ಮನೋರಂಜನೆ

ತಮನ್ನಾಗೆ ಗೇಟ್ ಪಾಸ್ ಬೇರೆ ನಟಿ ಜೊತೆಗೆ ‘ಕೆಜಿಎಫ್’ ಸಾಂಗ್ ಮತ್ತೊಮ್ಮೆ ಶೂಟಿಂಗ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಹಿಂದಿನ ಎಲ್ಲ ಚಿತ್ರಗಳನ್ನೂ ಮೀರಿಸುವಂತಾ ನಿರೀಕ್ಷೆ ಕೆಜಿಎಫ್ ಚಿತ್ರದ ಮೇಲೆ ಹುಟ್ಟಿಕೊಂಡಿದೆ. ಸ್ವಲ್ಪ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ ಟ್ರೈಲರ್ ಮೂಲಕವೇ ದೇಶಾದ್ಯಂತ ಭಾರಿ ಪ್ರಚಾರ ಪಡೆದ ಕೆಜಿಎಫ್ ದಿನೇ ದಿನೇ ನಿರೀಕ್ಷೆ ಹೆಚ್ಚುಸುತ್ತಿದೆ. ಕೆಜಿಎಫ್​ನಲ್ಲಿ ತಮನ್ನಾ ಕುಣಿದಿರೋ ಮತ್ತೊಂದು ಪಾರ್ಟಿ ಸಾಂಗಿದೆ. ಆದರೆ ತಮನ್ನಾ ನೃತ್ಯವನ್ನು ಕಣ್ತುಂಬಿಕೊಳ್ಳುವ ಅದೃಷ್ಟ ಹಿಂದಿ ಪ್ರೇಕ್ಷಕರಿಗಿಲ್ಲ. ಯಾಕೆಂದ್ರೆ ಈ ಹಾಡಿನ ಬದಲಾಗಿ ಹೊಸದೊಂದು ಸಾಂಗ್​, ಹಿಂದಿಯಲ್ಲಿ ಸಿದ್ಧವಾಗ್ತಿದೆ.

ಕನ್ನಡದ ‘ಕೆಜಿಎಫ್’ ಸಿನಿಮಾದಲ್ಲಿ ತಮನ್ನಾ ಯಶ್ ಜೊತೆ 1970 ರಲ್ಲಿ ತೆರೆಕಂಡ ಡಾ.ರಾಜ್ ಕುಮಾರ್ ಅಭಿನಯದ ‘ಪರೋಪಕಾರಿ’ ಸಿನಿಮಾದ ‘ಜೋಕೆ ನಾನು ಬಳ್ಳಿಯ ಮಿಂಚು…’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಆದರೆ ಕನ್ನಡ ಹಾಡಿನ ಡ್ಯಾನ್ಸ್ ಗೆ ಬಾಲಿವುಡ್ ಮಂದಿ ಬ್ರೇಕ್ ಹಾಕಿದ್ದು, ಸಿನಿಮಾದಿಂದ ಹಾಡನ್ನು ಹಿಂದಿ ವಿತರಕರು ಕೈ ಬಿಟ್ಟಿದ್ದಾರೆ.

ಜೋಕೆ ಬದಲಾಗಿ ‘ಗಲ್ಲಿ ಗಲ್ಲಿ’:
ಜಾಕಿ ಶ್ರಾಫ್​ – ಸಂಗೀತ ಬಿಜ್ಲಾನಿ ನಟನೆಯ ‘ತ್ರಿದೇವ್​’ ಬಿ ಟೌನ್​ನ ಸೂಪರ್ ಹಿಟ್ ಸಿನಿಮಾ. ಈ ಸಿನಿಮಾದ ‘ಗಲ್ಲಿ ಗಲ್ಲಿ ಮೇನ್​ ಪಿಥ್ರಾ ಹೈ..’ ಸೂಪರ್ ಹಿಟ್ ಪಾರ್ಟಿ ಸಾಂಗ್​. ಇದೇ ಹಾಡನ್ನು ಹಿಂದಿ ಕೆಜಿಎಫ್​ನಲ್ಲಿ ಸೇರಿಸಲಾಗ್ತಿದೆ. ತಮನ್ನಾ ಬದಲಾಗಿ ಬಾಲಿವುಡ್​ ನಟಿ ಮೌನಿ ರಾಯ್​ ಯಶ್​ ಜೊತೆಗೆ ಹೆಜ್ಜೆ ಹಾಕಲಿದ್ದಾರೆ. ನಾಳೆಯಿಂದ ಮುಂಬೈನ ಗೊರೆಗಾಂವ್​ ಸ್ಟುಡಿಯೋದಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಹೊಂಬಾಳೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೂ ಕೂಡಾ ಈ ಚಿತ್ರದ ಆಕರ್ಷಣೆಗಳಲ್ಲೊಂದು. ಇನ್ನುಳಿದಂತೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡುತ್ತಿದ್ದು ಭುವನ್ ಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.. ಇಂಥಾ ಮಹೋನ್ನತ ಚಿತ್ರ ಡಿಸೆಂಬರ್ 21ರಂದು ದೇಶಾದ್ಯಂತ ತೆರೆಕಾಣುತ್ತಿದೆ. ಇನ್ನು ಈ ಸಿನಿಮಾ ಜಪಾನೀಸ್​ ಹಾಗೂ ಚೀನಾ ಭಾಷೆಗೂ ಡಬ್​ ಆಗಿ ತೆರಕಾಣಲಿದೆ ಎನ್ನಲಾಗಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top