಿನ ಸ್ಥಳಕ್ಕೆ ಜಿಲ್ಲಾಧಿಕಾರಿ ಮಂಜುಶ್ರೀ, ಎಸ್‌ಪಿ ಶಿವಪ್ರಕಾಶ್‌ ದೇವರಾಜು ಪಾಟೀಲ್‌, ಡಿವೈಎಸ್‌ಪಿ ಯೋಗೇಂದ್ರನಾಥ್‌, ಸಿಪಿಐ ರವೀಂದ್ರ, ದೀಪಕ್‌ ಸೇರಿದಂತೆ ಹಲವು ಪೊಲೀಸ್‌ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಡಿ.7ರಂದು ಕುಮಾರಸ್ವಾಮಿ ಕೆಆರ್‌ಎಸ್‌ ಮೂಲಕ ಸಂಜೆ 4ಕ್ಕೆ ಸೀತಾಪುರ-ಅರಳಕುಪ್ಪೆ ಹಳೇ ಗದ್ದೆ ಬಯಲಿಗೆ ಆಗಮಿಸಲಿದ್ದಾರೆ. ಹಳೇ ಗದ್ದೆ ಬಯಲಿನಲ್ಲಿ ಭತ್ತ ಕಟಾವು ಮಾಡಿ ಭತ್ತದ ರಾಶಿಗೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಕಾವೇರಿ ನದಿ ತೀರದಲ್ಲಿರುವ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕಾವೇರಿ ನದಿಯ ಮೇಲ್ಸೇತುವೆಗೆ ಭೂಮಿಪೂಜೆ ನೆರವೇರಿಸಲಿದ್ದಾರೆ. ನಂತರ ಸಂಜೆ 6ಕ್ಕೆ ವದೆ ಸಮುದ್ರ ಗ್ರಾಮಕ್ಕೆ ತೆರಳಿ ಬಸ್‌ ದುರಂತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ ಪರಿಹಾರ ವಿತರಿಸಲಿದ್ದಾರೆ.

ಅರಳಕುಪ್ಪೆ ಗ್ರಾಮದ ದೇವರಾಜು, ಯೋಗಣ್ಣ ಹಾಗೂ ಹೇಮಂತ ಎಂಬುವವರ ಐದು ಎಕರೆ ಜಮೀನಿನಲ್ಲಿ ಕುಮಾರಸ್ವಾಮಿ ರವರು ಹಾಕಿದ್ದ ಭತ್ತನಾಟಿ ಪೈರು ಬೆಳೆದು ನಿಂತಿದ್ದು ಈ ಬಗ್ಗೆ ಸ್ವತಃ ತಮ್ಮ ಅಭಿಪ್ರಾಯ ಹಂಚಿಕೊಂಡ ಜಮೀನಿನ ಮಾಲಿಕಾರದ ಡಿ.ದೇವರಾಜು “ಭತ್ತದ ನಾಟಿಗೆ ಸ್ವತಃ ಸಿಎಂ ಕುಮಾರಸ್ವಾಮಿ ಅವರೇ ನಾಟಿ ಕಾರ‍್ಯಕ್ಕೆ ಚಾಲನೆ ನೀಡಿದ್ದರು. ಇದೀಗ ಬೆಳೆದಿರುವ ಭತ್ತವನ್ನು ಕಟಾವು ಮಾಡಲು ಸ್ವತಃ ಮುಖ್ಯಮಂತ್ರಿಗಳೇ ಆಗಮಿಸುತ್ತಿದ್ದಾರೆ. ನಮ್ಮ ಜಮೀನಿನಲ್ಲಿ ಬೆಳೆದಿರುವ ಭತ್ತವನ್ನು ನಾವು ಸಿಎಂ ಕುಮಾರಸ್ವಾಮಿ ಅವರಿಗೆ ನೀಡಬೇಕು ಎಂಬುದಾಗಿ ಅಂದುಕೊಂಡಿದ್ದೇವೆ. ಆದರೆ, ಉಸ್ತುವಾರಿ ಸಚಿವ ಸಿ.ಎಸ್‌.ಪುಟ್ಟರಾಜು ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದರಂತೆ ನಡೆದುಕೊಳ್ಳುತ್ತೇವೆ.” ಎಂದಿದ್ದಾರೆ,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top