ಮನೋರಂಜನೆ

ಕುಸ್ತಿ, ಬಾಕ್ಸಿಂಗ್ ಮುಗಿಸಿದ ಕಿಚ್ಚನ ‘ಪೈಲ್ವಾನ್’.

ಸದ್ಯ ಕನ್ನಡ ಚಿತ್ರರಂಗದಲ್ಲಿ ಅತಿ ದೊಡ್ಡ ನಿರೀಕ್ಷೆಯನ್ನು ಹುಟ್ಟು ಹಾಕುತ್ತಿರುವ ಚಿತ್ರ ಅಂದ್ರೆ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’. ಕನ್ನಡವೂ ಸೇರಿ ಒಟ್ಟು ಎಂಟು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಬಗ್ಗೆ ಸ್ವತಃ ಕಿಚ್ಚನ ಅಭಿಮಾನಿಗಳು ತಲೆಕೆಡಿಸಿಕೊಂಡು ಕೂತಿದ್ದರೇ ಮಾಮೂಲಿ ಪ್ರೇಕ್ಷಕರಲ್ಲೂ ವಿಭಿನ್ನ ಕ್ರೇಜ್ ಹುಟ್ಟುಹಾಕುತ್ತಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿರುವ ಚಿತ್ರದ ಮೇಕಿಂಗ್ ಸ್ಟಿಲ್ಲುಗಳೇ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತಿದೆ.. ಇಂಥಾ ಪೈಲ್ವಾನ್ ಟೀಮ್ ನಿಂದ ಸರ್ಪ್ರೈಸ್ ನ್ಯೂಸ್ ಒಂದು ಸಿಕ್ಕಿದೆ..

ಪೈಲ್ವಾನ್ ಸಿನಿಮಾದ ಚಿತ್ರೀಕರಣ ಸದ್ಯ ಅಂತಿಮ ಹಂತವನ್ನು ದಾಟಿಕೊಂಡಿದ್ದು ಕುಸ್ತಿ ಮತ್ತು ಬಾಕ್ಸಿಂಗ್ ಭಾಗದ ದೃಶ್ಯಗಳನ್ನು ಮುಗಿಸಿಕೊಂಡಿದೆ. ಈ ವಿಚಾರವನ್ನು ಸ್ವತಃ ಕಿಚ್ಚ ಸುದೀಪ್ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ. ಉಳಿದಂತೆ ಹಾಡುಗಳು ಮತ್ತು ಕೆಲ ದೃಶ್ಯಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದ್ದು ಕೆಲವೇ ದಿನಗಳಲ್ಲಿ ಅವನ್ನೂ ಮುಗಿಸಲಿದೆ.

ಎಂಟು ಭಾಷೆಗಳಲ್ಲಿ ಪೈಲ್ವಾನ್:
ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಭೋಜಪುರಿ ಮತ್ತು ಬಂಗಾಳಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆಯಂತೆ.. ಅಲ್ಲಿಗೆ ಒಟ್ಟು ಎಂಟು ಭಾಷೆಗಳಲ್ಲಿ ಪೈಲ್ವಾನ್ ಏಕಕಾಲಕ್ಕೆ ತೆರೆಗೆ ಅಪ್ಪಳಿಸಲಿದ್ದಾನೆ.. ಕನ್ನಡ ಹೊರೆತು ಪಡಿಸಿ 7 ಭಾಷೆಗಳ ಡಬ್ಬಿಂಗ್ ರೈಟ್ಸ್ ವಿಚಾರವಾಗಿ 2-3 ಸುತ್ತು ಮಾತುಕತೆ ನಡೆದಿದ್ದು, ಇನ್ನೆರಡು ಮೂರು ವಾರಗಳಲ್ಲಿ ಅದರ ಸಂಪೂರ್ಣ ವಿವರವನ್ನು ಅಧಿಕೃತವಾಗಿ ಚಿತ್ರತಂಡವೇ ಹೊರಹಾಕಲಿದೆಯಂತೆ.

ಪೈಲ್ವಾನ್ ಬಗ್ಗೆ:
ಹೆಬ್ಬುಲಿಯಂಥಾ ಹಿಟ್ ಚಿತ್ರದ ಬಳಿಕ ಕಿಚ್ಚಾ ಸುದೀಪ್ ಮತ್ತು ನಿರ್ದೇಶಕ ಕೃಷ್ಣ ಪೈಲ್ವಾನ್ ಚಿತ್ರದ ಮೂಲಕ ಮತ್ತೆ ಒಂದಾಗಿದ್ದು ಕೃಷ್ಣ ನಿರ್ದೇಶನ ಮಾಡುತ್ತಿರೋ ಮೂರನೇ ಚಿತ್ರ ಇದಾಗಿದೆ. ಇನ್ನು ಪೈಲ್ವಾನ್ ಚಿತ್ರದ ಬಗ್ಗೆ ಹೇಳಬೇಕೆಂದರೆ ಮುಂಬೈ ಬೆಡಗಿ ಆಕಾಂಕ್ಷ ಸಿಂಗ್ ಸುದೀಪ್’ಗೆ ನಾಯಕಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಬಾಲಿವುಡ್ ನಟ ಸುನಿಲ್ ಶೆಟ್ಟಿ, ಕರುಣ್ ದುಹಾನ್ ಸಿಂಗ್, ಚಿಕ್ಕಣ್ಣ ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ.

ಕಿಚ್ಚನದ್ದು ಮೂರು ರೀತಿಯ ಪಾತ್ರ:
ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅದಕ್ಕಾಗಿ ದೇಹವನ್ನು ದಂಡಿಸಿ ಗಾತ್ರವನ್ನು ಹೆಚ್ಚಿಸಿಕೊಂಡಿದ್ದಾರೆ. ಅದಕ್ಕಾಗಿ ಮೊದಲ ಬಾರಿ ಸೀರಿಯಸ್ಸಾಗಿಯೇ ಜಿಮ್‌ನತ್ತ ಮುಖ ಮಾಡಿದ್ದಾರೆ! ಪೈಲ್ವಾನ್ ಚಿತ್ರದಲ್ಲಿ ಕಿಚ್ಚ ಮೂರು ರೀತಿಯಲ್ಲಿ ಫೈಟ್ ಮಾಡಲಿದ್ದಾರೆ. ಒಂದು ಶೇಡ್‍ನಲ್ಲಿ ಪೈಲ್ವಾನ್ ಆಗಿ ಕಾಣಿಸ್ತಾರೆ. ಇನ್ನೊಂದ್ಕಡೆ ಮಾಮೂಲಿ ಆ್ಯಕ್ಷನ್ನೂ ಇರುತ್ತೆ. ಪೋಸ್ಟರ್‍ಗಳಲ್ಲಿ ಈಗಾಗಲೇ ರಿವೀಲ್ ಆದಂತೆ ಕಿಚ್ಚ ಬಾಕ್ಸರ್ ಆಗಿಯೂ ಕಾಣಿಸಿಕೊಳ್ಳಲಿದ್ದಾರೆ.

RRR ಮೋಶನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಪೈಲ್ವಾನ್ ಚಿತ್ರವನ್ನು ನಿರ್ದೇಶಕ ಕೃಷ್ಣಾ ಅವರ ಪತ್ನಿ ಸ್ವಪ್ನ ಕೃಷ್ಣಾ ನಿರ್ಮಾಣ ಮಾಡುತ್ತಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಕರುಣಾಕರ್ ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿರಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top