ಮನೋರಂಜನೆ

‘ಅಮ್ಮಾ’ ಆದಳು ಬಹುಭಾಷಾ ನಟಿ ನಿತ್ಯಾ ಮೆನನ್- ಅಭಿಮಾನಿಗಳಿಗೆ ಸರ್ಪ್ರೈಸ್ ಸುದ್ದಿ

ಮಲೆಯಾಳಂ ಮೂಲವಾದರೂ ಕನ್ನಡದ ಹುಡುಗಿ ನಿತ್ಯಾ ಮೆನನ್. ಆಕೆ ಕನ್ನಡದಲ್ಲಿ ನಟಿಸಿರೋದು ಕೆಲವೇ ಕೆಲ ಚಿತ್ರಗಳಲ್ಲಾದರೂ ಆ ಪಾತ್ರಗಳನ್ನು ಕನ್ನಡದ ಪ್ರೇಕ್ಷಕರು ಮರೆಯುವಂತಿಲ್ಲ. ಸವಾಲಿನ ಪಾತ್ರಗಳನ್ನೇ ಸದಾ ಆರಿಸಿಕೊಳ್ಳುವ ನಿತ್ಯಾ ಪ್ರತಿಭಾವಂತ ನಟಿ. ಯಾವ ಥರದ ಪಾತ್ರಗಳಿಗಾದರೂ ಹೊಂದಿಕೊಂಡು ನಟಿಸೋ ತಾಕತ್ತಿರೋ ಈಕೆ ಈಗ ‘ಅಮ್ಮಾ’ ಆಗ್ತಿದ್ದಾಳೆ.. ಕನ್ಫ್ಯೂಸ್ ಆಗ್ಬೇಡಿ, ನಿತ್ಯ ಮೆನನ್ ತಾಯಿನೂ ಆಗ್ತಿಲ್ಲ ಅಥವಾ ತಾಯಿ ಪಾತ್ರದಲ್ಲೂ ನಟಿಸುತ್ತಿಲ್ಲ. ಬದಲಾಗಿ ಕೋಟ್ಯಂತರ ಜನರಿಂದ ‘ಅಮ್ಮಾ’ ಎಂದು ಕರೆಸಿಕೊಳ್ಳುತ್ತಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ…

 

 

‘ಅಮ್ಮಾ’ ಜಯಲಲಿತಾ ಜೀವನದ ಕುರಿತಾಗಿ ಬಯೋಪಿಕ್ ಸಿನಿಮಾವೊಂದು ಸೆಟ್ಟೇರಲಿದೆ ಎಂಬ ಸುದ್ದಿ ಕಳೆದೊಂದು ವರ್ಷದಿಂದ ಕೇಳುತ್ತಲೇ ಇತ್ತು. ಅದಕ್ಕೆ ಪೂರಕವಾಗಿ ಸಿನಿಮಾದಲ್ಲಿ ಜಯಲಲಿತಾ ಪಾತ್ರವನ್ನು ಆ ನಟಿ ಮಾಡುತ್ತಾಳಂತೆ, ಈ ನಟಿ ಮಾಡುತ್ತಾಳಂತೆ ಎಂಬ ರೂಮರುಗಳು ಪುಂಖಾನುಪುಂಖವಾಗಿ ಕೇಳಿ ಬಂದಿದ್ದವು. ಆದರೆ ಇದೀಗ ಆ ಸುಳ್ಳು ಸುದ್ದಿಗಳಿಗೂ ಬ್ರೇಕ್ ಬಿದ್ದುದ್ದು ಜಯಲಲಿತಾ ಜೀವನಾಧಾರಿತ ಸಿನಿಮಾದ ಅಧಿಕೃತ ಮಾಹಿತಿಗಳು ಹೊರಬಿದ್ದಿವೆ.

ನಿರ್ದೇಶಕಿ ಪ್ರಿಯದರ್ಶಿನಿ ಆಕ್ಷನ್ ಕಟ್ ಹೇಳುತ್ತೀರೋ ಈ ಚಿತ್ರಕ್ಕೆ ‘ದಿ ಐರನ್ ಲೇಡಿ’ ಎಂದು ಶೀರ್ಷಿಕೆ ಇಡಲಾಗಿದ್ದು ಅದಕ್ಕೆ ‘The Story of Revolutionary Leader’ ಎಂಬ ಅಡಿಬರಹವನ್ನು ಬರೆಯಲಾಗಿದೆ.. ಇತ್ತೀಚಿಗಷ್ಟೇ ಸಿನಿಮಾ ಟೈಟಲ್ ಲಾಂಚ್ ಮಾಡಿದ್ದ ಪ್ರಿಯದರ್ಶಿನಿ ಜಯಲಲಿತಾ ಪಾತ್ರವನ್ನು ಯಾರು ಮಾಡುತ್ತಿದ್ದಾರೆ ಎಂಬ ಗುಟ್ಟನ್ನು ಕಾಪಿಟ್ಟುಕೊಂಡೇ ಬಂದಿದ್ದರು. ಆದರೆ ಈಗ ಚಿತ್ರದಲ್ಲಿ ಜಯಲಲಿತಾ ಪಾತ್ರವನ್ನು ನಿತ್ಯಾ ಮೆನನ್ ನಿರ್ವಹಿಸಲಿದ್ದಾರೆ ಎಂದು ಬಹಿರಂಗ ಪಡಿಸಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ… ಅಂದಹಾಗೆ ಸಿನಿಮಾ ಯಾವಾಗ ಸೆಟ್ಟೇರುತ್ತೆ? ಮುಹೂರ್ತ ಲಾಂಚ್ ಸಮಾರಂಭಕ್ಕೆ ಯಾರೆಲ್ಲಾ ಗಣ್ಯರು ಆಗಮಿಸುತ್ತಾರೆ? ಎಂಬ ಮಾಹಿತಿಯನ್ನು ಸದ್ಯದಲ್ಲೇ ಬಹಿರಂಗಪಡಿಸುವುದಾಗಿ ನಿರ್ದೇಶಕಿ ಪ್ರಿಯದರ್ಶಿನಿ ತಿಳಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top