ಸಮಾಚಾರ

ಮುಖ್ಯಮಂತ್ರಿ ಆಗ್ತಾರಂತೆ ಬಿಜೆಪಿ ನಾಯಕ ಈಶ್ವರಪ್ಪ- ಹೀಗಂತ ಹೇಳಿದ್ಯಾರು ಗೊತ್ತಾ?

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮುಂದೊಂದು ದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಹೇಳಿಕೆ ನೀಡಿದ್ದಾರೆ. ಬಳ್ಳಾರಿಯ ಜೋಳದರಾಶಿ ಡಾ. ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಸೋಮಶೇಖರ್ ರೆಡ್ಡಿ ಈ ಭವಿಷ್ಯ ನುಡಿದ್ದಾರೆ.

“ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಇಬ್ಬರು ಕುರುಬ ಸಮಾಜದ ಎರಡು ಕಣ್ಣುಗಳಿದ್ದಂತೆ.. ಹೇಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೋ ಹಾಗೆಯೇ ಈಶ್ವರಪ್ಪನವರೂ ಮುಂದೊಂದು ದಿನ ಮುಖ್ಯಮಂತ್ರಿ ಆಗುತ್ತಾರೆ. ಈ ಬಗ್ಗೆ ನನಗೆ ವಿಶ್ವಾಸ ಇದೆ” ಎಂದು ಸೋಮಶೇಖರ ರೆಡ್ಡಿ ಹೇಳಿದರು.

ಇನ್ನು ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿದ ರೆಡ್ಡಿ “ಸಿದ್ದರಾಮಯ್ಯನವರಿಗೂ ನನಗೂ ಅವಿನಾವಭಾವ ಸಂಬಂಧವಿದೆ. ಎಲ್ಲೇ ಸಿಕ್ಕರೂ ಅವರು ನನ್ನನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ. ನನ್ನ ಮೇಲೆ ಅವರಿಗೆ ವಿಶೇಷ ಪ್ರೀತಿ ಇದೆ. ರಾಜಕೀಯವೇ ಬೇರೆ, ಸ್ನೇಹವೇ ಬೇರೆ. ನಾವು ಯಾವತ್ತೂ ದ್ವೇಷದ ರಾಜಕೀಯ ಮಾಡಿದವರಲ್ಲ. ಹಾಗೇನಾದರೂ ಅಂತಹ ಸನ್ನಿವೇಶ ಬಂದರೆ ರಾಜಕೀಯದಿಂದಲೇ ದೂರ ಉಳಿಯುತ್ತೇನೆಯೇ ಹೊರತು ದ್ವೇಷ ಮಾಡುವುದು ಗೊತ್ತಿಲ್ಲ” ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top