ಸಿನಿಮಾ

‘ಯಡಿಯೂರಪ್ಪ ಮುಂದೆಂದೂ ಮುಖ್ಯಮಂತ್ರಿಯಾಗಲ್ಲ” ಹೀಗೆ ಹೇಳಿದ್ದು ಯಾರು ಗೊತ್ತಾ?

ಹಿಂದೆ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಉತ್ತಮ ಆಡಳಿತ ನೀಡದ ಯಡಿಯೂರಪ್ಪ ಇನ್ನೂ ಯಾವತ್ತೂ ರಾಜ್ಯದಲ್ಲಿ ಸಿಎಂ ಆಗುವುದಿಲ್ಲ. ರಾಜ್ಯದಲ್ಲಿ ಯಡಿಯೂರಪ್ಪ ನಂ 1 ನಾಲಾಯಕ್ ಮುಖ್ಯಮಂತ್ರಿ ಆಗಿದ್ದವರು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.

ಬಿಎಸ್ ಯಡಿಯೂರಪ್ಪ ಮತ್ತು ಡಿಕೆ ಶಿವಕುಮಾರ್ ಭೇಟಿಯನ್ನು ಪ್ರಸ್ತಾಪಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಮಧು “ನಮ್ಮ ತಂದೆ ಬಂಗಾರಪ್ಪನವರು ಶಂಕುಸ್ಥಾಪನೆ ಮಾಡಿದ್ದ ಯೋಜನೆಯನ್ನು ಜಾರಿಗೊಳಿಸಲು ಯಡಿಯೂರಪ್ಪ ಈಗ ಪತ್ರ ಬರೆದಿದ್ದಾರೆ.. ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಟೇಕಾಫ್ ಆಗಿಲ್ಲ, ಸರ್ಕಾರ ಸತ್ತು ಹೋಗಿದೆ ಎಂದು ಹೇಳುವ ಯಡಿಯೂರಪ್ಪ ಡಿಕೆಶಿ ಭೇಟಿ ಪತ್ರ ಬರೆಯುತ್ತಾರೆ. ಈ ಮೂಲಕ ರಾಜಕೀಯ ಧೃವೀಕರಣ ಆಗುತ್ತೆ ಅನ್ನುವ ಸ್ಟಂಟ್ ಮಾಡುತ್ತಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.

ಅಧಿಕಾರದಲ್ಲಿದ್ದಾಗ ಜಿಲ್ಲೆಯ ಯಾವ ನದಿ ಯೋಜನೆಯನ್ನು ಅನುಷ್ಠಾನ ಮಾಡಲಿಲ್ಲ. ಈಗ ಆ ಯೋಜನೆ ಈ ಯೋಜನೆ ಅಂತ ಮಾತನಾಡುತ್ತಾರೆ. ನಮ್ಮ ಸರ್ಕಾರ ಬೀಳಿಸುವ ಮಾತಾಡುವ ಯಡಿಯೂರಪ್ಪ ಅವರಿಗೆ ಸ್ವಲ್ಪವಾದರೂ ಮಾನ ಮಾರ್ಯಾದೆ, ನಾಚಿಕೆ ಇದೆಯಾ ? ಇವರು ನಮ್ಮ ಒಬ್ಬ ಸದಸ್ಯನನ್ನು ಸೆಳೆದರೆ ಕುಮಾರಸ್ವಾಮಿ, ಡಿಕೆಶಿಗೆ ಬಿಜೆಪಿಯ 10 ಸದಸ್ಯರನ್ನು ಸೆಳೆಯುವ ತಾಕತ್ತಿದೆ” ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top