ಸಮಾಚಾರ

ಕೆಜಿಎಫ್ ಡೈಲಾಗ್‍ಗೆ ಕನ್ನ ಹಾಕಿದರೇ ಸೌತ್ ಸ್ಟಾರ್ ಧನುಷ್.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಸದ್ಯ ಎಲ್ಲೆಡೆ ಜೋರಾಗಿ ಸೌಂಡ್ ಮಾಡಲಾರಂಭಿಸಿದೆ. ಸದ್ಯ ಬಿಡುಗಡೆಯಾಗಿರುವ ಟ್ರೇಲರುಗಳ ಮೂಲಕವೇ ಭಾರತೀಯ ಸಿನಿಮಾರಂಗದ ದೃಷ್ಟಿಯನ್ನು ತನ್ನತ್ತ ಸೆಳೆದುಕೊಂಡಿರುವ ‘ಕೆಜಿಎಫ್’ ದೊಡ್ಡ ನಿರೀಕ್ಷೆಯನ್ನು ಮೂಡಿಸುತ್ತಿದೆ. ಇಂಥಾ ಕೆಜಿಎಫ್ ಸಿನಿಮಾದ ಒಂದು ಡೈಲಾಗ್ ಅನ್ನು ಸೌತ್ ಸ್ಟಾರ್ ಧನುಷ್ ಅವ್ರು ಕಾಪಿ ಮಾಡಿಬಿಟ್ಟಿದ್ದಾರೆ ಎಂಬ ಆಪಾದನೆ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಕ್ತವಾಗುತ್ತಿದೆ.

ಕೆಜಿಎಫ್ ಸಿನಿಮಾದ ಯಾವುದಾದರೂ ಒಂದು ಡೈಲಾಗ್ ಹೇಳಿ ಎಂದು ಕೇಳಿಕೊಂಡಾಗ ಖಾಸಗಿ ಕಾರ್ಯಕ್ರಮವೊಂದರಲ್ಲಿ ಯಶ್ ಒಂದು ಡೈಲಾಗ್ ಹೊಡೆದಿದ್ದರು. ಅದೇನೆಂದರೆ ‘ಇಫ್ ಯೂ ಆರ್ ಬ್ಯಾಡ್, ದೆನ್ ಐ ಯಾಮ್ ಯು ಆರ್ ಡ್ಯಾಡ್’. ಈ ಡೈಲಾಗ್ ಇದೀಗ ಧನುಷ್ ನಟನೆಯ ಬಹುನಿರೀಕ್ಷಿತ ಮಾರಿ-2 ಚಿತ್ರದಲ್ಲೂ ಇದೆ. ನೆನ್ನೆಯಷ್ಟೇ ಬಿಡುಗಡೆಯಾಗಿರುವ ಮಾರಿ-2 ಟ್ರೈಲರ್ ನಲ್ಲಿ ಇದು ಜಾಹೀರಾಗಿದೆ.. ಎದುರಾಳಿಯ ಮುಂದೆ ನಿಂತು ಧನುಷ್ ಖಡಕ್ಕಾಗಿ ‘ಇಫ್ ಯೂ ಆರ್ ಬ್ಯಾಡ್, ದೆನ್ ಐ ಯಾಮ್ ಯು ಆರ್ ಡ್ಯಾಡ್’ ಡೈಲಾಗ್ ಹೊಡೆಯುತ್ತಾರೆ..

ಈ ಡೈಲಾಗ್ ಕೆಜಿಎಫ್ ಚಿತ್ರದ್ದೇನಲ್ಲಾ :
ಹಾಗೆ ನೋಡಿದರೆ ‘ಇಫ್ ಯೂ ಆರ್ ಬ್ಯಾಡ್, ದೆನ್ ಐ ಯಾಮ್ ಯು ಆರ್ ಡ್ಯಾಡ್’ ಎಂಬ ಈ ಸಾಲು ಕೆಜಿಎಫ್ ಚಿತ್ರದ್ದೂ ಅಲ್ಲ. ಇದು ಇಂಗ್ಲಿಷ್ ನಲ್ಲಿ ವೈರಲ್ ಆಗಿದ್ದ ಜನಪ್ರಿಯ ಸಾಲಾಗಿತ್ತು. ಕೆಜಿಎಫ್ ಸಿನಿಮಾ ಸೆಟ್ಟಿರುವುದಕ್ಕೂ ಮುಂಚಿನಿಂದಲೂ ಅನೇಕರ ವಾಟ್ಸಾಪ್, ಫೇಸ್ಬುಕ್ ಸ್ಟೇಟಸ್ ಗಳಲ್ಲಿ ಈ ಡೈಲಾಗ್ ರಾರಾಜಿಸಿತ್ತು.. ಹಾಗಾಗಿ ಈ ಡೈಲಾಗ್ ಅನ್ನು ಕೆಜಿಎಫ್ ಮತ್ತು ಮಾರಿ-2 ಎರಡೂ ಚಿತ್ರಗಳೂ ಬಳಸಿಕೊಂಡಿರುಬಹುದು.. ಕೆಜಿಎಫ್ ಡೈಲಾಗ್ ಅವರು ಕಾಪಿ ಮಾಡಿದರು ಅಥವಾ ‘ಮಾರಿ’ ಡೈಲಾಗ್ ಇವರು ಕದ್ದರು ಎನ್ನುವಂತಿಲ್ಲ. ಯಾಕಂದ್ರೆ, ಇದು ಕಾಕತಾಳೀಯ ಅಷ್ಟೇ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top