ಸಿನಿಮಾ

ನಿಕ್ ಜೋನ್ಸ್ ರನ್ನು ವಂಚಿಸಿ ಮದುವೆಯಾದರ ನಟಿ ಪ್ರಿಯಾಂಕಾ ಚೋಪ್ರಾ? – ಸೃಷ್ಟಿಯಾಯಿತು ಮತ್ತೊಂದು ವಿವಾದ

ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಹಾಗೂ ಅಮೆರಿಕ ಗಾಯಕ ನಿಕ್ ಜೋನ್ಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಹೊಸ ಜೀವನದ ಗುಂಗಿನಲ್ಲಿ ತೇಲುತ್ತಿದ್ದಾರೆ. ಆದರೆ ದುರದೃಷ್ಟವಶಾತ್ ಇವರಿಬ್ಬರೂ ಮದುವೆ ಮಾಡಿಕೊಳ್ಳುತ್ತೇವೆ ಎಂದು ಹೇಳಿಕೆ ಕೊಟ್ಟಾಗಿನಿಂದಲೂ ಇಬ್ಬರೂ ಒಂದಲ್ಲ ಒಂದು ವಿವಾದಕ್ಕೆ ತುತ್ತಾಗುತ್ತಲೇ ಇದ್ದಾರೆ. ಇದೀಗ ಮದುವೆಯ ನಂತರವೂ ಇವರಿಬ್ಬರೂ ಇನ್ನೊಂದು ವಿವಾದಲ್ಲಿ ಸಿಲುಕಿ ಕೊಂಡಿದ್ದಾರೆ.

ಹೌದು, ಅಮೆರಿಕದ ನ್ಯೂಯಾರ್ಕ್ ನಿಯತಕಾಲಿಕೆಯ ‘ದ ಕಟ್‌’ ವೆಬ್‌ಸೈಟ್‌ನಲ್ಲಿ ಲೇಖನವೊಂದನ್ನು ಪ್ರಕಟಿಸಲಾಗಿದ್ದು, ಅದರಲ್ಲಿ ಪ್ರಿಯಾಂಕಾ ಚೋಪ್ರಾ ಅವರನ್ನು ‘ಜಾಗತಿಕ ವಂಚನೆಯ ನಟಿ’ ಎಂದು ಕರೆಯಲಾಗಿದೆ.

ಮಾರಿಯಾ ಸ್ಮಿತ್‌ ಎಂಬ ಲೇಖಕಿ ‘ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಜೋನ್ಸ್‌ ಪ್ರೀತಿ ನಿಜವೇ?’ ಎಂಬ ಶೀರ್ಷಿಕೆ ನೀಡಿ ‘ದ ಕಟ್‌’ ವೆಬ್‌ಸೈಟ್‌ನಲ್ಲಿ ಲೇಖನವೊಂದನ್ನು ಪ್ರಕಟಿಸಿದ್ದಾರೆ. ಲೇಖನದಲ್ಲಿ ಪ್ರಿಯಾಂಕಾ ಹಣದ ಹಿಂದೆ ಬಿದ್ದಿರುವ ನಟಿ, ಹೀಗಾಗಿ ಹಣ ಹಾಗೂ ಅಧಿಕಾರಕ್ಕಾಗಿ ಪ್ರಿಯಾಂಕಾ ನಿಕ್ ರವರನ್ನು ಮದುವೆಯಾಗಿದ್ದಾರೆ ಎಂದು ಬರೆದಿದ್ದಾರೆ.ಅಷ್ಟೇ ಅಲ್ಲದೇ ಹಾಲಿವುಡ್‌ನ ಹೊಸ ನಟಿಯೊಂದಿಗೆ ಹೆಜ್ಜೆ ಹಾಕಲು ನಿಕ್‌ ಬಯಸಿದ್ದರು ಆದರೆ ಅವರ ಬಯಕೆ ಈಡೇರಲಿಲ್ಲ ಏಕೆಂದರೆ ನಿಕ್‌ ಜೋನ್ಸ್‌ ರ ಇಚ್ಛೆಗೆ ವಿರುದ್ಧವಾಗಿ ಮೋಸದ ಸಂಬಂಧದ ಬಲೆಯನ್ನು ಪ್ರಿಯಾಂಕಾ ಬೀಸಿದ್ದರು. ಹಾಗೂ ಜಾಗತಿಕ ವಂಚನೆಯ ನಟಿಯಂದ ನಿಕ್ ಪ್ರಿಯಾಂಕಾ ಚೋಪ್ರರನ್ನು ಮದುವೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಉಂಟಾಯಿತು ಎಂದು ಖಾರವಾಗಿ ಲೇಖನದಲ್ಲಿ ಮಾರಿಯಾ ಸ್ಮಿತ್‌ ರವರು ಬರೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top