ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಹಿಂದಿನ ಎಲ್ಲ ಚಿತ್ರಗಳನ್ನೂ ಮೀರಿಸುವಂತಾ ನಿರೀಕ್ಷೆ ಕೆಜಿಎಫ್ ಚಿತ್ರದ ಮೇಲೆ ಹುಟ್ಟಿಕೊಂಡಿದೆ. ಸ್ವಲ್ಪ ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ ಟ್ರೈಲರ್ ಮೂಲಕವೇ ದೇಶಾದ್ಯಂತ ಭಾರಿ ಪ್ರಚಾರ ಪಡೆದ ಕೆಜಿಎಫ್ ಚಿತ್ರ ಮೊನ್ನೆ ಸಂಜೆ ಮೊದಲ ಹಾಡನ್ನು ಲೋಕಾರ್ಪಣೆ ಮಾಡಿದ್ದು ಹೊಸ ವಿವಾದವೊಂದನ್ನ ಸೃಷ್ಟಿಸಿದೆ.
‘ಸಲಾಮ್ ರಾಕಿ ಭಾಯ್’ ಲಿರಿಕಲ್ ಹಾಡು ರಿಲೀಸ್ ಆದ ಕೆಲ ಗಂಟೆಗಳಲ್ಲಿಯೇ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇದು 75% ಹಿಂದಿಯಲ್ಲಿರುವುದೇ ಇದಕ್ಕೆ ಕಾರಣ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಬಿಸಿ ಬಿಸಿ ಚರ್ಚೆ ಶುರುವಾಗಿದ್ದು, ಯಶ್ಗೆ ಕೆಟ್ಟ ಪದ ಬಳಕೆ ಮಾಡಿ ಕಮೆಂಟ್ ಮಾಡಿದ್ದಾರೆ. ಹಾಡಿನಲ್ಲಿರುವುದು ಒಟ್ಟು 51 ಪದಗಳು. ಈ 51 ಪದಗಳಲ್ಲಿ ಕನ್ನಡದ ಪದಗಳು ಇರುವುದು 16 ಪದಗಳು ಮಾತ್ರ. ಇಷ್ಟೆಲ್ಲ ಲೆಕ್ಕಾಚಾರವನ್ನೂ ಕನ್ನಡ ಪ್ರೇಮಿಗಳೇ ಹಾಕಿದ್ದಾರೆ ಎನ್ನುವುದು ವಿಶೇಷ.
And to a very few who r talking abt the hindi lyrics in d song, once u see the movie and the placement of the song in the movie, u will understand y the usage of hindi. Till then cheers 👍😊
— Karthik Gowda (@Karthik1423) December 4, 2018
ಟೀಕಾಕಾರರಿಗೆ ನಗುತ್ತಲೇ ಉತ್ತರಿಸಿರುವ ಕಾರ್ತಿಕ್ ಗೌಡ:
‘ಸಲಾಂ ರಾಕಿಂಗ್ ಭಾಯ್’ ಹಾಡಿನ ಸಾಹಿತ್ಯದ ಕುರಿತು ಕೇಳಿ ಬರುತ್ತಿರುವ ವಿರೋಧಕ್ಕೆ ಚಿತ್ರ ತಂಡ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿರುವ ನಿರ್ಮಾಪಕ, ವಿತರಕ ಕಾರ್ತೀಕ ಗೌಡ ಅವರು, ‘ಸಲಾಂ ರಾಕಿ ಭಾಯ್ ಹಾಡಿಗೆ ಕೆಲವೇ ಕೆಲವರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಡಿನಲ್ಲಿನ ಹಿಂದಿ ಸಾಹಿತ್ಯ ಚಿತ್ರದ ಕಥಾ ಹಂದರದ ಭಾಗವಾಗಿದೆ. ಹೀಗಾಗಿ ಚಿತ್ರವನ್ನು ನೋಡಿದಾಗ ಈ ಹಾಡಿನಲ್ಲಿ ಹಿಂದಿ ಭಾಷೆ ಏಕೆ ಬಳಸಲಾಗಿದೆ ಎಂದು ತಿಳಿಯುತ್ತದೆ ಎಂದು ಹೇಳಿದ್ದಾರೆ.
ತಮಿಳಿಗಿರುವ ಭಯ ಕನ್ನಡಕ್ಕಿಲ್ಲವೇ?
ಕನ್ನಡದಲ್ಲಿ ಹಿಂದಿಯನ್ನೇ ಹೆಚ್ಚಾಗಿ ಹಾಡು ತುರುಕಿದ್ದು, ತಮಿಳಿನಲ್ಲಿ ಇದೇ ಹಾಡಿನ ಸಾಹಿತ್ಯದಲ್ಲಿ ಒಂದೂ ಹಿಂದಿ ಪದ ಬಳಕೆಯಾಗಿಲ್ಲ. ಆದರೆ ಕನ್ನಡದಲ್ಲಿ ಮಾತ್ರ ಏಕೆ ಹಿಂದೆ ಹೇರಿಕೆ? ಎಂಬುದು ಟ್ರೋಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳು ಭಾಷೆಯ ಮೇಲಿರುವ ಭಯ ಭಕ್ತಿ ಕನ್ನಡದ ಮೇಲೆ ಯಾಕಿಲ್ಲ ಎಂದು ಖಾರವಾಗಿ ಬರೆದುಕೊಂಡಿದ್ದಾರೆ.
ಹಾಡಿಗೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಮಿಶ್ರ ಪ್ರತಿಕ್ರಿಯೆಗಳ ಹೊರತಾಗಿಯೂ ‘ರಾಕಿ ಭಾಯ್’ ಕೇವಲ 13 ಗಂಟೆಗಳಲ್ಲಿ ಒಂದು ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದಾನೆ. ಕನ್ನಡದ ಹಾಡೊಂದು ಯೂಟ್ಯೂಬ್ ನಲ್ಲಿ ಅತಿ ಕಡಿಮೆ ಹೊತ್ತಿನಲ್ಲೇ ಒಂದು ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿರುವುದು ಇದೆ ಮೊದಲಾಗಿದೆ. ಉಳಿದಂತೆ ಉಳಿದ ಭಾಷೆಗಳ ಹಾಡಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
