ಮನೋರಂಜನೆ

ಬಾಕ್ಸ್ ಆಫೀಸ್ನಲ್ಲಿ 50 ಡೇಸ್ ಕಂಪ್ಲೀಟ್ ಮಾಡಿದ ‘ದಿ ವಿಲನ್’- ಪ್ರೇಕ್ಷಕರಿಗೆ ಧನ್ಯವಾದ ಹೇಳಿದ ಕಿಚ್ಚ.

ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಸಿನಿಮಾ ಪ್ರೇಮ್ ನಿರ್ದೇಶನದ ‘ದಿ ವಿಲನ್’. ಇತ್ತೀಚಿನ ವರ್ಷಗಳಲ್ಲಿ ‘ವಿಲನ್’ ಸಿನಿಮಾ ಬಗ್ಗೆ ಆದ ಅಪಪ್ರಚಾರ ಯಾವ ಸಿನಿಮಾಗೂ ಆಗಿರಲಿಲ್ಲ! ವಿಪರ್ಯಾಸ ಎಂದರೆ ವಿಲನ್ ಗೆ ಆಗಿರುವಷ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ಯಾವ ಸಿನಿಮಾಗೂ ಆಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೆಲಸಿಲ್ಲದ ಕೆಲವು ಕಿಡಿಗೇಡಿಗಳು ಸಿನಿಮಾ ಬಗ್ಗೆ ಕೆಟ್ಟದಾಗಿ ಬಿಂಬಿಸಿ ವಿಕೃತಿ ಮೆರೆದಿದ್ದರು. ಹೀಗಿದ್ದರೂ ಮೊದಲ ವಾರದಲ್ಲೇ ಬರೋಬ್ಬರಿ ಎಪ್ಪತ್ತು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಹೆಬ್ಬೇರಿಸಿತ್ತು.

ಆ ನಂತರದ ದಿನಗಳಲ್ಲಿ ಕೆಲವರು ಸಿನಿಮಾವನ್ನು ಪೈರಸಿ ಮಾಡಿ ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಿದ್ದರು. ಇಂಥಾ ಎಲ್ಲಾ ಕಾಟಗಳ ನಡುವೆಯೂ ದಿ ವಿಲನ್ ಸಿನಿಮಾ ಕೆಲವು ಚಿತ್ರಮಂದಿರಗಳಲ್ಲಿ ಅರ್ಧಶತಕ ಪೂರೈಸಿದೆ.. ಮುಖ್ಯ ಚಿತ್ರಮಂದಿರ ಕೆಜಿ ರಸ್ತೆಯಲ್ಲಿರೋ ನರ್ತಕಿ ಥೀಯೇಟರ್ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಐವತ್ತು ದಿನಗಳನ್ನು ಪೂರೈಸಿದೆ ಎನ್ನಲಾಗಿದೆ.

 

 

‘ದಿ ವಿಲನ್’​​ ಸಿನಿಮಾ 50 ದಿನ ಪೂರೈಸಿದ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್​​ ಟ್ವಿಟರ್​​ ಮೂಲಕ ತಮ್ಮ ಪ್ರೇಕ್ಷಕರಿಗೆ ಥ್ಯಾಂಕ್ಸ್ ಹೇಳಿದ್ದಾರೆ. “ದಿ ವಿಲನ್ ಸಿನಿಮಾವನ್ನು ಪ್ರೀತಿಯಿಂದ ಸ್ವಾಗತಿಸಿದ್ದಕ್ಕೆ ಎಲ್ಲಾ ಸ್ನೇಹಿತರಿಗೂ ಧನ್ಯವಾದಗಳು. ದಿ ವಿಲನ್ ಸಿನಿಮಾ 50 ದಿನಗಳನ್ನು ಕಂಪ್ಲೀಟ್ ಆಗಲು ಬೇಷರತ್ತಾದ ಪ್ರೀತಿ ಮತ್ತು ಬೆಂಬಲ ತೋರಿಸಿದರಿಂದ ಸಿನಿಮಾ ಈಗ 50 ದಿನ ಪೂರೈಸಿದೆ. ಹಾಗೆಯೇ ಸಿನಿಮಾ ಬಗ್ಗೆ ಒಳ್ಳೆಯದನ್ನು ಬರೆದ ನನ್ನ ಮಾಧ್ಯಮದ ಸ್ನೇಹಿತರಿಗೆ ಕೂಡ ಧನ್ಯವಾದಗಳು” ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top