fbpx
ಮನೋರಂಜನೆ

ಕಿಚ್ಚನನ್ನು ಕಾಡುತ್ತಿರುವ ಪ್ರಶ್ನೆಗೆ ನಿಮ್ಮ ಬಳಿ ಉತ್ತರವಿದೆಯೇ?

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಸಿನಿ ಪ್ರೇಮಿಗಳ ಕುತೂಹಲವನ್ನು ಈಗಾಗಲೇ ಕೆರಳಿಸಿದ್ದು. ಕಿಚ್ಚನ ಪ್ರೇಮಿಗಳಂತೂ ಈ ಚಿತ್ರ ಯಾವಾಗಾ ಬಿಡುಗಡೆಗೊಳ್ಳುವುದೋ ಎಂಬ ಕಾತರದಲ್ಲಿದ್ದಾರೆ. ಪೈಲ್ವಾನ್ ಚಿತ್ರದ ಬಗ್ಗೆ ಜನರಲ್ಲಿನ ಆಸಕ್ತಿ ಹೆಚ್ಚಾಗಿದ್ದು, ಈ ಸಿನಿಮಾ ಹೊಸ ದಾಖಲೆಯನ್ನು ಸೃಷ್ಟಿಸುತ್ತದೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.

ಇದೀಗ ಪೈಲ್ವಾನ್ ಚಿತ್ರದ ಬಾಕ್ಸಿಂಗ್ ಮತ್ತು ಕುಸ್ತಿ ದೃಶ್ಯಗಳ ಚಿತ್ರೀಕರಣ ಮುಗಿದಿದ್ದು. ಈ ಸಂದರ್ಭದಲ್ಲಿ ಕಿಚ್ಚಾ ಸಾಮಾಜಿಕ ಜಾಲತಾಣದಲ್ಲಿ ಇಡೀ ಚಿತ್ರತಂಡಕ್ಕೆ ಒಂದು ಅಭಿನಂದನಾ ಪತ್ರವನ್ನು ಬರೆದಿದ್ದಾರೆ.ಚಿತ್ರದ ನಿರ್ದೇಶಕ ಕೃಷ್ಣಪ್ಪ, ಬಾಕ್ಸಿಂಗ್ ಸೀಕ್ವೆನ್ಸ್ ಕಂಪೋಸ್ ಮಾಡಿದ ಲಾರ್ನೆಲ್ ಸ್ಟುವೆಲ್, ಕುಸ್ತಿ ದೃಶ್ಯಗಳನ್ನು ಸಂಯೋಜಿಸಿದ ವಿಜಯ್ ಮಾಸ್ಟರ್, ಒಟ್ಟಾರೆ ಚಿತ್ರದ ಸಾಹಸ ನಿರ್ದೇಶನ ಮಾಡಿದ ರವಿವರ್ಮ ಹೀಗೆ ಚಿತ್ರತಂಡದ ಪ್ರತಿಯೊಬ್ಬರನ್ನೂ ಕಿಚ್ಚ ಸುದೀಪ್ ಹಾಡಿ ಹೊಗಳಿದ್ದಾರೆ.

ಪತ್ರದಲ್ಲಿ ಏನಿದೆ?

ನಾನು ಕುಸ್ತಿ ಮತ್ತು ಬಾಕ್ಸಿಂಗ್ ಕಥೆ ಆಧರಿಸಿದ ಸಿನಿಮಾಗಳನ್ನು ನೋಡುವಾಗ, ನನಗೆ ಇಂಥದ್ದೊಂದು ಕಥೆ, ಚಾನ್ಸ್ ಸಿಗಬಾರದೇ ಎಂದುಕೊಳ್ಳುತ್ತಿದೆ. ಕೃಷ್ಣಪ್ಪ, ಒಂದೇ ಚಿತ್ರದಲ್ಲಿ ಕುಸ್ತಿ ಮತ್ತು ಬಾಕ್ಸಿಂಗ್ ಎರಡರ ಪರಿಚಯವನ್ನೂ ಮಾಡಿಕೊಟ್ಟರು. ನಾನು ಸ್ಟುವೆಲ್‍ರ ಗುರ್ ವಾಯ್ಸ್‍ನ್ನು ಮಿಸ್ ಮಾಡಿಕೊಳ್ಳಲಿದ್ದೇನೆ. ಕುಸ್ತಿ ದೃಶ್ಯಗಳಲ್ಲಿಯೂ ನನ್ನ ಮುಖದ ಮೇಲಿನ ನಗು ಮಾಸದಂತೆ ನೋಡಿಕೊಂಡ ವಿಜಯ್ ಮಾಸ್ಟರ್‍ಗೆ ಅಭಿನಂದನೆ. ಹೆಚ್ಚು ಕಡಿಮೆ ನನ್ನೊಂದಿಗೇ ವೃತ್ತಿ ಜೀವನ ಆರಂಭಿಸಿದ ರವಿವರ್ಮಾ ಸಾಧನೆ ನನಗೆ ಈಗಲೂ ಒಂದು ಬೆರಗು. ಇಡೀ ಚಿತ್ರತಂಡದ ಪ್ರತಿಯೊಬ್ಬ ಸದಸ್ಯರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸುಧೀರ್ಘವಾಗಿ ಮನ ಮುಟ್ಟುವಂತೆ ಪಾತ್ರ ಬರೆದಿದ್ದಾರೆ ಕಿಚ್ಚಾ. ಇಷ್ಟೆಲ್ಲ ಆದ ಮೇಲೆ ಕಿಚ್ಚಾ ಪತ್ರದ ಕೊನೆಯಲ್ಲಿ ತಮಗೆ ಉತ್ತರ ಸಿಗದ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಆ ಪ್ರಶ್ನೆ ಯಾವುದೆಂದರೆ ‘ಬಾಕ್ಸಿಂಗ್ ರಿಂಗ್ ಯಾಕೆ ಚೌಕಾಕಾರದಲ್ಲಿರುತ್ತೆ’? ಎಂಬುದಾಗಿದೆ.

ಕಿಚ್ಚನ ಈ ಪ್ರಶ್ನೆಗೆ ಅನೇಕರು ಟ್ವೀಟ್ ಮಾಡಿದ್ದೂ, ಇನ್ನೂ ಕೆಲವರು ಉತ್ತರದ ಹುಡುಕಾಟದಲ್ಲಿದ್ದಾರಂತೆ.

 

 

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top